ಉದ್ವಿಗ್ನತೆ ತಗ್ಗಿಸಲು ಯುಎಸ್-ಇರಾನ್ ಗೆ ಭಾರತ ಕರೆ
ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಇರಾನ್ ಸೇನೆಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ಖಾಸಿಂ ಸೊಲೈಮಾನಿಯನ್ನು ಹತ್ಯೆ ಮಾಡಿದ ಅಮೆರಿಕದ ಏಕಪಕ್ಷೀಯ ನಿರ್ಧಾರವು ಆ ಪ್ರದೇಶದಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಈ ದಾಳಿಯಿಂದಾಗಿ ಅಮೆರಿಕದ ವಿರುದ್ಧ ಇರಾನಿನಲ್ಲಿ ಸಾರ್ವಜನಿಕ ಅಭಿಪ್ರಾಯ ತೀವ್ರವಾಗಿ ರೂಪುಗೊಳ್ಳುತ್ತಿದೆ. ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗೆ ಇದ್ದ ಅವಕಾಶಗಳು ಕ್ಷೀಣಿಸುತ್ತಿವೆ. ಇದರಿಂದಾಗಿ ಟ್ರಂಪ್ ಆಡಳಿತ ಘೋಷಿರುವ ಮಧ್ಯಪ್ರಾಚ್ಯದಿಂದ ಅಮೆರಿಕದ ಸೈನಿಕರನ್ನು ಮರಳಿ ಕರೆತರುವ ಹಾಗೂ ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ರಾಜ್ಯವಾಗುವುದನ್ನು ತಡೆಯುವ ಎರಡೂ ಗುರಿಗಳು ಈಡೇರದಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಅಮೆರಿಕ ತೆಗೆದುಕೊಂಡಿರುವ ಈ ಏಕಪಕ್ಷೀಯ ನಿರ್ಧಾರದಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ಹಡಗು ಮಾರ್ಗಗಳು ಹಾಗೂ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಇರಾನ್ ಜೊತೆ ಉದ್ವಿಗ್ನತೆ ತಗ್ಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಗಲ್ಫ್ ಪ್ರದೇಶದ ಅದರ ಇತರೆ ಮಿತ್ರರಾಷ್ಟ್ರಗಳಲ್ಲೂ ಆತಂಕ ಉಂಟಾಗಿದೆ.
ಇರಾಕಿನಲ್ಲಿರುವ ಅಮೆರಿಕದ ಎರಡು ವಾಯುಪಡೆ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಂಡಿದೆ. ಹತ್ಯೆಯಾಗಿದ್ದ ಜನರಲ್ ಸೊಲೈಮಾನಿ ಸೇನೆಯ ಅಧಿಕಾರಿಯಾಗಿದ್ದರಿಂದ ಈಗ ಸೇನಾ ನೆಲೆಗಳ ಮೇಲೆಯೇ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ತೆಹ್ರಾನ್ ಹೇಳಿದೆ. ಅಲ್ ಅಸಾದ್ ಮತ್ತು ಎರ್ಬಿಲ್ ವಾಯುನೆಲೆಗಳ ಮೇಲಿನ ದಾಳಿಯಲ್ಲಿ ಯಾವುದೇ ಅಮೇರಿಕನ್ ಅಥವಾ ಇರಾಕಿ ಸೈನಿಕರು ಗಾಯಗೊಂಡಿಲ್ಲ. ಈ ದಾಳಿಗೆ ಪ್ರತಿಯಾಗಿ ತೆಹ್ರಾನ್ ವಿರುದ್ದ ಅಮೆರಿಕ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇನ್ನೊಂದೆಡೆ ಇರಾನ್ ಕೂಡ ಈ ದಾಳಿಗಳನ್ನು ಹಗೆತನ ಹೆಚ್ಚಿಸಲು ಬಳಸಲಾಗುತ್ತಿದೆ, ಆದರೆ ಸದ್ಯಕ್ಕೆ ನಾವು ಸಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದೆ.
ಈ ಆಶ್ವಾಸನೆಗಳ ಹೊರತಾಗಿಯೂ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಎರಡೂ ದೇಶಗಳ ನಡುವಿನ ನಿರಂತರ ಹಗೆತನವು ಇಂಧನ ಬೆಲೆ, ಜಲಸಾರಿಗೆ ಮತ್ತು ಹಡಗುಗಳ ವಿಮಾ ಬೆಲೆಗಳ ಮೇಲೆ ನೇರವಾದ ಪರಿಣಾಮ ಬೀರುತ್ತಿದೆ. ಭಾರತವು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುತ್ತಿಲ್ಲವಾದರೂ; ನವದೆಹಲಿ ತನ್ನ ಶೇಕಡಾ 80ರಷ್ಟು ಇಂಧನ ಅಗತ್ಯಗಳನ್ನು ಕೊಲ್ಲಿ ರಾಷ್ಟ್ರಗಳಿಂದಲೇ ತರಿಸಿಕೊಳ್ಳುತ್ತಿರುವುದು. ಸದ್ಯದ ಅಡೆತಡೆಗಳು ಇಂಧನ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಕಂಟೈನರ್ ಸಾಗಣೆ ಮತ್ತು ವಿಮೆಯ ವೆಚ್ಚವನ್ನು ಹೆಚ್ಚಿಸುತ್ತದೆ. ಈ ಬೆಲೆಗಳು ಹೆಚ್ಚಾಗುವುದರಿಂದ ಭಾರತದ ಆರ್ಥಿಕತೆಗೆ ಧಕ್ಕೆಯಾಗುತ್ತದೆ. ಕಂಟೇನರ್ ಹಡಗುಗಳ ಮೇಲಿನ ದಾಳಿ ಹಿನ್ನೆಲೆಯಲ್ಲಿ ಭಾರತ ತನ್ನ ಕಚ್ಚಾ ಸರಬರಾಜುಗಳನ್ನು ರಕ್ಷಿಸಿಕೊಳ್ಳಲು ಗಲ್ಫ್ ನೀರಿನಲ್ಲಿ ನೌಕಾ ಸೇನೆಗಳನ್ನು ನಿಯೋಜಿಸಿದೆ. ಈ ಜಾಗರೂಕತಾ ಕ್ರಮದಿಂದ ತೈಲವನ್ನು ಆಮದು ಮಾಡಿಕೊಳ್ಳುವ ಬೆಲೆಯ ಜೊತೆಗೆ ಹೆಚ್ಚುವರಿ ಹಣಕಾಸಿನ ವೆಚ್ಚ ಮಾಡಬೇಕಾಗುತ್ತದೆ, ಇದರಿಂದ ಇಂಧನ ಮತ್ತಷ್ಟು ದುಬಾರಿ ಆಗಲಿದೆ.
ತೈಲವನ್ನು ಹೊರತುಪಡಿಸಿ, ಕ್ಷಿಪಣಿ ದಾಳಿಗಳಾದರೆ ಅಥವಾ ಇತರೆ ರೀತಿಯ ದಾಳಿಗಳಾದರೆ ಅರೇಬಿಯಾದ ದೇಶಗಳಲ್ಲಿ ವ್ಯಾಪಾರ ಮತ್ತು ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಭಾರತದ ವಲಸಿಗರು ಅಪಾಯಕ್ಕೆ ಸಿಲುಕಬಹುದು. ಕೆಲವು ಅಂದಾಜಿನ ಪ್ರಕಾರ ಈ ಪ್ರದೇಶದಲ್ಲಿ ಸುಮಾರು 8 ದಶಲಕ್ಷ ಭಾರತೀಯರು ವಾಸಿಸುತ್ತಿದ್ದು 40 ಶತಕೋಟಿ ರೂಪಾಯಿಗಳನ್ನು ಭಾರತಕ್ಕೆ ಕಳಿಸುತ್ತಿದ್ದಾರೆ. ಅಲ್ಲಿರುವ ಭಾರತೀಯ ವಲಸಿಗರ ಸುರಕ್ಷತೆ ಈಗ ಭಾರತ ಸರ್ಕಾರಕ್ಕೆ ಅತ್ಯಂತ ಕಾಳಜಿಯ ವಿಷಯವಾಗಿದೆ. ನವದೆಹಲಿಯು ಈ ಹಿಂದೆ ಇಲ್ಲಿನ ಸಂಘರ್ಷ ವಲಯಗಳಿಂದ ತನ್ನ ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರ ಮಾಡಿತ್ತು.
ಇಲ್ಲಿ ಉಂಟಾಗುವ ಮೂರನೇ ಪ್ರಮುಖ ಪರಿಣಾಮವೆಂದರೆ ಈ ಪ್ರದೇಶದ ರಾಷ್ಟ್ರಗಳ ಜೊತೆ ಭಾರತದ ಬೆಳೆಯುತ್ತಿರುವ ವ್ಯಾಪಾರ ನಿಧಾನಗತಿಯ ಸ್ವರೂಪ ಪಡೆದುಕೊಳ್ಳಲಿದೆ. ಭಾರತವು ‘ವಿಸ್ತೃತ ನೆರೆಹೊರೆಯಲ್ಲಿ’ ತನ್ನ ಸಂಬಂಧವನ್ನು ಬಲಪಡಿಸುವ ನೀತಿ ಅನುಸರಿಸುತ್ತಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಓಮನ್, ಸೌದಿ ಅರೇಬಿಯಾ, ಮತ್ತು ಯುಎಇ ಮತ್ತಿತರ ಪ್ರದೇಶಗಳ ಜೊತೆ ಭಾರತವು ತನ್ನ ಆರ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಿದೆ. ಉದ್ವಿಗ್ನತೆ ಹೆಚ್ಚಾಗುವುದರಿಂದ ಈ ಸಂಬಂಧಗಳ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗುತ್ತದೆ.
ಈ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಜೊತೆ ಮಾತನಾಡಿದರು. ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಭದ್ರತಾ ಪರಿಸ್ಥಿತಿ ಕುರಿತು ಇಬ್ಬರು ಸಚಿವರು ಚರ್ಚಿಸಿದರು. ಸಿಂಗ್ ಅವರು ಎಸ್ಪರ್ ಅವರಿಗೆ ಕೊಲ್ಲಿ ಪ್ರದೇಶದಲ್ಲಿ ಭಾರತದ ಹಕ್ಕು ಹಾಗೂ ಹಿತಾಸಕ್ತಿಗಳನ್ನು ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ನವದೆಹಲಿ ಎಷ್ಟು ಕಾಳಜಿ ಹೊಂದಿದೆ ಎಂಬುದನ್ನು ತಿಳಿಸಿದರು. ದ್ವಿಪಕ್ಷೀಯ ರಕ್ಷಣಾ ಸಹಕಾರ ಬಲಪಡಿಸುವ ದೃಢ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು. ಎಸ್ಪರ್ ಕೂಡ ಗಲ್ಫ್ ಪ್ರದೇಶದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತೀಯ ರಕ್ಷಣಾ ಸಚಿವರಿಗೆ ವಿವರಿಸಿದರು. ಭಾರತವು ಇಲ್ಲಿನ ತನ್ನ ಕಾಳಜಿ ಹಾಗೂ ಆಸಕ್ತಿಗಳನ್ನು ವಿನಿಮಯ ಮಾಡಿಕೊಂಡಿತು.
ಪಾಕಿಸ್ತಾನದಿಂದ ಹಾದುಹೋಗಿ ಮಧ್ಯ ಏಷ್ಯಾ ಹಾಗೂ ಅಫ್ಘಾನಿಸ್ತಾನದ ಜೊತೆ ವ್ಯಾಪಾರದ ಪ್ರಮುಖ ಕೊಂಡಿಯಾಗಿರುವ ಆಯಕಟ್ಟಿನ ಚಬಹಾರ್ ಬಂದರು ಅಭಿವೃದ್ಧಿಯಲ್ಲಿ ಭಾರತ ಕೂಡ ಇರಾನ್ ಜೊತೆ ಪಾಲುದಾರ ರಾಷ್ಟ್ರ. ಇರಾನ್ ಮೇಲಿನ ನಿರ್ಬಂಧಗಳಿಂದಾಗಿ ಭಾರತೀಯ ಕಂಪನಿಗಳ ಮೇಲೆ ಬಂಡವಾಳ ಹೂಡಿಕೆಗೆ ತೊಡಕಾಗುತ್ತದೆ, ಅಸ್ಥಿರತೆಯಿಂದಾಗಿ ಬಂದರಿನ ಹೂಡಿಕೆ ಮತ್ತಷ್ಟು ಕಡಿಮೆ ಆಗುತ್ತದೆ. ಈ ಪ್ರದೇಶದಲ್ಲಿ ಭಾರತದ ದೊಡ್ಡ ಸಂಪರ್ಕ ಯೋಜನೆಗಳಿಗೆ ಧಕ್ಕೆ ಉಂಟುಮಾಡುತ್ತದೆ.
ಭಾರತವು ಸದ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಹಾಗೂ ಉದ್ವಿಗ್ನತೆ ನಿಗ್ರಹಿಸಲು ಬಹುಪಕ್ಷೀಯ ಪ್ರಯತ್ನಗಳಾಗುವಂತೆ ನೋಡಿಕೊಳ್ಳಬೇಕಾಗಿದೆ.
ಸ್ಕ್ರಿಪ್ಟ್: ಡಾ. ಸ್ತುತಿ ಬ್ಯಾನರ್ಜಿ, ಅಮೆರಿಕನ್ ವ್ಯವಹಾರಗಳ ಕಾರ್ಯತಂತ್ರದ ವಿಶ್ಲೇಷಕ

Comments
Post a Comment