ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆ
ರಾಷ್ಟ್ರಪತಿ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಯುದ್ಧದಿಂದ ಹಾನಿಗೊಳಗಾಗಿರುವ ಅಫ್ಘಾನಿಸ್ತಾನ ದೇಶವು ಮತ್ತೊಂದು ಮೈಲಿಗಲ್ಲನ್ನು ದಾಟಿದಂತಾಗಿದೆ. ದೇಶದಲ್ಲಿ ಈಗ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ. ಅಫ್ಘಾನಿಸ್ತಾನ
ಹಾಲಿ ಅಧ್ಯಕ್ಷ ಅಶ್ರಫ್ ಘನಿ ಅವರು ಮರು ಆಯ್ಕೆ ಆಗಿರುವುದನ್ನು ಅಲ್ಲಿನ ಸ್ವತಂತ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಅಶ್ರಫ್ ಘನಿ ಅವರು ಶೇಕಡಾ 50.46ರಷ್ಟು ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಅಶ್ರಫ್ ಘನಿ ಅವರ ಪ್ರತಿಸ್ಪರ್ಧಿ ಮಾಜಿ ವಿದೇಶಾಂಗ ಸಚಿವ ಡಾ. ಅಬ್ದುಲ್ಲಾ ಅಬ್ದುಲ್ಲಾ 2,00,000ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ನಾಗರಿಕ ಆಡಳಿತದ ಪ್ರಾಬಲ್ಯವನ್ನು ಸ್ಥಾಪಿಸಲು ಪಡಿಪಾಟಲು ಪಡುತ್ತಿರುವ ದೇಶದಲ್ಲಿ ತಾಲಿಬಾನಿನ ಬುದ್ದಿಹೀನ ಅಫ್ಘಾನಿಸ್ತಾನಿಯರು ಹಿಂಸಾಚಾರ ನಡೆಸುತ್ತಿರುವುದರ ನಡುವೆಯೂ ಚುನಾವಣಾ ವಂಚನೆಯ ಸಾಧ್ಯತೆಗಳನ್ನು ನಿವಾರಿಸುವಲ್ಲಿ ಅಫ್ಘಾನಿಸ್ತಾನದ ಸ್ವತಂತ್ರ ಚುನಾವಣಾ ಆಯೋಗವು ಸಾಕಷ್ಟು ಸೂಕ್ಷ್ಮವಾಗಿ ವರ್ತಿಸಿದೆ. ಇದರ ಪರಿಣಾಮವಾಗಿ ಬಯೋಮೆಟ್ರಿಕ್ ಪರೀಕ್ಷೆಗಳಲ್ಲಿ ವಿಫಲವಾದ ಹಲವು ಸಾವಿರ ಮತದಾರರನ್ನು ಅನರ್ಹಗೊಳಿಸಲಾಯಿತು. ಇದಲ್ಲದೆ ಇನ್ನೂ ಹಲವಾರು ದೂರುಗಳು ಬಂದಿದ್ದು ಅವೆಲ್ಲವುಗಳನ್ನು ಪರಿಶೀಲನೆ ನಡೆಸುವುದಾಗಿ ಸ್ವತಂತ್ರ ಚುನಾವಣಾ ಆಯೋಗವು ಭರವಸೆ ನೀಡಿದೆ.
ಈ ಚುನಾವಣಾ ಪ್ರಕ್ರಿಯೆಯು ಇನ್ನೂ ಹಲವು ವಾರಗಳು ಅಥವಾ ಕೆಲವು ತಿಂಗಳುಗಳವರೆಗೆ ನಡೆಯಬಹುದು ಎಂದು ಅಂದಾಜು ಮಾಡಲಾಗಿದೆ. ಇದೆಲ್ಲದರ ಬಳಿಕ ಅಶ್ರಫ್ ಘಾನಿ ಅವರು ಪಡೆದ ಮತಗಳ ಪ್ರಮಾಣ ಶೇಕಡಾ ಐವತ್ತಕ್ಕಿಂತ ಕಡಿಮೆಯಾದರೆ ಆಗ ಇಬ್ಬರು ಮುಖ್ಯ ಸ್ಪರ್ಧಿಗಳ ನಡುವೆ ಎರಡನೇ ಸುತ್ತಿನ ಮತದಾನ ನಡೆಯುವ ಸಾಧ್ಯತೆ ಇದೆ. ಆದರೆ ಈ ರೀತಿ ಚುನಾವಣಾ ಪ್ರಕ್ರಿಯೆಯು ದೀರ್ಘಗೊಳ್ಳುವುದನ್ನೇ ದುರುಪಯೋಗ ಪಡಿಸಿಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಅನಿಶ್ಚಿತತೆ ಅಥವಾ ಋಣಾತ್ಮಕ ವಾತಾವರಣ ಸೃಷ್ಟಿಸಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾದ ಸಂಗತಿಯಾಗಿದೆ.
ಈ ಪರಿಸ್ಥಿತಿಯಲ್ಲಿ ಚುನಾವಣಾ ಫಲಿತಾಂಶ ಪೂರ್ತಿ ಬರುವವರೆಗೆ ಕಾದು ನೋಡಲು ನಿರ್ಧರಿಸಿದ ಅನೇಕ ವಿಶ್ವ ನಾಯಕರ ನಡೆ ಯಾರಾದರೂ ಮೆಚ್ಚುವಂಥದ್ದೇ. ಅಶ್ರಫ್ ಘನಿ ಅವರಿಗೆ ಅಭಿನಂದನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಏಕೀಕೃತ, ಸಾರ್ವಭೌಮ, ಪ್ರಜಾಪ್ರಭುತ್ವ, ಸಮೃದ್ಧ ಹಾಗೂ ಶಾಂತಿಯುತ ಅಫ್ಘಾನಿಸ್ತಾನಕ್ಕೆ ನೆಚ್ಚಿನ ಹಾಗೂ ನೆರೆಯ ರಾಷ್ಟ್ರವಾಗಿ ಭಾರತವು ತನ್ನ ಬದ್ಧತೆಯನ್ನು ಪುನರಚ್ಛರಿಸಿದೆ. ಶಾಂತಿಗಾಗಿ ನಡೆಸುವ, ನೇತೃತ್ವ ವಹಿಸುವ ಅಥವಾ ನಿರ್ವಹಣೆ ಮಾಡುವ ಅಫ್ಘಾನಿಸ್ತಾನದ ಎಲ್ಲಾ ನಡೆಗಳಿಗೂ ಭಾರತದ ತಾತ್ವಿಕ ಬೆಂಬಲ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿಹೇಳಿದ್ದಾರೆ. ಅಲ್ಲದೆ ಅಫ್ಘಾನಿಸ್ತಾನದ ಅಭಿವೃದ್ಧಿ ಖಾತರಿಪಡಿಸಲು, ಭದ್ರತೆಯನ್ನು ಹೆಚ್ಚಿಸಲು ಹಾಗೂ ಈ ಪ್ರದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಲು ಅದರ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿಯೂ ಭಾರತ ನಿಕಟವಾಗಿ ಮುಂದುವರಿಯುತ್ತದೆ ಎಂದು ಮೋದಿ ಉಲ್ಲೇಖಿಸಿದ್ದಾರೆ.
ಭಾರೀ ವಿರೋಧದ ನಡುವೆಯೂ ಅಫ್ಘಾನಿಸ್ತಾನ ರಾಷ್ಟ್ರಪತಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಭಾರತ ವಿಶ್ವಾಸವಿಟ್ಟಿದೆ. ಇದನ್ನು ಅಫ್ಘಾನಿಸ್ತಾನದ ನಾಲ್ಕನೇ ಅಧ್ಯಕ್ಷೀಯ ಚುನಾವಣೆ ಎನ್ನುವುದರ ಜೊತೆಗೆ ಸಾಧನೆ ಎನ್ನಬಹುದು.
2001ರಲ್ಲಿ ತಾಲಿಬಾನ್ ಅನ್ನು ಪತನಗೊಳಿಸಲಾಯಿತು. ಅಥವಾ ತಾಲಿಬಾನಿಗಳಿಗೆ ಹಿನ್ನಡೆ ಉಂಟುಮಾಡಲಾಯಿತು ಎಂದುಕೊಂಡರೂ ಅವರಿನ್ನೂ ಪೂರ್ಣ ಪ್ರಮಾಣದಲ್ಲಿ ನಾಶವಾಗಿಲ್ಲ. ಕಳೆದ ವಾರ ಕಾಬೂಲ್‌ನಲ್ಲಿ ಚುನಾವಣೆಯ ಫಲಿತಾಂಶ ಪ್ರಕಟಣೆಯಾದ ಕೇವಲ ಒಂದೆರಡು ದಿನಗಳಲ್ಲಿ ತಾಲಿಬಾನಿಗಳು ಉತ್ತರ ಬಾಲ್ಕ್ ಪ್ರಾಂತ್ಯದಲ್ಲಿ ಕನಿಷ್ಠ 15 ಮಂದಿ ಭದ್ರತಾ ಪಡೆಗಳ ಸದಸ್ಯರನ್ನು ಬಲಿ ತೆಗೆದುಕೊಂಡಿದ್ದಾರೆ. ಇದೇ ಸಮಯದಲ್ಲಿ ಅವರು ಪಶ್ಚಿಮ ಫರಾ ಪ್ರಾಂತ್ಯದಲ್ಲಿ 27 ಮಂದಿ ಶಾಂತಿ ಕಾರ್ಯಕರ್ತರನ್ನು ಅಪಹರಣ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಇಂತಹ ವಿಲಕ್ಷಣಗಳ ನಡುವೆ ಅಫ್ಘಾನಿಸ್ತಾನದ ಜನರು ಬಂದೂಕಿನ ನಿಯಮದ ಮೇಲೆ ನಾಗರಿಕ ಆಡಳಿತ ಸ್ಥಾಪಿಸಲು ಹೆಣಗಾಡುತ್ತಿದ್ದಾರೆ. ಇದರಿಂದಾಗಿ ನವದೆಹಲಿಯು ಅಲ್ಲಿ ಖಚಿತವಾದ ಮಾರ್ಗಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬಲಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ತಾಲಿಬಾನಿಗಳು ನಡೆಸುತ್ತಿರುವ ರಕ್ತಪಾತ ಹಾಗೂ ಯುದ್ಧದಿಂದ ಹಾನಿಗೊಳಗಾಗಿರುವ ಅಫ್ಘಾನಿಸ್ತಾನವು, ದೇಶದಲ್ಲಿ ಬಾಳಿ ಬದುಕಬಹುದಾದಂತಹ ಶಾಂತಿಯನ್ನು ತಂದುಕೊಡಿ ಎಂದು ಮನವಿ ಮಾಡುತ್ತಿದೆ. ಇತ್ತೀಚಿಗೆ ಈ ದೇಶದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಈ ದಿಕ್ಕಿನಲ್ಲಿ ಅದು ಇನ್ನೂ ಒಂದು ಹೆಜ್ಜೆ ಮುಂದುಹೋಗಿದೆ ಎಂಬುದನ್ನು ಹೇಳುತ್ತದೆ.
ಅಧ್ಯಕ್ಷ ಅಶ್ರಫ್ ಘನಿ ಮತ್ತು ಡಾ. ಅಬ್ದುಲ್ಲಾ ಅಬ್ದುಲ್ಲಾ ಅವರು ವಿಭಿನ್ನ ಜನಾಂಗಗಳನ್ನು ಪ್ರತಿನಿಧಿಸುತ್ತಿದ್ದರೂ
ಅಫ್ಘಾನಿಸ್ತಾನದ ಜನರು ಮಾತ್ರ ಅಧಿಕಾರ ನೀಡುವ ವಿಷಯದಲ್ಲಿ ಜನಾಂಗ ಹಾಗೂ ಪ್ರಾದೇಶಿಕ ಅಸ್ಮಿತೆಗಳಿಗೆ ಸೊಪ್ಪು ಹಾಕಿದಂತಿಲ್ಲ. ಮೂರನೇ ಅಧ್ಯಕ್ಷೀಯ ಚುನಾವಣೆಯ ಬಳಿಕ ಜನರು ಸರ್ಕಾರದ ಜವಾಬ್ದಾರಿಗಳನ್ನು ಹಂಚುವ ವಿಚಾರದಲ್ಲಿ ಒಟ್ಟಾಗಿದ್ದಾರೆ. ಭಾರತದಲ್ಲಿ ಉನ್ನತ ಶಿಕ್ಷಣ ಪಡೆದ ಡಾ. ಅಬ್ದುಲ್ಲಾ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಅನುಭವ ಮತ್ತು ಅಫ್ಘಾನಿಸ್ತಾನದ ಬೌದ್ಧಿಕ ವಲಯ ಪ್ರತಿನಿಧಿಸುವ ಅಧ್ಯಕ್ಷ ಘಾನಿ ಅವರನ್ನು ದೇಶ ಮುನ್ನಡೆಸಲು ಒಟ್ಟಿಗೆ ಸೇರಿಸುವುದಕ್ಕೆ ಮನವೊಲಿಸುವುದು ಜನರಿಗೆ ತುಂಬಾ ಕಷ್ಟವಾಗದಿರಬಹುದು. ಕಳೆದ ಬಾರಿಯಂತೆ ಈಗಲೂ ಅಫ್ಘಾನಿಸ್ತಾನದ ಮುಂದೆ ದೊಡ್ಡ ಸವಾಲು ಇದೆ. 'ತಾಲಿಬಾನ್-ಬಾಗಿಲಲ್ಲಿ ತೋಳ' ಎಂಬ ಗಾದೆಯೇ ಆಗಿರುವ ಸಮಸ್ಯೆಯನ್ನು ಉಳಿದೆಲ್ಲವುಗಳಿಗಿಂತ ಮೊದಲು ನಿಭಾಯಿಸಬೇಕಾಗಿದೆ.
ಸ್ಕ್ರಿಪ್ಟ್: ಎಂ.ಕೆ. ಟಿಕ್ಕು, ರಾಜಕೀಯ ನಿರೂಪಕ

Comments
Post a Comment