ಉಭಯ ದೇಶಗಳ ಸಂಬಂಧ ವೃದ್ಧಿಸಿದ ಶ್ರೀಲಂಕಾ ಅಧ್ಯಕ್ಷರ ಭಾರತ ಭೇಟಿ
ಶ್ರೀಲಂಕಾದಲ್ಲಿ ಹೊಸದಾಗಿ ಚುನಾಯಿತರಾದ ಅಧ್ಯಕ್ಷರು ಅಥವಾ ಪ್ರಧಾನ ಮಂತ್ರಿಗಳು ಮೊದಲಿಗೆ ಭಾರತಕ್ಕೆ ಭೇಟಿ ನೀಡುವುದನ್ನು ಆದ್ಯತೆಯನ್ನಾಗಿ ಪರಿಗಣಿಸುವುದು ಹೊಸ ವಿಷಯವೇನಲ್ಲ. ಈ ಹಿಂದೆ ಕೂಡ ಹೀಗೆ ಆಗಿದ್ದಿದೆ. ಹೊಸ ರಾಷ್ಟ್ರಪತಿ ಗೊತಬಯಾ ರಾಜಪಕ್ಸೆ ಅವರು ಅಧಿಕಾರ ವಹಿಸಿಕೊಂಡ ಹತ್ತು ದಿನಗಳ ನಂತರ ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ನವದೆಹಲಿಗೆ ಭೇಟಿ ನೀಡಿದರು.
ಶ್ರೀಲಂಕಾ ಮತ್ತು ಅದರ ಹತ್ತಿರದ ನೆರೆಯವರ ನಡುವಿನ ಸಂಬಂಧದ ಹೊರತಾಗಿ ಎರಡೂ ಕಡೆಗಳಲ್ಲಿ ಉತ್ತಮ ಸಹಕಾರ ಚಾಲ್ತಿಯಲ್ಲಿದೆ. ಅವುಗಳನ್ನು ಪ್ರಸ್ತುತ ವಾಸ್ತವಿಕ ನಿರೀಕ್ಷೆಗಳಿಗೆ ಅನುಗುಣವಾಗಿ ತರಬೇಕಾಗಿದೆ. ಗೊತಬಯಾ ಆಯ್ಕೆಯಾದ ಬಳಿಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ಹೊಸ ಅಧ್ಯಕ್ಷರನ್ನು ಕೂಡ ಭೇಟಿ ಮಾಡಿದರು. ಅವರ ಚುನಾವಣೆಗೆ ನವದೆಹಲಿಯ ಶುಭಾಶಯಗಳನ್ನು ತಿಳಿಸುವುದರ ಹೊರತಾಗಿ, ಭಾರತ ವಿದೇಶ ವ್ಯವಹಾರಗಳ ಸಚಿವರು ಪ್ರಧಾನಿ ಮೋದಿಯವರ ಪತ್ರವನ್ನು ನೀಡಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷರು ಮೋದಿಯವರನ್ನು ಶ್ರೀಲಂಕಾಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಭೇಟಿಯ ವಿವರಗಳು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.
ಹಿಂದಿನ ಭಿನ್ನಾಭಿಪ್ರಾಯಗಳನ್ನು ಬದಿಗೊರಿಸಿ ಸಂಬಂಧ ಸುಧಾರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಎರಡೂ ಕಡೆಗಳಲ್ಲಿನ ತುರ್ತು ಕಂಡುಬಂದಿತು. ಈ ಗ್ರಹಿಕೆಗಳು ವಿಶೇಷವಾಗಿ ಶ್ರೀಲಂಕಾ ಎಲ್‌ಟಿಟಿಇ ವಿರುದ್ಧ ಯುದ್ಧ ಮಾಡುತ್ತಿದ್ದ ಸಮಯದಿಂದ ಹುಟ್ಟಿಕೊಂಡಿತ್ತು. ಮಹಿಂದಾ ರಾಜಪಕ್ಸೆ ಅಧ್ಯಕ್ಷರಾಗಿದ್ದಾಗ ಗೊತಬಯಾ ರಾಜಪಕ್ಸೆ ರಕ್ಷಣಾ ಕಾರ್ಯದರ್ಶಿಯಾಗಿದ್ದರು. ಆ ಯುದ್ಧದಲ್ಲಿ ಭಾರತವು ಶ್ರೀಲಂಕಾವನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು ಮತ್ತು ಅದೇ ಸಮಯದಲ್ಲಿ ತನ್ನ ತಮಿಳು ಜನಸಂಖ್ಯೆಗೆ ನ್ಯಾಯಯುತವಾದ ಒಪ್ಪಂದವನ್ನು ಖಾತ್ರಿಪಡಿಸಿಕೊಳ್ಳುವಂತೆ ಕೊಲಂಬೊವನ್ನು ನಿರಂತರವಾಗಿ ಒತ್ತಾಯಿಸುತ್ತಿತ್ತು.
ಅನಿವಾರ್ಯವಾಗಿ, ಯುನೈಟೆಡ್ ಶ್ರೀಲಂಕಾದಲ್ಲಿ ತಮಿಳರಿಗೆ ನ್ಯಾಯಯುತವಾದ ಒಪ್ಪಂದವು ನವದೆಹಲಿಯಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಬಂದ ವಿಷಯವಾಗಿದೆ. ವಾಸ್ತವವಾಗಿ, ಇದು ತಮಿಳು ಟೈಗರ್ ಗಳೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ಶ್ರೀಲಂಕಾ ಸರ್ಕಾರದ ಯಶಸ್ವಿ ಅಭಿಯಾನದ ಅಪೂರ್ಣ ಕೆಲಸದ ಭಾಗವಾಗಿತ್ತು. ಈ ವಿಷಯದಲ್ಲಿ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿತು. ಶ್ರೀಲಂಕಾದ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಮಿಳು ಕಾಳಜಿಯನ್ನು ಪರಿಹರಿಸುವ ಅಧ್ಯಕ್ಷ ರಾಜಪಕ್ಸೆ ಅವರು ಸಿಂಹಳೀಯರ ಮತಗಳ ಬಲದ ಮೇಲೆ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಅವರು ಸೇರಿದಂತೆ ಎಲ್ಲರಿಗೂ ನ್ಯಾಯಯುತವಾದ ಒಪ್ಪಂದವನ್ನು ಖಚಿತಪಡಿಸುವುದಾಗಿ ಹೇಳಿದ್ದಾರೆ. ಅಲ್ಪಸಂಖ್ಯಾತ ತಮಿಳರು ಮತ್ತು ಮುಸ್ಲಿಮರು ಸೇರಿ ಎಲ್ಲರಿಗೂ ಇದು ಸಕಾರಾತ್ಮಕ ಬೆಳವಣಿಗೆ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.
ಭಾರತದ ಕಾಳಜಿಗಳ ಬಗ್ಗೆ ಸ್ಪಂದಿಸಿರುವ ರಾಜಪಕ್ಷೆ, ಭಾರತದೊಂದಿದಿನ ಸಂಬಂಧಕ್ಕೆ ಪಾಕ್ ಅಥವಾ ಚೀನಾ ಜತೆಗಿನ ಸಂಬಂಧ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುವುದು ಎಂದು ಖಾತರಿಪಡಿಸಿದರು. ವಿವಾದಾತ್ಮಕ ಹಂಬಂಟೋಟ ಬಂದರು ನಿರ್ಮಾಣ ಯೋಜನೆಯನ್ನು ಚೀನಾಕ್ಕೆ ನೀಡಿದ್ದು ತಪ್ಪು ಎಂಬ ಅಭಿಪ್ರಾಯವನ್ನೂ ಅವರು ಹೊರಹಾಕಿದ್ದಾರೆ. ಮುಕ್ತ ಮನಸ್ಸಿನಿಂದ ಅವರು ತಮ್ಮ ಕಾರ್ಯನಿರ್ವಹಣೆಗೆ ಮುಂದಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ, ಭಾರತವು 450 ಮಿಲಿಯನ್ ಡಾಲರ್ ಗಳ ಯೋಜನೆಗೆ ಸಾಲದ ನೆರವು ನೀಡಿತು. ಶ್ರೀಲಂಕಾದಲ್ಲಿ ಭಾರತದ ಆರ್ಥಿಕ ಬದ್ಧತೆಗಳು ಚೀನಾಕ್ಕೆ ಸಂಬಂಧವಿಲ್ಲದಿದ್ದರೂ ಮೂಲಸೌಕರ್ಯ ಯೋಜನೆಗಳ ನೈಜ ಅನುಷ್ಠಾನದ ಬಗ್ಗೆ ನವದೆಹಲಿಯು ಉತ್ತಮ ದಾಖಲೆಯನ್ನು ಹೊಂದಿದೆ. ಮೆಗಾ ಹೂಡಿಕೆಗಳು ಮತ್ತು ಅವುಗಳಿಂದ ಉಂಟಾಗುವ ನಿರೀಕ್ಷೆಗಳ ನಡುವಿನ ಹೊಂದಾಣಿಕೆಯಿಲ್ಲದ ಉದಾಹರಣೆಗಳೆಂದರೆ ಹಂಬಂಟೋಟ ಬಂದರು ಯೋಜನೆ ಅಥವಾ ಮಾಟಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.
ಪ್ರಮುಖ ಕಾಳಜಿಗಳ ವಿಷಯಗಳನ್ನು ಪರಿಹಾರ ಕಂಡುಕೊಂಡ ಬಳಿಕ ಭಾರತ-ಶ್ರೀಲಂಕಾ ಸಂಬಂಧ ಹೊಸ ದಿಕ್ಕಿನಲ್ಲಿ ಸಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ರಾಜಪಕ್ಷೆ ಭರವಸೆ ಹೊರಹಾಕಿದ್ದಾರೆ. ಉಯ ದೇಶಗಳ ಸಂಬಂಧವನ್ನು ಹೊಸ ಹಂತಕ್ಕೆ ಕೊಂಡೊಯ್ಯುವುದು ನನ್ನ ಉದ್ದೇಶ ಎಂದಿರುವ ರಾಜಪಕ್ಷೆ, ರಾಜಕೀಯವಾಗಿ ಮತ್ತು ಐತಿಹಾಸಿಕವಾಗಿ ಉಭಯ ದೇಶಗಳು ದೀರ್ಘಕಾಲೀನ ಸಂಬಂಧ ಹೊಂದಿವೆ ಎಂದು ತಿಳಿಸಿದರು. ನವದೆಹಲಿಯೊಂದಿಗೆ ತಮ್ಮ ಸಂಬಂಧಕ್ಕೆ ನವ ಚೈತನ್ಯ ನೀಡುವುದು ಹೊಸ ಅಧ್ಯಕ್ಷರ ಗುರಿ ಎನ್ನುವುದು ಈ ಬೆಳವಣಿಗೆಗಳಿಂದ ಖಾತರಿಯಾದಂತಿದೆ. ಸಕಾರಾತ್ಮಕ ಸಂದೇಶದೊಂದಿಗೆ ತಮ್ಮ ಕಾರ್ಯಾವಧಿಯನ್ನು ಆರಂಭಿಸಿದ್ದಾರೆ.
ಲೇಖನ : ಎಂ.ಕೆ. ಟಿಕ್ಕು, ರಾಜಕೀಯ ವಿಶ್ಲೇಷಕರು

Comments
Post a Comment