ಬಲವಾದ ಭಾರತ ಮತ್ತು ಓಮನ್ ಕಾರ್ಯತಂತ್ರದ ಒಪ್ಪಂದಗಳು
ಓಮನ್ ದೇಶವು ತನ್ನ ದೊಡ್ಡ ಹಾಗೂ ಹೆಚ್ಚು ಶ್ರೀಮಂತ ನೆರೆಹೊರೆಯ ದೇಶಗಳಿಗೆ ಹೋಲಿಸಿಕೊಂಡರೆ ಕಡಿಮೆ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ಗಮನವನ್ನು ಸೆಳೆಯುತ್ತದೆ; ಆದರೆ ಇದು ಭಾರತದ ನೆರೆಹೊರೆಯಲ್ಲಿ ಪರ್ಷಿಯನ್ ಕೊಲ್ಲಿಗೆ ಹೊಂದಿಕೊಂಡಂತಿರುವ ತನ್ನ ಕಾರ್ಯತಂತ್ರದ ಸ್ಥಳವನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಬಹಳ ವರ್ಷಗಳವರೆಗೆ ಆಂತರಿಕ ಅಡಚಣೆಗಳು ಹಾಗೂ ಆರ್ಥಿಕ ಅಭಿವೃದ್ಧಿಯ ಕೊರತೆಯಿಂದಾಗಿ ಬಳಲುತ್ತಿದ್ದ ಈ ದೇಶವು ಸುಲ್ತಾನ್ ಕಬೂಸ್ ಅವರ ನಾಯಕತ್ವದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡಿದೆ. ಸುಲ್ತಾನ್ ಅವರು 1970ರಿಂದ ಓಮನ್ ದೇಶವನ್ನು ಮುನ್ನಡೆಸುತ್ತಿದ್ದಾರೆ. ಜನರ ಕಲ್ಯಾಣಕ್ಕಾಗಿ ತೈಲ ಸಂಪತ್ತನ್ನು ಆದಾಯ ಮೂಲವಾಗಿಸಿದ ಪರಿಣಾಮ ಆರ್ಥಿಕ ಪ್ರಗತಿಯಾಗಿದೆ ಮತ್ತು ದೇಶ ಸಮೃದ್ಧ ಗೊಂಡಿದೆ. ಸುಲ್ತಾನ್ ಕಬೂಸ್ ಅವರ ನಾಯಕತ್ವದಲ್ಲಿ ಒಮಾನ್ ತನ್ನ ನೆರೆಹೊರೆಯ ದೇಶಗಳೊಂದಿಗೆ ಸಮತೋಲಿತ ಸಂಬಂಧವನ್ನು ಉಳಿಸಿಕೊಂಡಿದೆ. ಹಾಗೂ ಸಮಸ್ಯೆ ಇದ್ದ ಕೊಲ್ಲಿ ಪ್ರದೇಶದಲ್ಲಿ ಪ್ರಮುಖ ಪ್ರಾದೇಶಿಕ ಪಾತ್ರವನ್ನು ವಹಿಸುತ್ತಿದೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಹರಡುವುದನ್ನು ತಡೆಯಲು ಹಾಗೂ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಾಜತಾಂತ್ರಿಕ ಮಾರ್ಗವನ್ನು ಒದಗಿಸುವಲ್ಲಿಯೂ ಕೂಡ ಒಮಾನ್ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂಬುದು ಗಮನಾರ್ಹವಾದ ವಿಷಯವಾಗಿದೆ.
ಒಮಾನ್ ದೇಶದ ಮಹತ್ವವನ್ನು ಭಾರತ ಗುರುತಿಸಿದೆ. ಹಾಗೂ ಕಳೆದ ಕೆಲವು ದಶಕಗಳಲ್ಲಿ ಓಮನ್ ದೇಶದೊಂದಿಗೆ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ರಾಜಕೀಯ ಹಾಗೂ ರಾಜತಾಂತ್ರಿಕ ಪ್ರಭಾವದ ಆದ್ಯತೆಯ ರಾಷ್ಟ್ರಗಳಲ್ಲಿ ಕೊಲ್ಲಿ ರಾಷ್ಟ್ರ ಓಮನ್ ಒಂದಾಗಿ ಹೊರಹೊಮ್ಮುತ್ತಿದೆ. ಒಮಾನ್ ಜೊತೆಗಿನ ರಾಜಕೀಯ, ರಾಜತಾಂತ್ರಿಕ, ವಾಣಿಜ್ಯ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಭಾರತದ ದ್ವಿಪಕ್ಷೀಯ ಸಂಬಂಧಗಳು ಒಳಗೊಂಡಿವೆ. ಓಮನ್ ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಯೂಸುಫ್ ಬಿನ್ ಅಲಾವಿ ಅವರು 2014ರ ಜೂನ್ ನಲ್ಲಿ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಅವರನ್ನು ಆಹ್ವಾನಿಸಿದ ಮೊದಲ ವಿದೇಶಿ ಗಣ್ಯರು. ಆಗಿನ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು 2015ರ ಫೆಬ್ರವರಿಯಲ್ಲಿ ಒಮಾನ್‌ಗೆ ಭೇಟಿ ನೀಡಿದ್ದರು. ಅದಾದ ಮೇಲೆ ಅಂದಿನ ಭಾರತೀಯ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು 2016ರ ಮೇ ತಿಂಗಳಲ್ಲಿ ಮಸ್ಕತ್‌ಗೆ ಭೇಟಿ ನೀಡಿದ್ದರು.
ಭಾರತ ಮತ್ತು ಓಮನ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತನಾಡುವ ದೃಷ್ಡಿಯಿಂದ 2018ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಒಮಾನ್‌ಗೆ ಭೇಟಿ ನೀಡಿದ್ದರು. ಅವರು ಸುಲ್ತಾನ್ ಕಬೂಸ್ ಅವರನ್ನು ಭೇಟಿಯಾಗಿದ್ದರು. ಇಬ್ಬರೂ ನಾಯಕರು ಪರಸ್ಪರ ಆಸಕ್ತಿಕರವಾದ ವಿವಿಧ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ವ್ಯಾಪಾರ ಹಾಗೂ ಹೂಡಿಕೆಗಳ ಮೂಲಕ ವಾಣಿಜ್ಯ ಸಂಬಂಧಗಳನ್ನು ಸುಧಾರಿಸುವುದು ಮತ್ತು ಭಯೋತ್ಪಾದನೆ ಹಾಗೂ ಉಗ್ರವಾದದಿಂದ ಪರಸ್ಪರ ಬೆದರಿಕೆಗಳನ್ನು ಎದುರಿಸಲು ಭದ್ರತಾ ಸಂಬಂಧಗಳನ್ನು ಬಲಪಡಿಸುವುದು ಇಬ್ಬರ ನಡುವೆ ನಡೆದ ಸಭೆಯ ಪ್ರಮುಖ ವಿಷಯಗಳಾಗಿದ್ದವು. ಭಾರತ ಹಾಗೂ ಒಮಾನ್ ದೇಶಗಳು ಕಡಲ ಸುರಕ್ಷತೆಯ ಕ್ಷೇತ್ರದಲ್ಲಿ ಒಂದಾಗಿ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದವು. ಹಾಗೂ ರಕ್ಷಣಾ ಕುರಿತು ದ್ವಿಪಕ್ಷೀಯ ಒಪ್ಪಂದಕ್ಕೆ ಹೆಚ್ಚುವರಿ ಒಪ್ಪಂದಕ್ಕೆ ಸಹಿ ಹಾಕಲು ಎರಡೂ ದೇಶದವರು ಸಮ್ಮತಿ ವ್ಯಕ್ತಪಡಿಸಿದರು. ಒಪ್ಪಂದಗಳ ಪ್ರಕಾರ ಭಾರತೀಯ ನೌಕಾಪಡೆಯು ತನ್ನ ನೌಕಾ ಹಡಗುಗಳ ನಿರ್ವಹಣೆಗಾಗಿ ಹಿಂದೂ ಮಹಾಸಾಗರದಲ್ಲಿ ಗಸ್ತು ತಿರುಗುವುದಕ್ಕೆ ಹಾಗೂ ಆಯಕಟ್ಟಿನ ಸ್ಥಳದಲ್ಲಿರುವ ಡುಕ್ಮ್ ಬಂದರಿನಲ್ಲಿ ಡ್ರೈ ಡಾಕ್ ಅನ್ನು ಬಳಸುವುದಕ್ಕೆ ಅನುವು ಮಾಡಿಕೊಡಲಾಗಿದೆ.
ಭಾರತ ಮತ್ತು ಓಮನ್ ದೇಶಗಳ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರದ ಸಂಬಂಧಗಳ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಈ ವಾರದ ಆರಂಭದಲ್ಲಿ ಒಮಾನ್ ದೇಶಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಜೈಶಂಕರ್ ಅಲ್ಲಿನ ಇತರ ನಾಯಕರ ಜೊತೆಗೆ ಓಮಾನಿ ವಿದೇಶಾಂಗ ವ್ಯವಹಾರಗಳ ಸಚಿವ ಯೂಸುಫ್ ಬಿನ್ ಅಲಾವಿ ಅವರನ್ನು ಭೇಟಿಯಾದರು. ಹಾಗೂ ಪರಸ್ಪರ ಆಸಕ್ತಿದಾಯಕವಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು. ಕಡಲ ಸಾರಿಗೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಎರಡೂ ದೇಶದವರು ಸಹಿ ಹಾಕಿದರು. ಇದಾದ ಬಳಿಕ ವಿದೇಶಾಂಗ ಸಚಿವ ಜೈಶಂಕರ್ ಮಸ್ಕತ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಿದರು.
ಓಮನ್ ನಲ್ಲಿ ಸುಮಾರು 7,80,000 ಭಾರತೀಯರಿದ್ದು, ಇದು ಅಲ್ಲಿನ ಅತಿದೊಡ್ಡ ವಲಸಿಗ ಸಮುದಾಯಗಳಲ್ಲಿ ಒಂದಾಗಿದೆ. ಜೊತೆಗೆ ಭಾರತೀಯರು ಒಮಾನ್ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗಮನಾರ್ಹವಾದ ಕೊಡುಗೆ ನೀಡಿದ್ದಾರೆ.
ಭಾರತವು ಒಮಾನ್ ದೇಶದ ಪ್ರಮುಖ ವಾಣಿಜ್ಯ ಪಾಲುದಾರ ರಾಷ್ಟ್ರವಾಗಿದೆ. 2018-19ರಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 5 ಬಿಲಿಯನ್ ತಲುಪಿದೆ. ಒಮಾನ್ ದೇಶದಿಂದ ಇಂಧನ ಹಾಗೂ ಮತ್ತು ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಲಿ ಭಾರತ ಕೂಡ ಒಂದು.
ಒಮಾನ್ ದೇಶವನ್ನು ಭಾರತವು ಕೊಲ್ಲಿ ರಾಷ್ಟ್ರಗಳ ಪೈಕಿ ಪ್ರಮುಖ ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತದೆ. ಹಾಗೂ ವಿದೇಶಾಂಗ ಸಚಿವಾಲಯದ ಪ್ರಕಾರ ಡಾ. ಜೈಶಂಕರ್ ಅವರ ಭೇಟಿ, ಭಾರತ ಮತ್ತು ಓಮನ್ ನಡುವೆ ರಾಜಕೀಯ ನಾಯಕತ್ವದೊಂದಿಗೆ ವ್ಯಾಪಕವಾದ ದ್ವಿಪಕ್ಷೀಯ ಸಂಬಂಧ ಕುರಿತು ಆಳವಾದ ಚರ್ಚೆ ನಡೆಸಲು ಅವಕಾಶವನ್ನು ಒದಗಿಸಿದೆ. ಪ್ರಾದೇಶಿಕ ಮಟ್ಟದ ಮತ್ತು ಜಾಗತಿಕ ಮಟ್ಟದ ಸಮಸ್ಯೆಗಳಿಂದಾಗಿ ಓಮನ್ ಹಾಗೂ ಭಾರತದ ನಡುವಿನ ಒಪ್ಪಂದಗಳು ಹೆಚ್ಚಾಗುವಂತೆ ಮಾಡಿವೆ. ಜೈ ಶಂಕರ್ ಅವರ ಈ ಉನ್ನತ ಮಟ್ಟದ ಭೇಟಿ ಒಮಾನ್ ದೇಶದ ಜೊತೆ ಭಾರತದ ರಾಜತಾಂತ್ರಿಕ ಮತ್ತು ರಾಜಕೀಯ ಪ್ರಭಾವವನ್ನು ಮತ್ತಷ್ಟು ವಿಸ್ತರಿಸುತ್ತದೆ. ಅಲ್ಲದೆ ಈ ಬೆಳವಣಿಗೆ ಭಾರತವು ಪಕ್ಕದ ರಾಷ್ಟ್ರಗಳ ಕೊಲ್ಲಿ ಪ್ರದೇಶದ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಉದ್ದೇಶಕ್ಕೆ ಪೂರಕವಾಗಿದೆ.
ಭಾರತೀಯ ವಿದೇಶಾಂಗ ಸಚಿವರ ಭೇಟಿಯು ನವದೆಹಲಿ ಹಾಗೂ ಓಮನ್ ದೇಶದ ಗಲ್ಫ್ ನಡುವೆ ಬೆಳೆಯುತ್ತಿರುವ ರಾಜಕೀಯ ಮತ್ತು ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸಲು ಭಾರತವು ಹೊಂದಿರುವ ಮಹತ್ವದ ಬಗ್ಗೆ ಸಾರಿ ಹೇಳುತ್ತದೆ.
ಸ್ಕ್ರಿಪ್ಟ್: ಡಾ. ಮೊಹದ್ ಮುದ್ದಾಸಿರ್ ಕ್ವಾಮರ್, ಪಶ್ಚಿಮ ಏಷ್ಯಾದ ಕಾರ್ಯತಂತ್ರದ ವಿಶ್ಲೇಷಕ
Comments
Post a Comment