ಆರ್ಥಿಕತೆ ಬೆಳವಣಿಗೆಗಾಗಿ ಇನ್ಫ್ರಾ ಯೋಜನೆಗಳಿಗೆ ಬಹು-ಮಿಲಿಯನ್ ಬಂಡವಾಳ ಹೂಡಲಿರುವ ಭಾರತ
ಆರ್ಥಿಕತೆಯ ನೈಜ ಕ್ಷೇತ್ರಗಳ ಉತ್ಪಾದಕ ಮಧ್ಯಸ್ಥಗಾರರಲ್ಲಿ ವಿಶಿಷ್ಟ ಶೈಲಿಯ ಬಂಡವಾಳ ವೆಚ್ಚ (ಕ್ಯಾಪೆಕ್ಸ್) ತೊಡಗಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ವಲಯವನ್ನೂ ಒಳಗೊಂಡ ಜಂಬೋ ಮೂಲಸೌಕರ್ಯ ಹೂಡಿಕೆ ಯೋಜನೆಯೊಂದನ್ನು ತಂದಿದೆ. ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2024-25ರ ವೇಳೆಗೆ ಮೂಲಸೌಕರ್ಯ ಯೋಜನೆಗಳಲ್ಲಿ 102 ಲಕ್ಷ ಕೋಟಿಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಾಗುವುದು, ಈ ಹೂಡಿಕೆಯನ್ನು 39:39: 22 ಸೂತ್ರದ ಅಡಿ ಕೇಂದ್ರ, ರಾಜ್ಯಗಳು ಮತ್ತು ಖಾಸಗಿ ವಲಯದೊಂದಿಗೆ ಬಂಡವಾಳ ವೆಚ್ಚದಲ್ಲಿ ಹಂಚಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ 51 ಲಕ್ಷ ಕೋಟಿ ರೂ.ಗಳನ್ನು ಮೂಲಸೌಕರ್ಯಕ್ಕಾಗಿ ಖರ್ಚು ಮಾಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ದೇಶೀಯ ಆರ್ಥಿಕತೆಯು ದುರ್ಬಲ ಬೇಡಿಕೆಯ ಮೂಲಕ ಸಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಬೇಡಿಕೆಯನ್ನು ಹೆಚ್ಚಿಸಲೇಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಸರ್ಕಾರ ತನ್ನ ಹೂಡಿಕೆಯನ್ನು ಹೆಚ್ಚಿಸುವುದು ಉತ್ತಮ ಮಾರ್ಗಗಳಲ್ಲಿ ಒಂದಾಗಿರಲಿದೆ. ಉಳಿದ ಎರಡು ದಾರಿಗಳೆಂದರೆ ಸರ್ಕಾರಿ ಬಳಕೆಯ ವೆಚ್ಚ ಮತ್ತು ರಫ್ತು. ಸರ್ಕಾರದ 'ಕ್ಯಾಪೆಕ್ಸ್' (ಬಂಡವಾಳ ವೆಚ್ಚ) ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಸಿಪಿಎಸ್‌ಯು) ಹಣ ಕೇಂದ್ರೀಕೃತವಾಗಿದೆ ಎಂಬುದು ನಿರಾಕರಿಸಲಾಗದ ತರ್ಕವಾಗಿದ್ದು ಅದನ್ನು ಬಳಸಿಕೊಳ್ಳುವುದೇ ಇದರ ಹಿಂದಿನ ಆಲೋಚನೆಯಾಗಿದೆ. ಇದು ರಾಜ್ಯಗಳು ಮತ್ತು ಖಾಸಗಿ ವಲಯಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಮಾಣಾವಾರು ಹೆಚ್ಚಳ ಮಾಡಲು ಪೂರಕವಾಗಿದೆ. ನಿಧಾನಗತಿಯ ಸಿಂಡ್ರೋಮ್ ಅನ್ನು ಮೇಲೆತ್ತಲು ಸಹಾಯ ಮಾಡುತ್ತದೆ ಹಾಗೂ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಹಾಗೂ ಗಣನೀಯ ಪ್ರಮಾಣದ ಹೂಡಿಕೆಯನ್ನು ಕಲೆಹಾಕಲು ನೆರವಾಗುತ್ತದೆ. ವಾಸ್ತವವಾಗಿ ಇತ್ತೀಚೆಗೆ ಭಾರತೀಯ ಅಧಿಕಾರಿಗಳೊಂದಿಗೆ 2019ರ ಆರ್ಟಿಕಲ್ IV ಸಮಾಲೋಚನೆ ನಡೆಸಿ ವರದಿ ನೀಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್), "ಸರ್ಕಾರದ ಯೋಜನೆಗಳಿಗೆ ಅನುಗುಣವಾಗಿ ಮೂಲಸೌಕರ್ಯ ಅಡಚಣೆಗಳನ್ನು ಪರಿಹರಿಸಲು ಹೆಚ್ಚಿನ ಗಮನ ನೀಡಬೇಕು" ಎಂದು ಸ್ಪಷ್ಟವಾಗಿ ಹೇಳಿದೆ. ವಿಮಾನ ನಿಲ್ದಾಣಗಳು, ರಸ್ತೆಗಳು, ಟೆಲಿಕಾಂ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳ ಮೂಲಕ ಆರ್ಥಿಕತೆಯ ಪೂರೈಕೆಯನ್ನು ಹೆಚ್ಚಿಸಲು ಭಾರತ ಇತ್ತೀಚಿಗೆ ನಡೆಸುತ್ತಿರುವ ಪ್ರಯತ್ನಗಳನ್ನು ಕೂಡ ಪರಿಗಣಿಸಲಾಗಿದೆ.
ಕಳೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 2024-25ರ ವೇಳೆಗೆ ಭಾರತವು ಐದು ಟ್ರಿಲಿಯನ್ ಡಾಲರ್ ದೇಶೀಯ ಆರ್ಥಿಕತೆಯನ್ನು ಸಾಧಿಸಲು ಆಧುನಿಕ ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ ಎಂಬ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅತಾನು ಚಕ್ರವರ್ತಿ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಕಾರ್ಯಪಡೆಯೊಂದನ್ನು ತ್ವರಿತವಾಗಿ ಸ್ಥಾಪಿಸಲಾಗಿತ್ತು. ಆದರೆ ಪ್ರಧಾನ ಮಂತ್ರಿಗಳ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳು ಸ್ವಲ್ಪ ಸಮಯ ತೆಗೆದುಕೊಂಡರು. ಈ ಯೋಜನೆಯು ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್‌ಲೈನ್ (ಎನ್‌ಐಪಿ) ಭಾಗವಾಗಿದ್ದು 18 ರಾಜ್ಯಗಳನ್ನು ಒಳಗೊಂಡಿದೆ ಮತ್ತು 102 ಲಕ್ಷ ಕೋಟಿ ಮೌಲ್ಯದ ಯೋಜನೆಯಾಗಿದೆ. ಶೀಘ್ರದಲ್ಲೇ ಈ ಯೋಜನೆಗೆ ಇನ್ನೂ ಮೂರು ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗುವುದು. ಕೆಲವು ರಾಜ್ಯಗಳು ಇನ್ನೂ ಕೂಡ ಪೈಪ್ ಲೈನ್ ಯೋಜನೆ ವ್ಯಾಪ್ತಿಗೆ ಸೇರಿಲ್ಲ. ಯಾವುದೇ ರಾಜ್ಯವನ್ನು ಇದರಿಂದ ಹೊರಗಿಡುವ ಪ್ರಶ್ನೆಯೇ ಇಲ್ಲ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
ಮೂಲಸೌಕರ್ಯವು ಉತ್ತಮವಾಗಿ ಅಭಿವೃದ್ಧಿ ಹೊಂದಿದರೆ ಅದು ಆರ್ಥಿಕ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ಸರ್ಕಾರದ ಆದಾಯ ರಚನೆಯನ್ನು ಸುಧಾರಿಸುವ ಮೂಲಕ ಹೆಚ್ಚುವರಿ ಹಣಕಾಸಿನ ಸ್ಥಳವನ್ನು ಉತ್ತೇಜಿಸುತ್ತದೆ. ಜೊತೆಗೆ ಉತ್ಪಾದಕ ಪ್ರದೇಶಗಳಲ್ಲಿ ಕೇಂದ್ರೀಕರಿಸಿದ ಖರ್ಚಿನ ಗುಣಮಟ್ಟವನ್ನು ಖಾತ್ರಿಪಡಿಸುತ್ತದೆ ಎಂಬ ಅಂಶದಿಂದ ಆರ್ಥಿಕತೆಯನ್ನು ಮುಂದೂಡುವ ನೀತಿ ಆಧಾರಸ್ತಂಭವಾಗಿ ಎನ್ಐಪಿ ಹಿಂದಿನ ತಾರ್ಕಿಕತೆಯು ಹೊರಹೊಮ್ಮುತ್ತದೆ. ಮೂಲಸೌಕರ್ಯ ಯೋಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವುದು, ವ್ಯವಹಾರಗಳನ್ನು ಉತ್ತೇಜಿಸುವುದು, ಉದ್ಯೋಗಗಳನ್ನು ಸೃಷ್ಟಿಸುವುದು, ಜೀವನ ನಿರ್ವಹಣೆಯನ್ನು ಸುಧಾರಿಸುವುದು ಹಾಗೂ ಎಲ್ಲರಿಗೂ ಮೂಲಸೌಕರ್ಯಗಳಿಗೆ ಸಮಾನ ಅವಕಾಶವನ್ನು ವಿಸ್ತರಿಸುವುದು ಎನ್ಐಪಿ ಉದ್ದೇಶವಾಗಿದೆ. ಇದರಿಂದಾಗಿ ಅಂತರ್ಗತ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅಸಮಾನತೆ ಮೂಲಕ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ.
ಕೇಂದ್ರ ಸರ್ಕಾರದ ಮಾಹಿತಿಗಳ ಪ್ರಕಾರ ನೀರಾವರಿ ಮತ್ತು ಗ್ರಾಮೀಣ ಮೂಲಸೌಕರ್ಯ ಯೋಜನೆಗಳಿಗೆ ತಲಾ 7.7 ಲಕ್ಷ ಕೋಟಿ ರೂ. ಮತ್ತು ಕೈಗಾರಿಕಾ ಮೂಲಸೌಕರ್ಯಕ್ಕಾಗಿ 3.07 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತದೆ. ರಸ್ತೆ ಯೋಜನೆಗಳಿಗೆ 19.63 ಲಕ್ಷ ಕೋಟಿ ರೂ.ಗಳಾಗಿದ್ದರೆ, ರೈಲ್ವೆ ಯೋಜನೆಗಳಿಗೆ 13.68 ಲಕ್ಷ ಕೋಟಿ ರೂ ಖರ್ಚು ಮಾಡಲಾಗುತ್ತದೆ. ಬಂದರು ಅಭಿವೃದ್ಧಿ ಯೋಜನೆಗಳಲ್ಲಿ ಒಂದು ಲಕ್ಷ ಕೋಟಿ ಮತ್ತು ವಿಮಾನ ನಿಲ್ದಾಣಗಳಿಗೆ 1.43 ಲಕ್ಷ ಕೋಟಿ ರೂ. ತೊಡಗಿಸಲಾಗುತ್ತಿದೆ. ನಗರ ಮೂಲಸೌಕರ್ಯಕ್ಕಾಗಿ 16.29 ಲಕ್ಷ ಕೋಟಿ ರೂ., ಟೆಲಿಕಾಂ ಯೋಜನೆಗಳು, ಎಕ್ಸ್‌ಪ್ರೆಸ್‌ವೇಗಳು, ರಾಷ್ಟ್ರೀಯ ಅನಿಲ ಗ್ರಿಡ್ ಮತ್ತು ಪ್ರಧಾನ್ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ(ಪಿಎಂಎವೈ-ಜಿ) ಯೋಜನೆಗೆ 3.2 ಲಕ್ಷ ಕೋಟಿ ರೂ. ಹಣ ಹೂಡಲಾಗುತ್ತಿದೆ. ಉಳಿದ ಹಣವನ್ನು ಕೃಷಿ ಮತ್ತು ಸಾಮಾಜಿಕ ಮೂಲಸೌಕರ್ಯಗಳಿಗೆ ಬಳಸಲಾಗುತ್ತದೆ.
ಮೂಲಸೌಕರ್ಯ ಕಾರ್ಯಪಡೆಯ ಅಡಿಯಲ್ಲಿ ಎನ್ಐಪಿಯ ಸಂಯೋಜಿತ ಉದ್ದೇಶಗಳನ್ನು ಸಾಧಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ವಿವಿಧ ಕಾರ್ಯನಿರತ ಗುಂಪುಗಳ ಸುಧಾರಣಾ ಸಲಹೆಗಳನ್ನು ಶ್ರದ್ಧೆಯಿಂದ ತೆಗೆದುಕೊಳ್ಳಲಾಗುವುದು ಎಂಬುದು ಆಶಾದಾಯಕ ಬೆಳವಣಿಗೆಯಾಗಿದೆ. ಇದು ಸಾರ್ವಜನಿಕ-ಖಾಸಗಿ-ಸಹಭಾಗಿತ್ವ (ಪಿಪಿಪಿ) ಆಧಾರಿತ ಒಪ್ಪಂದಗಳನ್ನು ಸುಧಾರಿಸುವುದು ಹಾಗು ಒಪ್ಪಂದಗಳ ಜಾರಿ ಮತ್ತು ವಿವಾದ ಪರಿಹಾರ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಪ್ರಸಕ್ತ ಸಾಲಿನಿಂದ ಮಧ್ಯಮ-ಅವಧಿಯ ಯೋಜನೆಯಾಗಿ ಎನ್ಐಪಿ ಅಸ್ತಿತ್ವದಲ್ಲಿ ಇರುವುದಿಲ್ಲ ಬದಲಿಗೆ ಗ್ಲಿಚ್-ಮುಕ್ತ ನೌಕಾಯಾನವನ್ನಾಗಿ ಸಂರಕ್ಷಿಸಲಾಗುತ್ತದೆ. ಇದಕ್ಕಾಗಿ "ದೃಢವಾದ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸಹ ಸ್ಥಾಪಿಸಲಾಗುವುದು" ಎಂದು ನಿರ್ಮಲಾ ಸೀತಾರಾಮನ್ ಧೈರ್ಯದಿಂದ ಹೇಳಿದ್ದಾರೆ.
ಸ್ಕ್ರಿಪ್ಟ್: ಜಿ. ಶ್ರೀನಿವಾಸನ್, ಹಿರಿಯ ಪತ್ರಕರ್ತ

Comments
Post a Comment