ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೈಜ್ಞಾನಿಕ ಸಾಮರ್ಥ್ಯ
ವಿಜ್ಞಾನವು ಸಾಂಪ್ರದಾಯಿಕವಾಗಿ ಪ್ರಯೋಗಾಲಯಗಳ ನಾಲ್ಕು ಗೋಡೆಗಳ ಮಧ್ಯಲ್ಲಿಯೇ ಉಳಿದಿದೆ, ಆದರೆ ಭಾರತದ ಗಮನವು ಈಗ ಸಾಮಾಜಿಕವಾಗಿ ಪ್ರಸ್ತುತವಾಗುವತ್ತ ಹರಿದಿದ್ದು ಇದು ರಾಷ್ಟ್ರವು ಪ್ರಗತಿಯ ಪಥದತ್ತ ಸಾಗಲು ಸಹಾಯ ಮಾಡುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ವೈಜ್ಞಾನಿಕ ಸಭೆಯ “ಮಹಾಕುಂಭ” ಎಂದೇ ವರ್ಣಿಸಲಾಗುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107ನೇ ಆವೃತ್ತಿಯಲ್ಲಿ ವಿಜ್ಞಾನವು ಹೆಚ್ಚು ಜನರಿಗೆ ತಲುಪುವ ಉದ್ದೇಶದಿಂದ ಭಾರತದ ರಾಷ್ಟ್ರೀಯ ನಾಯಕರು ಲ್ಯಾಬ್ ಮತ್ತು ಭೂಮಿ, ಲ್ಯಾಬ್ ಮತ್ತು ಕೆಲಸದ ಮಹಡಿ ಅಥವಾ ಲ್ಯಾಬ್ ಮತ್ತು ಆರೋಗ್ಯ ಸೌಲಭ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕೆಂದು ಕರೆ ಕೊಟ್ಟರು.
ಈ ವರ್ಷದ ಭಾರತೀಯ ವಿಜ್ಞಾನ ಕಾಂಗ್ರೆಸ್ ಆವೃತ್ತಿಯ ವಿಷಯವೆಂದರೆ, ‘ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ’. “ತಂತ್ರಜ್ಞಾನವು ಸರ್ಕಾರ ಮತ್ತು ಸಾಮಾನ್ಯ ಜನರ ನಡುವಿನ ಸೇತುವೆಯಾಗಿದೆ. ತಂತ್ರಜ್ಞಾನವು ತ್ವರಿತ ಅಭಿವೃದ್ಧಿ ಮತ್ತು ಸರಿಯಾದ ಅಭಿವೃದ್ಧಿಗೆ ಸಮತೋಲನ ಅಂಶವಾಗಿದೆ. ತಂತ್ರಜ್ಞಾನವು ಯಾವುದೇ ಪಕ್ಷಪಾತ ಹೊಂದಿರುವುದಿಲ್ಲ ಅಥವಾ ಅದು ಯಾವುದೇ ಬಣವಾಗಿರುವುದಿಲ್ಲ, ತಟಸ್ಥ ನಿಲುವು ಹೊಂದಿರುತ್ತದೆ. ಮಾನವ ಸಂವೇದನೆ ಹಾಗೂ ಆಧುನಿಕ ತಂತ್ರಜ್ಞಾನದ ನಡುವೆ ಸಮನ್ವಯ ಉಂಟಾದರೆ ಅಭೂತಪೂರ್ವ ಫಲಿತಾಂಶ ಪ್ರತಿಫಲಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಏರಿಕೆ ವಿಷಯದಲ್ಲಿ ಜಗತ್ತು ಗಂಭೀರವಾದ ಬಿಕ್ಕಟ್ಟು ಎದುರಿಸುತ್ತಿದೆ. ಆಸ್ಟ್ರೇಲಿಯಾದಲ್ಲಿ ಆದ ಭಾರಿ ಬುಷ್‌ಫೈರ್ ಅಥವಾ ಅಮೆಜಾನ್ ಕಾಡುಗಳಲ್ಲಿ ಕಂಡುಬಂದ ಬೆಂಕಿಯ ಹಿಂದೆ ಮಾನವನ ನಿರ್ಲಕ್ಷ್ಯ, ಉದ್ದೇಶಪೂರ್ವಕ ಅಥವಾ ಬೇರೊಂದು ಕಾರಣ ಇರಬಹುದು. ಆದರೆ ವಿಜ್ಞಾನಿಗಳು ಈ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿ ಹವಾಮಾನ ಬದಲಾವಣೆಯು ನೈಸರ್ಗಿಕ ವಿಪತ್ತುಗಳನ್ನು ತೀವ್ರಗೊಳಿಸುವ ಸ್ಪಷ್ಟ ಸೂಚನೆಯಾಗಿದೆ, ಇದು ಸಸ್ಯ ಮತ್ತು ಪ್ರಾಣಿಗಳಿಗೆ ಊಹಿಸಲಾಗದ ನಷ್ಟ ಉಂಟು ಮಾಡುತ್ತದೆ ಎಂದು
ಎಚ್ಚರಿಸಿದ್ದಾರೆ.
"ನಾವೀಗ ಘರ್ಜಿಸುವ ಬಿರುಗಾಳಿ, ಉಲ್ಬಣಗೊಳ್ಳುತ್ತಿರುವ ಬೆಂಕಿ, ಭೀಕರ ಪ್ರವಾಹಗಳು, ಬರಗಾಲ ಹಾಗೂ ಭೂಕಂಪಗಳಂತಹ ಅಸಂಖ್ಯಾತ ರೂಪದ ಪ್ರಕೃತಿಯ ಕೋಪವನ್ನು ನೋಡುತ್ತಿದ್ದೇವೆ. ನಾವೆಲ್ಲರೂ ಒಂದಾಗಿ ಹವಾಮಾನ ಬದಲಾವಣೆಗೆ ಪರಿಹಾರವನ್ನು ಕಂಡುಕೊಳ್ಳಬೇಕು" ಎಂದು ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ತಮ್ಮ ಭಾಷಣದಲ್ಲಿ ಎಚ್ಚರಿಸಿದರು.
ಜಗತ್ತಿನ ಇನ್ನೊಂದು ಕಡೆ ನಡೆಯುತ್ತಿರುವ ಇಂತಹ ಅನಾಹುತಗಳ ಬಗ್ಗೆ ಭಾರತ ಸುಮ್ಮನೆ ಇರಲು ಸಾಧ್ಯವಿಲ್ಲ. ಪ್ರಪಂಚವು ಅನೇಕ ವಿಷಯಗಳಲ್ಲಿ ಬೆಸೆದುಕೊಂಡಿರುವುದರಿಂದ ಹವಾಮಾನ ಬದಲಾವಣೆಯ ಪ್ರಭಾವವನ್ನು ದೂರವಿಡುವುದು ಸುಲಭವಲ್ಲ; ಅದು ನಮ್ಮ ಕೈಯಲ್ಲಿ ಇದೆ.
"ನಮ್ಮ ಎಲ್ಲಾ ಪ್ರಯತ್ನಗಳ ತಳಹದಿ ಜೀವನದ ಗುಣಮಟ್ಟ ಸುಧಾರಣೆಗಾಗಿಯೇ ಹೊರತು ಸಮೃದ್ಧಿ ಹೆಚ್ಚಿಸಿಕೊಳ್ಳುವುದಕ್ಕಲ್ಲ" ಎಂದು ಉಪರಾಷ್ಟ್ರಪತಿ ನಾಯ್ಡು ಅಭಿಪ್ರಾಯಪಟ್ಟರು.
ವಿಶಾಲವಾದ ದೇಶದ ಅಭಿವೃದ್ಧಿ ಗುರಿಗಳನ್ನು ಇಟ್ಟುಕೊಂಡೇ ಪರಿಸರವನ್ನು ರಕ್ಷಿಸುವ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಸಮುದಾಯವು ತಮ್ಮ ತಲೆಯನ್ನು ಒಟ್ಟುಗೂಡಿಸಬೇಕಾಗಿದೆ. ಭಾರತದಲ್ಲಿ ಹಲವಾರು ರಾಷ್ಟ್ರೀಯ ಸಮಸ್ಯೆಗಳಿವೆ, ಕೃಷಿ ಅಥವಾ ಆರೋಗ್ಯ ರಕ್ಷಣೆ ಇರಲಿ ತುರ್ತು ವೈಜ್ಞಾನಿಕ ಕ್ರಮ ಬೇಕು ಅಷ್ಟೇ. ಕೃಷಿ ಬಿಕ್ಕಟ್ಟು ಅಥವಾ ಹೆಚ್ಚುತ್ತಿರುವ ರೋಗಗಳ ಸನಸ್ಯೆಯನ್ನು ಸಂವಹನ ಹಾಗೂ ಸಂವಹನೇತರ ಮಾರ್ಗಗಳ ಮೂಲಕ ಬಗೆಹರಿಸಿ ಭಾರತೀಯ ಜನಸಂಖ್ಯೆಯ ಜೀವನಮಟ್ಟ ಸುಧಾರಿಸುವ ಅಗತ್ಯವಿದೆ.
ತಂತ್ರಜ್ಞಾನದಿಂದ ಸಾಮಾಜಿಕ ಯೋಜನೆಗಳು, ಕೃಷಿ ವಿಧಾನಗಳು ಹಾಗೂ ಆರೋಗ್ಯ ರಕ್ಷಣಾ ಕ್ಷೇತ್ರಗಳು ಸುಧಾರಿಸಿವೆ. ಆದರೆ ಇದು ಸಾಮಾಜಿಕ ಸರಪಳಿ ಹಾಗೂ ಭೌಗೋಳಿಕ ವ್ಯಾಪ್ತಿಯ ಕೊನೆಯ ವ್ಯಕ್ತಿಯನ್ನೂ ತಲುಪುವಂತಾಗಬೇಕು. ಇದು ನಮ್ಮ ದೇಶದ ವಿಶಾಲತೆ ಹಾಗೂ ಜನಸಂಖ್ಯೆಯ ಗಾತ್ರ ನೋಡಿದರೆ ಭಯ ಆಗುವ ವಿಷಯವಾಗಿದೆ. ನಮ್ಮ ಯೋಜಕರು, ನಿರ್ವಾಹಕರು ಮತ್ತು ವಿಜ್ಞಾನಿಗಳಿಗೂ ಇದು ಸವಾಲಾಗಿದೆ.
ನಾವು ಪ್ರಕಟಿಸಿದ ಸಂಶೋಧನಾ ಪ್ರಬಂಧಗಳ ಸಂಖ್ಯೆ ಅಥವಾ ಖರ್ಚು ಮಾಡಿದ ಹಣದ ಪ್ರಕಾರ ವೈಜ್ಞಾನಿಕ ಸಾಧನೆಗಳನ್ನು ಅಳೆಯಲು ಒಲವು ತೋರುತ್ತಿದ್ದರೂ, ಇದರ ನಿಜವಾದ ಪರೀಕ್ಷೆ “ನಮ್ಮ ಸಾಮೂಹಿಕ ಭವಿಷ್ಯಕ್ಕೆ ಧಕ್ಕೆ ಬರದಂತೆ ನಮ್ಮ ಇಂದಿನ ಸವಾಲುಗಳಿಗೆ ಸೂಕ್ತವಾದ ಪರಿಹಾರಗಳನ್ನು ಕಂಡುಹಿಡಿಯಲು ಇದು ಸಹಾಯ ಮಾಡಿವೆಯೇ” ಎಂಬುದಾಗಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.
ಜರ್ಮನಿಯ ನೊಬೆಲ್ ಪ್ರಶಸ್ತಿ ವಿಜೇತ ಸ್ಟೀಫನ್ ಡಬ್ಲ್ಯೂ ಹೆಲ್ “ದೊಡ್ಡ ಆವಿಷ್ಕಾರಗಳನ್ನು ಯೋಜಿಸಲಾಗುವುದಿಲ್ಲ. ಅದೇ ರೀತಿ ವಿಜ್ಞಾನದಲ್ಲಿ ಯಾರೊಬ್ಬರೂ ಭ್ರಮೆಯನ್ನು ಹೊಂದಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಭಾರತೀಯ ನಾಯಕತ್ವ ರೂಪಿಸಿದ ಮಾರ್ಗಸೂಚಿ ಭಾರತೀಯರ ಸರಾಸರಿ ಆಕಾಂಕ್ಷೆಗಳು ಮತ್ತು ಬೇಡಿಕೆಗಳಿಗೆ ತಕ್ಕಂತೆ ಇಲ್ಲದಿರಬಹುದು ಅಥವಾ ನೈಜ-ಪ್ರಪಂಚದ ಅನ್ವಯಗಳು ತಕ್ಷಣವೇ ಗೋಚರಿಸದ ಡೊಮೇನ್‌ಗಳಲ್ಲಿ 'ನೀಲಿ-ಆಕಾಶ ಸಂಶೋಧನೆ' ಅಥವಾ ಸಂಶೋಧನೆಗಾಗಿ ನರಕದ ಕರೆ ಎಂಬಂತಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತವು ಮಾನವ ಸಂಪನ್ಮೂಲಗಳನ್ನು ಹೊಂದಿದ್ದು ವೈಜ್ಞಾನಿಕ ಮನೋಧರ್ಮದ ಇತಿಹಾಸ ಸೃಷ್ಟಿಗೆ ಕೊಡುಗೆ ನೀಡಿದೆ. ಇಲ್ಲಿನ ಹಲವಾರು ಅಪ್ರತಿಮ ವಿಜ್ಞಾನಿಗಳಾದ ಸರ್ ಸಿ.ವಿ. ರಾಮನ್, ಮೇಘನಾಡ್ ಸಹಾ, ಶ್ರೀನಿವಾಸ ರಾಮಾನುಜನ್, ಹೋಮಿ ಜೆ. ಭಾಬಾ, ಜಗದೀಶ್ ಚಂದ್ರ ಬೋಸ್ ಮತ್ತಿತರರು ಅಂತಾರಾಷ್ಟ್ರೀಯ ವರ್ಣಪಟಲದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇದು ಯುವ ಪರಿಸರ ವ್ಯವಸ್ಥೆಯನ್ನು ವೈಜ್ಞಾನಿಕ ಹಾದಿಗಳಲ್ಲಿ ಉತ್ತೇಜಿಸುವ ರಾಷ್ಟ್ರೀಯ ಪರಿಸರ ವ್ಯವಸ್ಥೆಯನ್ನು ಸಹ ಹೊಂದಿದೆ. ಅಲ್ಲದೆ ಪ್ರಧಾನಿ ಮೋದಿ ಹೇಳಿದಂತೆ ಯಾವುದೇ ಪರಿಹಾರವನ್ನು ತಪ್ಪಿಸುವ ನಮ್ಮ ಅನೇಕ ಮೂಲಭೂತ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ದೇಶವನ್ನು ವೈಜ್ಞಾನಿಕವಾಗಿ ನೆಲಕ್ಕೆ ಬೇರೂರಿಸುವಂತೆ ಮಾಡಲು ನಾವು ‘ಹೊಸತನ, ಪೇಟೆಂಟ್, ಉತ್ಪಾದನೆ ಮತ್ತು ಸಮೃದ್ಧಿ'ಯ ಕಡೆ ಗಮನ ಹರಿಸಬೇಕಾಗಿದೆ.
ಸ್ಕ್ರಿಪ್ಟ್: ಎನ್. ಭದ್ರಾನ್ ನಾಯರ್, ಕಾರ್ಯನಿರ್ವಾಹಕ ಸಂಪಾದಕ, ಇಂಡಿಯನ್ ಸೈನ್ಸ್ ಜರ್ನಲ್
Comments
Post a Comment