ಭಾರತ-ಲಾಟ್ವಿಯಾ ಸಂಬಂಧಕ್ಕೆ ಹೊಸ ಹುರುಪು
ಲಾಟ್ವಿಯಾದ ವಿದೇಶಾಂಗ ಮಂತ್ರಿ ಎಡ್ಗರ್ಸ್ ರಿಂಕೆವಿಕ್ಸ್ ಅವರು ಭಾರತಕ್ಕೆ ನೀಡಿದ ಭೇಟಿ ಲಾಟ್ವಿಯಾದೊಂದಿಗಿನ ದ್ವಿಪಕ್ಷೀಯ ಸಂಬಂಧದ ಆವೇಗವನ್ನು ಮುಂದಿಡುತ್ತದೆ.
ಸೆಪ್ಟೆಂಬರ್ 2016 ರಲ್ಲಿ, ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಲಾಟ್ವಿಯಾಕ್ಕೆ ಭೇಟಿ ನೀಡಿದ್ದರು. ಲಾಟ್ವಿಯಾದ ಪ್ರಧಾನಿ 2017 ರ ನವೆಂಬರ್‌ನಲ್ಲಿ ಭಾರತಕ್ಕೆ ಮೊದಲ ಭೇಟಿ ನೀಡಿದರು. ಭಾರತದ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಆಗಸ್ಟ್ 2019 ರಲ್ಲಿ ಲಾಟ್ವಿಯಾಕ್ಕೆ ಭೇಟಿ ಕೊಟ್ಟಿದ್ದರು.
ಲಾಟ್ವಿಯಾದೊಂದಿಗೆ ಭಾರತದ ಸಂಬಂಧವು ನೂರು ವರ್ಷಗಳ ಹಿಂದಕ್ಕೆ ಹೋಗುತ್ತದೆ. 22 ಸೆಪ್ಟೆಂಬರ್ 1921 ರಂದು, ಲಾಟ್ವಿಯಾ ಲೀಗ್ ಆಫ್ ನೇಷನ್ಸ್‌ನ ಸ್ವತಂತ್ರ ಸದಸ್ಯತ್ವ ಪಡೆಯಿತು. 1920ರ ಜನವರಿ 10 ರಿಂದ ಲೀಗ್‌ನ ಮೂಲ ಸಂಸ್ಥಾಪಕ-ಸದಸ್ಯರಾಗಿ, ಭಾರತವು ವಿಶ್ವದ ಈ ಬಹುಪಕ್ಷೀಯ ಸಂಘಟನೆಗೆ ಲಾಟ್ವಿಯಾದ ಸದಸ್ಯತ್ವವನ್ನು ಬೆಂಬಲಿಸಿತು.
ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಹಕಾರವು ಭಾರತ ಮತ್ತು ಲಾಟ್ವಿಯಾ ನಡುವೆ ಸಂಪರ್ಕಗಳನ್ನು ಅಭಿವೃದ್ಧಿಪಡಿಸಿದ ಕ್ಷೇತ್ರವಾಗಿತ್ತು. ಲಾಟ್ವಿಯಾದ ಬೌದ್ಧಿಕ ಸಹಕಾರಕ್ಕಾಗಿ ರಾಷ್ಟ್ರೀಯ ಸಮಿತಿಯನ್ನು 1923 ರಲ್ಲಿ ರಿಗಾ ವಿಶ್ವವಿದ್ಯಾಲಯದಲ್ಲಿ ಲಾಟ್ವಿಯನ್ ವಿದೇಶಾಂಗ ಸಚಿವಾಲಯದ ಸಹಾಯದಿಂದ ಸ್ಥಾಪಿಸಲಾಯಿತು. ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಲೀಗ್‌ನ ಅಂತರರಾಷ್ಟ್ರೀಯ ಸಮಿತಿಯ ಸದಸ್ಯರಾಗಿದ್ದರು. 1946 ರಲ್ಲಿ ಪ್ಯಾರಿಸ್‌ನಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಸಂಸ್ಥೆ (ಯುನೆಸ್ಕೋ) ಸ್ಥಾಪಿಸುವಲ್ಲಿ ಈ ಸಮಿತಿ ದೊಡ್ಡ ಪಾತ್ರ ವಹಿಸಿದೆ.
13 ಜನವರಿ 2019ರಂದು, ಲಾಟ್ವಿಯಾದ ವಿದೇಶಾಂಗ ಸಚಿವರು ನವದೆಹಲಿಯ ಲಾಟ್ವಿಯನ್ ರಾಯಭಾರ ಕಚೇರಿಯಲ್ಲಿ ಜೆಎನ್‌ಯು ಸಂಸ್ಥೆಯ ಪ್ರೊಫೆಸರ್ ಸಾಧನಾ ನೈಥಾನಿ ಅವರ “ಬಾಲ್ಟಿಕ್ ಇತಿಹಾಸದಲ್ಲಿ ಜಾನಪದ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಮಹತ್ವದ ಕೃತಿ ಬಾಲ್ಟಿಕ್ ಜಾನಪದ ಗೀತೆಗಳ ಕಥೆಯನ್ನು ಮತ್ತು ಸ್ವಾತಂತ್ರ್ಯ ಚಳುವಳಿಗಳ ಮೇಲೆ ಬೆಳಕು ಚೆಲ್ಲಿದೆ.
ಮಹಾತ್ಮ ಗಾಂಧಿಯವರ ಮಾತಿನಂತೆ ಭಾರತ ತನ್ನ ಸ್ವಾತಂತ್ರ್ಯವನ್ನು ಅಹಿಂಸೆ ಮೂಲಕ ಪಡೆದುಕೊಂಡಿತು. ಅಹಿಂಸೆಯನ್ನು ಬಳಸುವಲ್ಲಿ ಭಾರತದ ಯಶಸ್ಸಿನ ಬಲವಾದ ಅರಿವು ಲಾಟ್ವಿಯಾದಲ್ಲಿ ಪ್ರತಿಧ್ವನಿಸಿದೆ. ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯ ಮೂಲಕ 1991 ರಲ್ಲಿ ಸ್ವತಂತ್ರ ಲಾಟ್ವಿಯಾ ಪುನರುಜ್ಜೀವನವನ್ನು ಭಾರತ ಸ್ವಾಗತಿಸಿತು. ಲಾಟ್ವಿಯನ್ ವಿದೇಶಾಂಗ ಸಚಿವ ರಿಂಕೆವಿಕ್ಸ್ ಅವರು ರಾಜ್ ಘಾಟ್ ನಲ್ಲಿರುವ ಗಾಂಧೀಜಿಯವರ ಸಮಾಧಿಗೆ ಮಾಲಾರ್ಪಣೆ ಮಾಡುವ ಮೂಲಕ ತಮ್ಮ ಅಧಿಕೃತ ಭೇಟಿಯನ್ನು ಪ್ರಾರಂಭಿಸಿದರು.
ಇಂದು ಭಾರತ ಮತ್ತು ಲಾಟ್ವಿಯಾ ನಡುವಿನ ಸಹಕಾರವನ್ನು ಬಲಗೊಳ್ಳುತ್ತಿದೆ. ರಿಗಾ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಸುಮಾರು 1500 ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ತಾಂತ್ರಿಕ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ. ವಿಶ್ವವಿದ್ಯಾನಿಲಯವು 2013ರಿಂದ ಭಾರತೀಯ ಅಧ್ಯಯನ ಮತ್ತು ಸಂಸ್ಕೃತಿ ಕೇಂದ್ರವನ್ನು ತೆರೆಯಿತು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಬಾಲ್ಟಿಕ್ ಅಧ್ಯಯನ ವಿಭಾಗ ಹರಿದ್ವಾರದ ದೇವ್ ಸಂಸ್ಕೃತ ವಿಭಾಗ "ಇಂಟರ್ನ್ಯಾಷನಲ್ ಜರ್ನಲ್ ಆಫ್ ಇಂಡೋ-ಬಾಲ್ಟಿಕ್ ಕಲ್ಚರ್ ಅಂಡ್ ಸ್ಟಡೀಸ್" ಅನ್ನು ಪ್ರಕಟಿಸಿದೆ. ಈ ಮೂಲಕ ದ್ವಿಪಕ್ಷೀಯ ಶೈಕ್ಷಣಿಕ ಸಹಕಾರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಲಾಟ್ವಿಯಾ ಬಾಲ್ಟಿಕ್ ಸಮುದ್ರದ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಒಂದಾಗಿದೆ. ತಮ್ಮ ನಾಗರಿಕರ ಸಬಲೀಕರಣಕ್ಕಾಗಿ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸಲು ಡಿಜಿಟಲ್ ತಂತ್ರಜ್ಞಾನದ ಬಳಕೆಗೆ ಅದು ಆದ್ಯತೆ ನೀಡಿದೆ. ಭಾರತ ತನ್ನ ಡಿಜಿಟಲ್ ಇಂಡಿಯಾ ಕಾರ್ಯಕ್ರಮದೊಂದಿಗೆ ಈ ಆದ್ಯತೆಯನ್ನು ಹಂಚಿಕೊಳ್ಳುತ್ತದೆ. ಡಿಜಿಟಲ್ ಕ್ಷೇತ್ರದಲ್ಲಿ ಲಾಟ್ವಿಯಾ ಮತ್ತು ಭಾರತದ ನಡುವಿನ ಸಹಕಾರಕ್ಕೆ ಅವಕಾಶವಿದೆ. ಉದ್ಯೋಗಕ್ಕಾಗಿ, ವಿಶೇಷವಾಗಿ ಮಹಿಳೆಯರಿಗೆ, ಡಿಜಿಟಲ್ ಆರ್ಥಿಕತೆಯಲ್ಲಿ ಕೌಶಲ್ಯಗಳನ್ನು ನೀಡುವುದಕ್ಕೆ ಮಹತ್ವ ನೀಡಲಾಗಿದೆ.
ಮಾರ್ಚ್ 2015 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಮಹಾಸಾಗರದಲ್ಲಿ ಭಾರತದ ಕಡಲ ಹಿತಾಸಕ್ತಿಗಳನ್ನು 'ಭದ್ರತೆ ಮತ್ತು ಬೆಳವಣಿಗೆ’ (ಸಾಗರ್) ನೀತಿಯೊಳಗೆ ಸೇರಿಸಿದರು. ರಿಗಾದ ಬಂದರು ನಿರ್ವಹಣೆಯನ್ನು ಒಳಗೊಂಡಂತೆ ಅದರ ಬಲವಾದ ಕಡಲ ಸಂಪ್ರದಾಯದೊಂದಿಗೆ; ಹಿಂದೂ ಮಹಾಸಾಗರವನ್ನು ಭದ್ರಪಡಿಸುವ ಮತ್ತು ಅಭಿವೃದ್ಧಿಪಡಿಸುವ ಭಾರತದ ಕಡಲ ತಂತ್ರಕ್ಕೆ ಲಾಟ್ವಿಯಾ ಕಾರ್ಯಸಾಧ್ಯವಾದ ಪಾಲುದಾರ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟವನ್ನು ಭಾರತದೊಂದಿಗೆ ಸಂಪರ್ಕಿಸುವ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಸೇರಿದಂತೆ ಭಾರತ ಮತ್ತು ಲಾಟ್ವಿಯಾ ನಡುವಿನ ಹೆಚ್ಚಿನ ಕಡಲ ಸಂಪರ್ಕಕ್ಕೆ ಪ್ರಚೋದನೆಯನ್ನು ನೀಡುತ್ತದೆ.
ಜೂನ್ 2020 ರಲ್ಲಿ, ಯುಎನ್ ಸೆಕ್ಯುರಿಟಿ ಕೌನ್ಸಿಲ್ ಎರಡು ವರ್ಷಗಳ ಅವಧಿಗೆ (2021-22) ಭಾರತವನ್ನು ಖಾಯಂ ಸದಸ್ಯರನ್ನಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಆದರೆ ಲಾಟ್ವಿಯಾ ಯುಎನ್ಎಸ್ಸಿಯ ಖಾಯಂ ಸದಸ್ಯನಾಗಲು ತಮ್ಮ ಉಮೇದುವಾರಿಕೆಯನ್ನು ಘೋಷಿಸಿದೆ. ಎರಡೂ ದೇಶಗಳು ಪರಿಣಾಮಕಾರಿ ಮತ್ತು ಸಮನಾದ ಬಹುಪಕ್ಷೀಯತೆಗೆ ಬದ್ಧತೆಯನ್ನು ಹಂಚಿಕೊಳ್ಳುತ್ತವೆ.
ಭಾರತ ಮತ್ತು ಲಾಟ್ವಿಯಾ ಈ ಉದ್ದೇಶವನ್ನು ಪೂರೈಸುವ ನಿರೀಕ್ಷೆಗಳು ಅಂತರರಾಷ್ಟ್ರೀಯ ಸಹಕಾರದ ತತ್ವದ ಆಧಾರ ಹಾಗೂ ಸುಧಾರಿತ ಬಹುಪಕ್ಷೀಯತೆಯನ್ನು ಅವಲಂಬಿಸಿದೆ. ಇದಕ್ಕಾಗಿ ಸೆಪ್ಟೆಂಬರ್ 21, 2020 ರಂದು ತನ್ನ 75 ನೇ ವಾರ್ಷಿಕೋತ್ಸವವನ್ನು ವಿಶ್ವಸಂಸ್ಥೆ ಸಂಭ್ರಮಿಸುವ ಸಂದರ್ಭವನ್ನು ಬಳಸಿಕೊಳ್ಳಬೇಕಿದೆ.
ಲೇಖನ : ಅಶೋಕ್ ಮುಖರ್ಜಿ, ವಿಶ್ವ ಸಂಸ್ಥೆಯ ಭಾರತದ ಮಾಜಿ ಖಾಯಂ ಪ್ರತಿನಿಧಿ

Comments
Post a Comment