ಭಾರತದ ವಿದೇಶಿ ವಿನಿಮಯದಲ್ಲಿ ಹೆಚ್ಚಳ

ಭಾರತದ ವಿದೇಶಿ ವಿನಿಮಯ (ಫೋರೆಕ್ಸ್) ನಿಕ್ಷೇಪಗಳು ಈಗ ಪ್ರವರ್ಧಮಾನಕ್ಕೆ ಬಂದಿವೆ ಹಾಗೂ 2019ರ ಡಿಸೆಂಬರ್ 20ರ ವೇಳೆಗೆ ಅವು ಸಾರ್ವಕಾಲಿಕ ಗರಿಷ್ಠ ಮಟ್ಟ 455 ಯುಎಸ್ ಬಿಲಿಯನ್ ಡಾಲರ್ ತಲುಪಿವೆ. ಇದು 2019ರ ಮಾರ್ಚ್ ತಿಂಗಳು ದಾಖಲಾಗಿದ್ದ 412 ಯುಎಸ್ ಬಿಲಿಯನ್ ಡಾಲರ್ ಗಿಂತ ಹೆಚ್ಚಾಗಿದೆ. ನಿಕ್ಷೇಪಗಳು ಬೆಳವಣಿಗೆ ಕಾಣಲು ಮುಖ್ಯ ಕಾರಣವೆಂದರೆ “ವಿದೇಶಿ ಕರೆನ್ಸಿ ಸ್ವತ್ತುಗಳು(ಎಫ್ ಸಿ ಎ)” ಎಂಬ ಅಂಶ. 2019ರ ಮಾರ್ಚ್‌ಗೆ ಹೋಲಿಸಿದರೆ ಇದು ಶೇಕಡಾ 10ರಷ್ಟು ಹೆಚ್ಚಾಗಿದೆ.


ವಿದೇಶಿ ಕರೆನ್ಸಿ ಸ್ವತ್ತುಗಳು ಬಹಳ ಮುಖ್ಯವಾಗಿ ಯುಎಸ್ ಡಾಲರ್, ಯುರೋ, ಪೌಂಡ್ ಸ್ಟರ್ಲಿಂಗ್, ಜಪಾನೀಸ್ ಯೆನ್ ಮತ್ತಿತರ ಕರೆನ್ಸಿಗಳ ರೀತಿ ಬಹು-ಕರೆನ್ಸಿ ಬಂಡವಾಳವಾಗಿ ಮಾರ್ಪಟ್ಟಿರುತ್ತವೆ.‌ ಇವು ಯುಎಸ್ ಡಾಲರ್ ಮೂಲಕ ಅಳೆಯಲ್ಪಡುತ್ತವೆ. ಆರ್‌ಬಿಐ ವರದಿಯ ಪ್ರಕಾರ, "ವಿದೇಶಿ ಕರೆನ್ಸಿ ಸ್ವತ್ತುಗಳಲ್ಲಿನ ವ್ಯತ್ಯಾಸಗಳು (ಎಫ್‌ಸಿಎ) ಮುಖ್ಯವಾಗಿ ಆರ್‌ಬಿಐ ಆದಾಯದಿಂದ ಖರೀದಿ ಮಾಡಿದ ಮತ್ತು ಮಾರಾಟ ಮಾಡಿದ ವಿದೇಶಿ ವಿನಿಮಯದ ಮೂಲಕ ಸಂಭವಿಸುತ್ತವೆ. ವಿದೇಶಿ ವಿನಿಮಯ ನಿಕ್ಷೇಪಗಳ ಮೂಲಕ ಹೊರಗಿನಿಂದ ಬರುವ ಸಹಾಯಗಳು ಕೇಂದ್ರ ಸರ್ಕಾರದ ರಶೀದಿಗಳಲ್ಲಿ ಮತ್ತು ಸ್ವತ್ತುಗಳ ಮರುಮೌಲ್ಯಮಾಪನದಲ್ಲಿ ಬದಲಾವಣೆಗಳನ್ನು ತರುತ್ತವೆ".


ಎಫ್‌ಸಿಎ ಹೊರತುಪಡಿಸಿ, ವಿದೇಶಿ ವಿನಿಮಯದ ಇತರ ಮೂರು ಘಟಕಗಳೆಂದರೆ ಚಿನ್ನ, ಎಸ್‌ಡಿಆರ್ (ಸ್ಪೆಷಲ್ ಡ್ರಾಯಿಂಗ್ ರೈಟ್ಸ್) ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಆರ್‌ಟಿಪಿ (ರಿಸರ್ವ್ ಟ್ರಾನ್ಚೆ ಪೊಸಿಷನ್). 2019ರ ಡಿಸೆಂಬರ್ 20ರವರೆಗೆ ಎಫ್‌ಸಿಎ ಒಟ್ಟು ವಿದೇಶಿ ವಿನಿಮಯದ ಶೇಕಡಾ 93ರಷ್ಟಿದ್ದರೆ, ಚಿನ್ನವು ಶೇಕಡಾ 6ರಷ್ಟು, ಎಸ್‌ಡಿಆರ್ ಶೇಕಡಾ 0.32ರಷ್ಟು ಹಾಗೂ ಐಎಂಎಫ್‌ನ ಆರ್‌ಟಿಪಿ ಸ್ಥಾನವು ಶೇಕಡ 0.80ರಷ್ಟಿದೆ.


ವಿದೇಶಿ ವಿನಿಮಯ ನಿಕ್ಷೇಪಗಳ ಮೇಲಿನ ಬೇಡಿಕೆಗಳನ್ನು
ಜಿಡಿಪಿ ಅನುಪಾತ, ಆರ್ಥಿಕತೆಯ ಮುಕ್ತತೆಯ ಮಟ್ಟ ಹಾಗೂ ಮತ್ತು ದ್ರವ್ಯತೆ ಅಗತ್ಯತೆಗಳಿಗೆ ತಕ್ಕಂತೆ ಬಾಹ್ಯ ವಲಯದ ಗಾತ್ರದಿಂದ ನಿರ್ಧರಿಸಲಾಗುತ್ತದೆ. ಮೀಸಲು ನಿರ್ವಹಣೆಗೆ ರೂಪಿಸಿರುವ ಅಗತ್ಯವಾದ ಕಾನೂನು ಚೌಕಟ್ಟೇ 1934ರ ಆರ್‌ಬಿಐ ಕಾಯ್ದೆಯಾಗಿದೆ. ವಿದೇಶಿ ವಿನಿಮಯ ಮೂಲಗಳಲ್ಲಿನ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಕರೆಂಟ್ ಅಕೌಂಟ್ (ಟ್ರೇಡ್ ಡೆಫಿಷಿಟ್) ಹಾಗೂ ಪಾವತಿಗಳನ್ನು ಬಾಕಿ ಉಳಿಸಿಕೊಂಡಿರುವ ಬಂಡವಾಳ ಖಾತೆಯ ವ್ಯವಹಾರಗಳೆರನ್ನೂ ನೋಡಬೇಕಾಗುತ್ತದೆ.


ಬಂಡವಾಳ ಖಾತೆಯು ಎರಡು ಮಹತ್ವದ ಅಂಶಗಳನ್ನು ಹೊಂದಿರುತ್ತದೆ- ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ). ವಿದೇಶಿ ಬಂಡವಾಳ ಹೂಡಿಕೆಯಲ್ಲಿ ವಿದೇಶಿ ಹೂಡಿಕೆದಾರರ ಹೂಡಿಕೆ ಹಾಗೂ ಎನ್‌ಆರ್‌ಐ ಠೇವಣಿ, ಅಲ್ಪಾವಧಿಯ ಸಾಲ, ಬಾಹ್ಯ ನೆರವು ಮತ್ತು ಬಾಹ್ಯ ವಾಣಿಜ್ಯ ಸಾಲಗಳನ್ನೊಳಗೊಂಡ ಬ್ಯಾಂಕಿಂಗ್ ಬಂಡವಾಳಗಳು ಗಮನಾರ್ಹವಾದ ಅಂಶಗಳು.


ಇತರ ಅಂಶಗಳ ಪೈಕಿ (ವಿವಿಧ) ಬಂಡವಾಳ ಖಾತೆಯಲ್ಲಿನ 'ದೋಷಗಳು ಮತ್ತು ಸೋರುವಿಕೆ' ಹೊರತುಪಡಿಸಿದ ಎಸ್‌ಡಿಆರ್ ಗಳು, ರಫ್ತುಗಳಲ್ಲಿ ಆಗುತ್ತಿರುವ ಮುನ್ನಡೆಗಳು ಮತ್ತು ವಿಳಂಬಗಳು, ವಿದೇಶದಲ್ಲಿ ಇರುವ ನಿಧಿಗಳು, ಎಫ್‌ಡಿಐ ವ್ಯಾಪ್ತಿಗೆ ಬರುವ ಷೇರುಗಳ ಬಾಕಿ ಉಳಿದಿರುವ ಮುಂಗಡಗಳು ಹಾಗೂ ಬೇರೆಲ್ಲಿಯೂ ಸೇರಿಸಲ್ಪಡದ ಮತ್ತು ರೂಪಾಯಿ ಮೌಲ್ಯದ ಮೇಲಿನ ಸಾಲದ ರೂಪದ ಬಂಡವಾಳ ರಶೀದಿಗಳು ಸೇರಿವೆ. ವ್ಯಾಪಾರ ಕೊರತೆಯ (ಎಕ್ಸ್-ಎಂ) ಸುಧಾರಣೆಯಿಂದ ಹಾಗೂ ಎಫ್‌ಡಿಐ ಮತ್ತು ಎಫ್‌ಐಐ ಹರಿವು ಹೆಚ್ಚಾಗುತ್ತಿರುವುದರಿಂದ ಇತ್ತೀಚೆಗೆ ವಿದೇಶೀ ವಿನಿಮಯದಲ್ಲಿ ಬೆಳವಣಿಗೆ ಕಾಣಬಹುದಾಗಿದೆ.


ವಿದೇಶಿ ವಿನಿಮಯ ನಿಕ್ಷೇಪಗಳ ಸಮರ್ಪಕತೆಯು ಆಮದುಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. 2019- 20ರ ಹಣಕಾಸು ವರ್ಷದಲ್ಲಿ ಆಮದುಗಳ ವಿದೇಶೀ ವಿನಿಮಯ ಸಂಗ್ರಹವು 2019ರ ಮಾರ್ಚ್‌ನಲ್ಲಿ 9.6 ತಿಂಗಳಿಂದ 2019ರ ಜೂನ್‌ನಲ್ಲಿ 10 ತಿಂಗಳುಗಳಿಗೆ ಏರಿಕೆ ಕಂಡಿದೆ.


ನಮ್ಮ ಏರುತ್ತಿರುವ ವಿದೇಶಿ ವಿನಿಮಯ ಮೀಸಲು ಸ್ಥಿರವಾಗಿದೆಯೇ ಅಥವಾ ಬಾಷ್ಪಶೀಲವಾಗಿದೆಯೇ ಎಂಬುದನ್ನು ಪರೀಕ್ಷಿಸುವುದು ಮತ್ತೊಂದು ಪ್ರಮುಖ ಅಂಶವಾಗಿದೆ. ಇದು ವಿದೇಶಿ ವಿನಿಮಯದ ಸಂಯೋಜನೆಯನ್ನು ಅವಲಂಬಿಸಿರುತ್ತದೆ. ಬಾಷ್ಪಶೀಲ ಬಂಡವಾಳ ಹರಿಯುತ್ತಿದ್ದರೆ- ಉದಾಹರಣೆಗೆ ವಿದೇಶಿ ಬಂಡವಾಳ ಹೂಡಿಕೆ ಮತ್ತು ಬಾಕಿ ಉಳಿದಿರುವ ಅಲ್ಪಾವಧಿಯ ಸಾಲ- ವಿದೇಶಿ ವಿನಿಮಯದ ಗಾತ್ರ ಗಮನಾರ್ಹವಾಗಿ ಹೆಚ್ಚಾಗಿದ್ದರೆ ವಿದೇಶಿ ವಿನಿಮಯದ ಮೀಸಲು ಸ್ಥಿರವಾಗಿಲ್ಲ ಎಂದು ಅರ್ಥ. ಇದಕ್ಕೆ ಕಾರಣ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಿರುತ್ತದೆ. “ಹಾಡ್ ಮನಿ", ದೇಶದಿಂದ ಹೊರಗಡೆ ಹೂಡಿಕೆ ಮಾಡಲು ತಮ್ಮ ಉಳಿದೆಲ್ಲಾ ಬಡ್ಡಿದರಗಳಿಗಿಂತ ಜಗತ್ತಿನ ಮಟ್ಟದಲ್ಲೇ ದುಬಾರಿ ಎನ್ನುವಷ್ಟು ಬಡ್ಡಿ ವಿಧಿಸುವರಿಂದ ಸಾಲ ಪಡೆಯುವ ಹಣ ಎಂದು ವ್ಯಾಖ್ಯಾನಿಸಲ್ಪಡುವ ಹಣದ ಮೂಲಕ ಬಂದಿರುತ್ತದೆ.


ವಿದೇಶಿ ವಿನಿಮಯ ನಿರ್ವಹಣೆ ಕುರಿತು ಇತ್ತೀಚಿಗೆ ಆರ್‌ಬಿಐ ನೀಡಿರುವ ವರದಿಯ ಪ್ರಕಾರ ಬಾಷ್ಪಶೀಲ ಬಂಡವಾಳ ಹರಿವಿನ ಅನುಪಾತವು (ಸಂಚಿತ ಬಂಡವಾಳದ ಒಳಹರಿವು ಮತ್ತು ಬಾಕಿ ಉಳಿದಿರುವ ಅಲ್ಪಾವಧಿಯ ಸಾಲ ಸೇರಿದಂತೆ) 2019ರ ಮಾರ್ಚ್ ಅಂತ್ಯದ ವೇಳೆಗೆ ಶೇ 88.7ರಿಂದ 2019ರ ಜೂನ್ ಅಂತ್ಯದ ವೇಳೆಗೆ ಶೇ 86.7ಕ್ಕೆ ಇಳಿದಿದೆ.


ಆದ್ದರಿಂದ ಏರುತ್ತಿರುವ ವಿದೇಶಿ ವಿನಿಮಯದಲ್ಲಿ ಸ್ಥೂಲ-ಆರ್ಥಿಕ ನಿಶ್ಚಿತತೆಯನ್ನು ಕಂಡುಹಿಡಿಯುವುದು ಅದರಲ್ಲೂ ವಿಶ್ವ ಆರ್ಥಿಕತೆಯು ಆರ್ಥಿಕ ಹಿಂಜರಿತದಲ್ಲಿರುವಾಗ ಭಾರತದ ದೇಶೀಯ ಮಾರುಕಟ್ಟೆಯು ಪ್ರಜ್ವಲಿಸುತ್ತಿರುವುದು ವಿರೋಧಾಬಾಸದ ಬೆಳವಣಿಗೆಯಾಗಿದೆ. ‌ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ತಮ್ಮ ಸರ್ಕಾರವು ಹೆಚ್ಚುತ್ತಿರುವ ವಿದೇಶಿ ವಿನಿಮಯ ಮೀಸಲುಗಳ ಮೇಲೆ ಕೇಂದ್ರೀಕರಿಸುವ ಬದಲು ದೀರ್ಘಾವಧಿಯ ದೃಷ್ಟಿಕೋನದಿಂದ‌ ಹಣಕಾಸಿನ ಮತ್ತು ಆರ್ಥಿಕತೆಗೆ ಸಂಬಂಧಿಸಿದ ರಚನಾತ್ಮಕ ಸುಧಾರಣೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ. ಭಾರತೀಯ ಆರ್ಥಿಕತೆಗೆ ಮಹತ್ತರ ತಿರುವು ನೀಡಬಹುದಾದ 2020ರ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು ಸರ್ಕಾರದ ಕ್ರಮಗಳ ಬಗ್ಗೆ ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ.






ಸ್ಕ್ರಿಪ್ಟ್: ಡಾ. ಲೆಖಾ ಎಸ್. ಚಕ್ರವರ್ತಿ, ಪ್ರೊಫೆಸರ್, ಎನ್ಐಪಿಎಫ್ ಪಿ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ