ಪಾಕಿಸ್ತಾನ್ ನ್ಯಾಷನಲ್ ಅಸೆಂಬ್ಲಿ ನಿರ್ಧಾರವನ್ನು ಸ್ಪಷ್ಟವಾಗಿ ನಿರಾಕರಿಸಿದ ಭಾರತ
ಪಾಕಿಸ್ತಾನವು ತನ್ನ ವಿವಿಧ ಸಂಸ್ಥೆಗಳ ನಡುವೆಯೇ ಭಿನ್ನಾಭಿಪ್ರಾಯವನ್ನು ಹೊಂದಿರುವ ದೇಶವಾಗಿದೆ. ಅಲ್ಲದೆ, ಪಾಕಿಸ್ತಾನವು ಭಾರತದೊಳಗಿನ ಎಲ್ಲಾ ವಿಷಯಗಳ ಬಗ್ಗೆ ಅನಾವಶ್ಯಕವಾಗಿ ಚರ್ಚಿಸುವಂತಹ ಕೀಳು ಅಭ್ಯಾಸವನ್ನು ಬೆಳೆಸಿಕೊಂಡಿದೆ. ಭಾರತದಲ್ಲಿ ಈಗ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಆಗಿ ಮಾರ್ಪಟ್ಟಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಭಾರತೀಯ ಸಂಸತ್ತು ಅಂಗೀಕಾರ ಮಾಡುತ್ತಿದ್ದಂತೆ, ಅಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿತು. ಇದು ಭಾರತದ ಆಂತರಿಕ ವಿಷಯವಾದುದರಿಂದ ಈ ಬಗ್ಗೆ ನಿಲುವು ತೆಗೆದುಕೊಳ್ಳಲು ಇಸ್ಲಾಮಾಬಾದ್ ಅಥವಾ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ಈ ವಿಷಯದಲ್ಲಿ ಬೇರೆ ಯಾವುದೇ ದೇಶವು ಕೂಡ ಯಾವುದೇ ನಿಲುವನ್ನು ಹೊಂದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯು ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಕಿರುಕುಳಕ್ಕೊಳಗಾಗಿರುವ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡುವ ಉದ್ದೇಶದೊಂದಿಗೆ ರೂಪುಗೊಂಡಿದೆ.
ಭಾರತ ಪೌರತ್ವ ತಿದ್ದುಪಡಿ ಕಾಯಿದೆ ತಂದ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ಕೋಲಾಹಲವೇ ಸೃಷ್ಟಿಯಾಗಿದ್ದು ಇಸ್ಲಾಮಾಬಾದ್ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ವಿಚಾರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಚಿಕೆ ಪಡುವಂತಾಗಿದೆ. ತನ್ನ ದೇಶದ ಅಲ್ಪಸಂಖ್ಯಾತ ಜನರನ್ನು ನಿಭಾಯಿಸುವ ವಿಷಯದಲ್ಲಿ ಪಾಕಿಸ್ತಾನವು ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿದೆ. ಭಯದಿಂದ ಬದುಕುತ್ತಿರುವ ತನ್ನ ನಾಗರಿಕರನ್ನು ರಕ್ಷಿಸುವುದು ಆ ದೇಶದ ಕರ್ತವ್ಯವಾಗಿದೆ. ಧರ್ಮನಿಂದನೆಯ ಆರೋಪದ ಎದುರಿಸುತ್ತಿದ್ದ ಕ್ರಿಶ್ಚಿಯನ್ ಮಹಿಳೆ ಆಸಿಯಾ ಬೀಬಿ ಪರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಇಡೀ ದೇಶದ ಮೂಲಭೂತವಾದಿಗಳು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಈಗ ಜಗತ್ತಿಗೇ ತಿಳಿದಿರುವ ವಿಷಯವಾಗಿದೆ. ಘಟನೆಯ ಬಳಿಕ ಆಸಿಯಾ ಬೀಬಿ, ಅವರ ಕುಟುಂಬ ಹಾಗೂ ವಕೀಲರು ಪಾಕಿಸ್ತಾನದಿಂದಲೇ ಪಲಾಯನವಾಗಿ ವಿದೇಶದಲ್ಲಿ ಆಶ್ರಯ ಪಡೆಯಬೇಕಾಯಿತು.
ಪಾಕಿಸ್ತಾನವು ಈಗ ತನ್ನನ್ನು ಅಲ್ಪಸಂಖ್ಯಾತ ಸಮುದಾಯಗಳ ಸ್ನೇಹಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಸ್ವಲ್ಪ ಆತ್ಮಮಾವಲೋಕನ ಮಾಡಿಕೊಳ್ಳಬೇಕು. ಪಾಕಿಸ್ತಾನ ಮುಸ್ಲಿಂ ಲೀಗ್ ಸ್ಥಾಪಕ ಸದಸ್ಯ ಹಾಗೂ ಪಾಕಿಸ್ತಾನದ ಮೊದಲ ಕಾನೂನು ಮತ್ತು ಕಾರ್ಮಿಕ ಸಚಿವರಾಗಿದ್ದ ಜೋಗೇಂದ್ರ ನಾಥ್ ಮಂಡಲ್ ಬೇರೆರಾರೂ ಅಲ್ಲ, 1950ರ ದಶಕದಲ್ಲಿ ಹೊಸದಾಗಿ ಹುಟ್ಟಿದ ಪಾಕಿಸ್ತಾನವು ಅಲ್ಪಸಂಖ್ಯಾತರ ವಿಷಯದಲ್ಲಿ ಕೆಟ್ಟದಾಗಿ ನಡೆದುಕೊಂಡ ಕಾರಣದಿಂದ ಅವರು ಅಲ್ಲಿಂದ ಪಲಾಯನ ಮಾಡಬೇಕಾಯಿತು. ಇದಾದ ಬಳಿಕ ಮಂಡಲ್ ತಮ್ಮ ಪಾಕಿಸ್ತಾನದ ಪೌರತ್ವವನ್ನು ತ್ಯಜಿಸಿ ಕೋಲ್ಕತ್ತಾದ ಹೊರವಲಯದಲ್ಲಿ ಆಶ್ರಯ ಪಡೆದುಕೊಂಡರು.
ಮಾಜಿ ಪ್ರಧಾನ ಮಂತ್ರಿ ಜುಲ್ಫಿಕರ್ ಅಲಿ ಭುಟ್ಟೊ ಅವರಿಗೆ ಮರಣದಂಡನೆ ವಿಧಿಸಿದ ನ್ಯಾಯಪೀಠದಲ್ಲಿ ಭಿನ್ನ ತೀರ್ಪು ಪ್ರಕಟಿಸಿದ್ದ ಏಕೈಕ ನ್ಯಾಯಮೂರ್ತಿ ಹಾಗೂ ಪಾಕಿಸ್ತಾನದ ಪುತ್ರ ಜಸ್ಟ್ರಾಸ್ಟ್ರಿಯನ್ (ಪಾರ್ಸಿ), ಜಸ್ಟೀಸ್ ಡೋರಾಬ್ ಪಟೇಲ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ತಪ್ಪಿಸಲಾಯಿತು. ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಜನಕ ಎಂದೇ ಖ್ಯಾತರಾಗಿರುವ ಡಾ ಎ.ಕ್ಯೂ. ಖಾನ್ ಅವರು ‘ಅಹಮದಿಯಾ’ ಪಂಥಕ್ಕೆ ಸೇರಿದವರಾಗಿದ್ದರು ಎಂಬ ಕಾರಣಕ್ಕೆ ಅವರಿಗೂ ತಾರತಮ್ಯ ಮಾಡಲಾಯಿತು. ಈ ರೀತಿಯ ಅನೇಕ ಉದಾಹರಣೆಗಳಿವೆ.
ಸಂಪೂರ್ಣವಾಗಿ ಭಾರತದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ್ ನ್ಯಾಷನಲ್ ಅಸೆಂಬ್ಲಿ ತೆಗೆದುಕೊಂಡ ನಿರ್ಣಯವನ್ನು ಭಾರತ ಖಡಕ್ಕಾಗಿ ತಿರಸ್ಕರಿಸಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ವಿಷಯದ ಬಗ್ಗೆ ಪಾಕಿಸ್ತಾನವು ಸುಳ್ಳು ಮಾಹಿತಿಗಳನ್ನು ಹರಡುತ್ತಾ ಸತ್ಯ ಸಂಗತಿಯನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಭಾರತದ ಗಡಿಯೊಳಗೆ ಭಯೋತ್ಪಾದನಾ ಚಟುವಟಿಕೆ ನಡೆಸಲು ಪಾಕಿಸ್ತಾನವು ನಿರಂತರವಾಗಿ ಬೆಂಬಲ ನೀಡುತ್ತಿದೆ. ಇತ್ತೀಚಿನ ಪಾಕಿಸ್ತಾನದ ನಡೆಗಳೇ ಭಾರತದ ಆರೋಪವನ್ನು ಸಮರ್ಥಿಸುತ್ತಿವೆ. ಆದರೆ ಪಾಕಿಸ್ತಾನದ ಈ ಪ್ರಯತ್ನಗಳು ವಿಫಲವಾಗುತ್ತವೆ ಎಂಬುದು ನವದೆಹಲಿಯ ವಿಶ್ವಾಸವಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಅಭಿಪ್ರಾಯಪಟ್ಟಿದೆ.
ತನ್ನ ದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪಾಕಿಸ್ತಾನವು ಭಯಂಕರ ಕಿರುಕುಳ ನೀಡುತ್ತಿದೆ. ಈ ವಿಷಯದಿಂದ ಬೇರೆಡೆಗೆ ಗಮನ ಸೆಳೆಯಲು ಈಗ ಈ ರೀತಿಯ ಕೀಳು ಮಟ್ಟದ ತಂತ್ರಗಳನ್ನು ಅನುಸರಿಸುತ್ತಿದೆ. ಪಾಕಿಸ್ತಾನದಲ್ಲಿ ಇರುವ ಹಿಂದೂ, ಕ್ರಿಶ್ಚಿಯನ್, ಸಿಖ್ ಅಥವಾ ಇತರೇ ಧರ್ಮದ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಆಗುತ್ತಿರುವ ಬೆಳವಣಿಗೆಯೇ ಆ ದೇಶದ ನಿಲುವು ಎಂಥದ್ದು ಎಂಬುದನ್ನು ತಿಳಿಸಿಕೊಡುತ್ತದೆ ಎಂದು ಭಾರತ ಹೇಳಿದೆ.
ಪಾಕಿಸ್ತಾನ ತೆಗೆದುಕೊಂಡಿರುವ ನಿರ್ಣಯವು ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ 2019ರ ಆಶಯವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನಿರೂಪಿಸುತ್ತಿದೆ. ಆಯ್ದ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತ ವಿದೇಶಿಯರಿಗೆ ಈ ಕಾಯಿದೆಯ ಮೂಲಕ ಪೌರತ್ವವನ್ನು ನೀಡಲಾಗುತ್ತದೆ. ದೇಶದಲ್ಲಿರುವ ಆಕೆಯ ಅಥವಾ ಅವನ ನಂಬಿಕೆಗಳನ್ನು ನಗಣ್ಯ ಮಾಡಿ ಯಾವುದೇ ವ್ಯಕ್ತಿಯ ಪೌರತ್ವವನ್ನು ಈ ಕಾಯಿದೆಯು ಅಪೋಶನ ತೆಗೆದುಕೊಳ್ಳುವುದಿಲ್ಲ.
ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ತೆಳೆದು ಶಾಸನವನ್ನು ಅಂಗೀಕರಿಸಿರುವ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಈಗ ಬೇರೆ ದೇಶದ ಕಡೆ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಬೇರೆಯವರನ್ನು ತಪ್ಪಿತಸ್ಥರೆಂದು ದೂರುವ ಪಾಕಿಸ್ತಾನವು ತನ್ನ ತಪ್ಪೇನು ಎಂಬ ಬಗ್ಗೆ ಗಂಭೀರವಾದ ಸ್ವ-ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಭಾರತವು ಕರೆ ನೀಡಿದೆ.
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಭಾರತದ ಈವರೆಗಿನ ಎಲ್ಲಾ ಸರ್ಕಾರಗಳು ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ಆಯ್ಕೆಯಾಗಿವೆ ಹಾಗೂ ಹಲವು ನಂಬಿಕೆಗಳ ಹೊರತಾಗಿಯೂ ಎಲ್ಲಾ ಭಾರತೀಯರು ಸಂವಿಧಾನದ ಅಡಿಯಲ್ಲಿ ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಪಾಕಿಸ್ತಾನವು ನೆನಪಿಟ್ಟುಕೊಳ್ಳುವುದು ಉತ್ತಮ. ಈ ಉದಾತ್ತ ಆದರ್ಶಗಳನ್ನು ಪಾಕಿಸ್ತಾನ ಕೂಡ ಪಾಲಿಸಬೇಕೆಂದು ವಿದೇಶಾಂಗ ಸಚಿವಾಲಯದ ಹೇಳಿಕೆ ಮೂಲಕ ಭಾರತ ಒತ್ತಾಯಿಸಿದೆ.
ಪ್ರಾಸಂಗಿಕವಾಗಿ, ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪಾಕಿಸ್ತಾನ್ ನ್ಯಾಷನಲ್ ಅಸೆಂಬ್ಲಿ ಚರ್ಚೆ ಮಾಡಿರುವುದು ಅಲ್ಲಿನ ಮಾಜಿ ರಾಷ್ಟ್ರಪತಿ ಜನರಲ್ ಪರ್ವೇಜ್ ಮುಷರಫ್ ಅವರಿಗೆ ಪೇಶಾವರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಾಕರ್ ಅಹ್ಮದ್ ಸೇಠ್ ನೇತೃತ್ವದ ವಿಶೇಷ ನ್ಯಾಯಾಲಯವು ದೇಶದ್ರೋಹದ ಆರೋಪದ ಮೇರೆಗೆ ಮರಣದಂಡನೆ ವಿಧಿಸಿದ ದಿನ. ದೇಶಭ್ರಷ್ಟರಾಗಿರುವ ಪರ್ವೇಜ್ ಮುಷರಫ್ ಪ್ರಸ್ತುತ ದುಬೈನಲ್ಲಿ ವಾಸ ಮಾಡುತ್ತಿದ್ದಾರೆ. ಮುಷರಫ್ ನಿಷ್ಠಾವಂತ ಪಾಕಿಸ್ತಾನಿ ಎಂದು ಹೇಳುವ ಮೂಲಕ ಪಾಕಿಸ್ತಾನ ಸೇನೆಯು ತೀರ್ಪಿಗೆ ತ್ವರಿತ ಸ್ಪಂದನೆ ಮಾಡಿತು.
ಹೀಗಾಗಿ, ಪಾಕಿಸ್ತಾನವು ವಿವಿಧ ಶಸ್ತ್ರಾಸ್ತ್ರಗಳನ್ನೊಳಗೊಂಡ ಏಕವ್ಯಕ್ತಿ ಸೋಪ್-ಒಪೆರಾದಂತೆ ಮುಂದುವರಿಯುತ್ತಿರುವ ದೇಶವಾಗಿದೆ.
ಸ್ಕ್ರಿಪ್ಟ್: ಕೌಶಿಕ್ ರಾಯ್, ಎಐಆರ್ ಸುದ್ದಿ ವಿಶ್ಲೇಷಕ,
Comments
Post a Comment