ಆರ್ಥಿಕತೆ ವಿಸ್ತರಣೆಯ ಪಥದಲ್ಲಿ - ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಆರ್ಥಿಕತೆಯು ವಿಸ್ತರಣೆಯ ಪಥದಲ್ಲಿದೆ ಎಂದು ಒತ್ತಿ ಹೇಳಿದ್ದಾರೆ. GDPಯ (ಸರಕು ಮತ್ತು ಸೇವಾ ದರ) ಬೆಳವಣಿಗೆಯ ಹಿನ್ನಡೆಯ ಸಂದರ್ಭದಲ್ಲಿ ಸರ್ಕಾರ ಭಾರತೀಯ ಆರ್ಥಿಕತೆಯನ್ನು ಐದು ವರ್ಷದಲ್ಲಿ ಐದು ಟ್ರಿಲಿಯನ್ ಡಾಲರ್ ವಿಸ್ತರಿಸುವುದಕ್ಕೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ.

ಸರಕಾರದ ಆರ್ಥಿಕ ನೀತಿಯ ಬಗ್ಗೆ ಈಗಾಗಲೇ ಹಲವಾರು ಆರೋಗ್ಯವರ್ಧಕ ಹೆಜ್ಜೆಗಳನ್ನು ಇಟ್ಟಿದೆಯೆಂದು ಪ್ರಧಾನ ಮಂತ್ರಿಯವರು ಅವರ ನಿಸ್ಸಂದಿಗ್ಧ ಪುನರಾವರ್ತನೆಯಲ್ಲಿ ತಿಳಿಸಿದರು. ಅದು ಮುಂದಿನ ವರ್ಷಗಳಲ್ಲಿ ಪ್ರತಿಫಲವನ್ನು ನೀಡಲಿದೆ ಎಂದು ಪುನರುಚ್ಚರಿಸಿದರು.

ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಇಂಡಿಯನ್ ಇಂಡಸ್ಟ್ರಿ ಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಮಾತನಾಡುತ್ತಾ ಭಾರತೀಯ ಆರ್ಥಿಕ ನೀತಿ ಸಂಕುಚಿತಗೊಳ್ಳುತ್ತಿದೆ ಎಂಬ ತಪ್ಪು ಭಾವನೆಯನ್ನು ತಳ್ಳಿಹಾಕಿದರು.

GDPಯಾ ಬೆಳವಣಿಗೆ ದರ ಕುಸಿಯುತ್ತಿರುವ ಬಗ್ಗೆ ಹಿಂದಿನ ಹಲವು ತ್ರೈಮಾಸಿಕಗಳಲ್ಲಿ ಬಹಳ ಹೇಳಿಕೆಗಳಿವೆ. ಜಾಗತಿಕ ಆರ್ಥಿಕತೆ ಹಿನ್ನಡೆಯ ಹಿನ್ನೆಲೆಯೂ ಇದಕ್ಕೆ ಕಾರಣವಾಗಿರಬಹುದು. ಅಮೇರಿಕ ಮತ್ತು ಚೀನಾಗಳ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರವು ಭಾರತೀಯ ಆರ್ಥಿಕತೆಯ ಮೇಲೆ ನಿಸ್ಸಂದೇಹವಾಗಿ ಪರಿಣಾಮವಾಗಿದೆ.

ಕೆಟ್ಟ ಸಾಲಗಳಿಂದ ಆವೃತಗೊಂಡ ಆರ್ಥಿಕತೆಯನ್ನು ಪ್ರಧಾನ ಮಂತ್ರಿ ಮೋದಿಯವರು ಅಧಿಕಾರ ವಹಿಸಿಕೊಳ್ಳುವಾಗ ಬಳುವಳಿಯಾಗಿ ಪಡೆದಿದ್ದನ್ನು ಅಲ್ಲಗಳೆಯುವಂತಿಲ್ಲ.

ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸದ ಸ್ವತ್ತುಗಳ (NPA) ಜೊತೆಗೆ ಹೋರಾಡುತ್ತಿದ್ದವು. ಅಂತಹ ಬ್ಯಾಂಕಿಂಗ್ ಸಂಸ್ಥೆಗಳು ಕೈಗಾರಿಕೆಗಳಿಗೆ ಸಾಲವನ್ನು ನೀಡಲು ಕಷ್ಟ ಪಡುತ್ತಿದ್ದುದರಿಂದ, ಆರ್ಥಿಕತೆಯ ವಿಸ್ತಾರಕ್ಕೆ ಸ್ಥಳಾವಕಾಶ ಕುಗ್ಗುತಿದೆ ಎನ್ನುವುದು ಸಾಬೀತಾಯಿತು. ಸಾರ್ವಜನಿಕವಲಯದ ಬ್ಯಾಂಕಿಂಗ್ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವುದು ಸರಕಾರದ ಪ್ರಮುಖ ಆದ್ಯತೆ ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕ್ ನ ಮೇಲ್ವಿಚಾರಣೆಗೆ ಒಳಪಟ್ಟ ಅರ್ಧ ಡಜನ್ ಗೂ ಹೆಚ್ಚಾದ ಸಾರ್ವಜನಿಕ ಬ್ಯಾಂಕಿಂಗ್ ಸಂಸ್ಥೆಗಳು ಇಂತಹ ತೊಂದರೆಗಳಿಂದ ಹೊರಬಂದಿವೆ ಎಂದು ಪ್ರಧಾನಿ ಮೋದಿಯವರು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ NDA ಸರಕಾರ ಮಾಡಿದ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆಗಳ ವಿಲೀನ ಪ್ರಕ್ರಿಯೆಯಿಂದ ಬ್ಯಾಂಕಿಂಗ್ ವಲಯದಲ್ಲಿ ದೊಡ್ಡ ಸ್ಪರ್ಧೆಯನ್ನು ಎದುರಿಸಲು ಅವು ಈಗ ಶಕ್ತವಾಗಿವೆ ಎಂಬುದು ಸತ್ಯ.

ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಇಂಡಿಯನ್ ಇಂಡಸ್ಟ್ರಿಯಾ ಸಭೆಯಲ್ಲಿ ಪ್ರಧಾನಿ ಮೋದಿಯವರು ದೀರ್ಘವಾಗಿ ಮಾತನಾಡುತ್ತಾ. ಬ್ಯಾಂಕಿಂಗ್ ಕ್ಷೇತ್ರಗಳು ನೀಡಿದ ಕೆಟ್ಟ ಸಾಲಗಳ ಪರಿಣಾಮವಾಗಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಮತ್ತೆ ಸಾಲ ನೀಡುವ ಶಕ್ತಿ ಕಡಿಮೆಯಾಗುತ್ತಿದೆ. ಇದರಿಂದ ಆರ್ಥಿಕತೆಗೆ ಅಪಾಯವಾಗಬಹುದು ಎಂದು ನುಡಿದರು. ಅನೇಕ ಕಾರ್ಪೊರೇಟ್ ಘಟಕಗಳು ಸಾಲ ಮರುಪಾವತಿಯನ್ನು ಮಾಡಿದಿರುವ ಕಾರಣ ಹಣಕಾಸಿನ ವಲಯವನ್ನು ದುರ್ಬಲಗೊಳಿಸಿದೆ ಎನ್ನುವುದೂ ಸತ್ಯ ಎಂದು ನುಡಿದರು.

Essar ಸ್ಟೀಲ್ ನ ಯಶಸ್ವಿ ನಿರ್ಣಯದಿಂದ, ದಿವಾಳಿತನದ ಪ್ರಕ್ರಿಯೆ ಅತಿ ಅವಶ್ಯಕವಾದ ಪರಿಹಾರವನ್ನು ಬ್ಯಾಂಕಿಂಗ್ ಸಂಸ್ಥೆಗಳಿಗೆ ನೀಡುತ್ತದೆ ಎಂಬುದು ಖಚಿತವಾಗಿದೆ. ಪ್ರಧಾನಿ ಮೋದಿಯವರು ಅವರ ಸರಕಾರ ತೆಗೆದುಕೊಂಡ ಕ್ರಮಗಳು ಈಗ ಫಲಿತಾಂಶವನ್ನು ನೀಡುತ್ತಿವೆ ಎಂದು ಹೇಳಿದರು. 2014ರಲ್ಲಿ ಅವರು ಅಧಿಕಾರ ಸ್ವೀಕರಿಸಿದಾಗ ಭಾರತೀಯ ಆರ್ಥಿಕತೆ ವಿಕೋಪ ಸ್ಥಿತಿಯತ್ತ ಸಾಗುತ್ತಿತ್ತು ಎಂದು ಹೇಳುತ್ತಾ, ನಾವು ಆರ್ಥಿಕತೆಯನ್ನು ಸ್ಥಿರಗೊಳಿಸಿದ್ದೀವಿ ಮತ್ತು ಅವಶ್ಯಕವಾದ ಶಿಸ್ತನ್ನು ತಂದಿದ್ದೇವೆ ಎಂದು ನುಡಿದರು. ಉದ್ಯಮಗಳಲ್ಲಿ ದೀರ್ಘಾವಧಿಯಿಂದ ಉಳಿದಂತಹ ಬೇಡಿಕೆಗಳ ಬಗ್ಗೆ ಸರಕಾರ ಗಮನ ನೀಡಿದೆ ಎಂದೂ ಅವರು ಹೇಳಿದರು.

ಪ್ರಧಾನಮಂತ್ರಿಯವರು ಸರಕಾರ ಭಾರತೀಯ ಉದ್ಯಮಗಳ ಅಹವಾಲನ್ನು ಗಮನಿಸಿದೆ. ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿರುವುದೇ ಇದಕ್ಕೆ ನಿದರ್ಶನ ಎಂದು ಹೇಳಿದರು. ಆರ್ಥಿಕತೆಯಲ್ಲಿ ಪಾರದರ್ಶಕತೆಯನ್ನು ತರಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಉಲ್ಲೇಖಿಸಿದರು. GSTಯನ್ನು ಅನುಷ್ಠಾನಗೊಳಿಸಿದ್ದು ಸಹ, ತೆರಿಗೆಯಲ್ಲಿ ಪಾರದರ್ಶಕತೆ ತರುವುದರ ಕಡೆಗಿನ ಒಂದು ಹೆಜ್ಜೆ ಎಂದು ಹೇಳಿದರು.

2014 ರಲ್ಲಿ ಸುಲಲಿತ ವ್ಯಾಪಾರ ವಹಿವಾಟು ಮಾಡುವಲ್ಲಿ ಭಾರತದ ಶ್ರೇಯಾಂಕವು 190 ದೇಶಗಳಲ್ಲಿ 142ನೇ ಸ್ಥಾನದಲ್ಲಿತ್ತು ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಈಗ ಭಾರತವು 63ನೇ ಶ್ರೇಯಾಂಕವನ್ನು ಸಾಧಿಸಿದೆ ಎಂಬುದು ಖಂಡಿತವಾಗಿಯೂ, ಪಾರದರ್ಶಕತೆ ಮತ್ತು ಹೂಡಿಕೆ ಪ್ರಸ್ತಾಪಗಳಿಗೆ ತ್ವರಿತ ಅನುಮೋದನೆಯನ್ನು ತರಲು, ಸರ್ಕಾರದ ಪ್ರಯತ್ನಗಳ ಬಗ್ಗೆ ಸಾಕಷ್ಟು ಹೇಳುತ್ತದೆ. ಪ್ರಧಾನಿ ಮುಂದುವರೆದು, ಕಾರ್ಮಿಕ ಸುಧಾರಣೆಗಳಿಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದೂ ತಿಳಿಸಿದರು. ಇದರಲ್ಲಿ ಉದ್ಯಮವು ಬಯಸಿದ ಕಾರ್ಮಿಕ ಕಾನೂನುಗಳ ಕ್ರೋಡೀಕರಣವೂ ಒಳಗೊಂಡಿದೆ.

ದಿವಾಳಿತನ ಮತ್ತು ದಿವಾಳಿತನ ಸಂಹಿತೆಗೆ (IBC) ಇನ್ನಷ್ಟು ತಿದ್ದುಪಡಿಗಳು ತಂದಿರುವುದು, ಸರ್ಕಾರವು ಬ್ಯಾಂಕುಗಳ ಮತ್ತು ಕೈಗಾರಿಕೆಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಕ್ರಮಗಳು ಆರ್ಥಿಕತೆಗೆ ಪ್ರಚೋದನೆಯನ್ನು ನೀಡುತ್ತದೆ.

ಆರ್ಥಿಕತೆಯನ್ನು ಐದು ಟ್ರಿಲಿಯನ್ ಮಟ್ಟಕ್ಕೆ ವಿಸ್ತರಿಸುವ ಗುರಿ ಹೆಚ್ಚು ಚಿಂತನಶೀಲವಾಗಿದೆ ಮತ್ತು ತಲುಪಲು ಸಾಧ್ಯವಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ತಮ್ಮ ಸರ್ಕಾರ ನಿಗದಿಪಡಿಸಿದ ಗುರಿಗಳನ್ನು ಸಾಧಿಸಬಹುದು ಎಂದು ಈ ಹಿಂದೆ ಪ್ರಧಾನಿ ತೋರಿಸಿಕೊಟ್ಟಿದ್ದಾರೆ. ‘ಸ್ವಚ್ ಭಾರತ್’ (ಕ್ಲೀನ್ ಇಂಡಿಯಾ) ಅಭಿಯಾನವು ಸರ್ಕಾರದ ಗುರಿ-ಆಧಾರಿತ ವಿಧಾನಕ್ಕೆ ನಿಜವಾದ ಸಾಕ್ಷಿಯಾಗಿದೆ.
ಲೇಖನ: ಹಿರಿಯ ವಿಶೇಷ ವರದಿಗಾರ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ