ಬಾಗ್ದಾದ್‌ನಲ್ಲಿ ಯುಎಸ್-ಇರಾನ್ ಪ್ರಾಕ್ಸಿ ಸಮರ
ಯುಎಸ್ ಗೆ ನಮ್ಮ ಸಂದೇಶ ತಲುಪಿದೆ!
ಇದು ಇರಾಕ್ ರಾಜಧಾನಿ ಬಾಗ್ದಾದ್‌ನ ಹೆಚ್ಚು ಭದ್ರತೆಯನ್ನೊಳಗೊಂಡ ‘ಹಸಿರು ವಲಯ’ದಲ್ಲಿರುವ ಯುಎಸ್ ರಾಯಭಾರ ಕಚೇರಿ ಸುತ್ತಾ ಪ್ರತಿಭಟನೆ ನಡೆಸುತ್ತಿದ್ದ ಇರಾನ್ ಪರ ಪ್ರತಿಭಟನಾಕಾರರ ಮಾತು. ಟ್ರಂಪ್ ಆಡಳಿತ ಹಾಗೂ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡುವೆ ಸುದೀರ್ಘವಾಗಿ ನಡೆಯುತ್ತಿದ್ದ ವಾಕ್ಸಮರ ಈಗ ಇನ್ನಷ್ಟು ವಿಷಮಗೊಂಡಿದ್ದು ಇರಾನ್ ನಲ್ಲಿ ಅಮೆರಿಕಾದ ಗುತ್ತಿಗೆದಾರನ ಹತ್ಯೆ ಮಾಡಲಾಗಿದೆ ಹಾಗೂ ಇರಾನ್ ಪರ ಮಿಲಿಟಂಟ್ ಗಳು ನಡೆಸಿದ ದಾಳಿಯಲ್ಲಿ ಕೆಲವು ಅಮೇರಿಕನ್ ಸೈನಿಕರು ಗಾಯಗೊಂಡಿದ್ದಾರೆ.
ಈ ಘಟನಾವಳಿಗಳು ಇರಾನಿನ ಐದು ಸ್ಥಳಗಳ ಮೇಲೆ ದಾಳಿ ನಡೆಸುವಂತೆ ತನ್ನ ಅರಸೇನಾ ಪಡೆಗಳಿಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಆದೇಶಿಸುವುದಕ್ಕೂ ಕಾರಣವಾಗಿದೆ. ಈ ದಾಳಿಯಲ್ಲಿನ ಕನಿಷ್ಠ 25 ಜನ ಸಾವನ್ನಪ್ಪಿದ್ದಾರೆ ಮತ್ತು ಅಷ್ಟೇ ಸಂಖ್ಯೆಯ ಜನ ಗಾಯಗೊಂಡಿದ್ದಾರೆ. ಇದು ಬಾಗ್ದಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸುವಂತೆ ಇರಾಕಿನಲ್ಲಿರುವ ಇರಾನಿ ಪ್ರಜೆಗಳನ್ನು ಪ್ರಚೋದಿಸಿದೆ. ಪ್ರತಿಭಟನಾಕಾರರು ಕಾಂಪೌಂಡ್ ಹಾರಿ ಯುಎಸ್ ರಾಯಭಾರ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಕಾಂಪೌಂಡ್ ಒಳಗಡೆ ಇದ್ದ ಯುಎಸ್ ನೌಕಾಪಡೆಯ ಸೇನಾನಿಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಬೇಕಾಯಿತು.
ಇರಾನ್ ಬೆಂಬಲಿತ ಪಾಪ್ಯುಲರ್ ಮೊಬಲೈಸೇಷನ್ ಫೋರ್ಸ್ಡ್ (ಪಿಎಂಎಫ್) ಭಾಗವಾಗಿರುವ ಶಿಯಾ ಅರೆಸೈನಿಕ ಪಡೆಗಳಾದ ಪಾತ್ ಆಫ್ ಗಾಡ್ ನ ಬ್ರಿಗೇಡ್ಸ್ ಕಟೇಬ್ ಹೆಜ್ಬೊಲ್ಲಾ ಯೋಧರು ಇರಾಕ್ ಮತ್ತು ಸಿರಿಯನ್ ಗಡಿಯಲ್ಲಿ ಯುಎಸ್ ಸ್ಥಾನದ ಮೇಲೆ ಆರಂಭಿಕ ದಾಳಿಯನ್ನು ನಡೆಸಿದ್ದಾರೆ. 2003ರ ಮಾರ್ಚ್ ನಲ್ಲಿ ಯುಎಸ್ ನೇತೃತ್ವದಲ್ಲಿ ಇರಾಕ್ ಮೇಲೆ ದಾಳಿ ನಡೆದ ನಂತರ ಕತೇಬ್ ಹಿಜ್ಬೊಲ್ಲಾ ಇರಾಕಿ ಅಂತರ್ಯುದ್ಧದಲ್ಲಿ ಸಕ್ರಿಯವಾಗಿದೆ ಹಾಗೂ ತೊಂದರೆಗೊಳಗಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರನ್ನು ಬೆಂಬಲಿಸಿ ಸಿರಿಯನ್ ಅಂತರ್ಯುದ್ಧದಲ್ಲೂ ಭಾಗಿಯಾಗಿದೆ.
ತಮ್ಮ ಅರೆಸೈನಿಕ ಪಡೆಗಳು ಇರಾನಿನ ಐದು ಸ್ಥಳಗಳಲ್ಲಿ ಕಳೆದ ಡಿಸೆಂಬರ್ 29ರಂದು ನಡೆಸಿದ ಯುಎಸ್ ದಾಳಿಯನ್ನು ಟ್ವೀಟ್ ಮೂಲಕ ವಿವರಿಸಿರುವ ಅಮೇರಿಕಾ ಅಧ್ಯಕ್ಷ ಟ್ರಂಪ್, "ಈಗ ಇರಾನ್-ಇರಾಕ್ ನಲ್ಲಿರುವ ಯುಎಸ್ ರಾಯಭಾರ ಕಚೇರಿ ಮೇಲೆ ಆಕ್ರಮಣ ನಡೆಯುತ್ತಿದೆ. ಇದಕ್ಕೆ ನಾವು ಬಲವಾಗಿ ಪ್ರತಿಕ್ರಿಯಿಸಿದ್ದೇವೆ ಮತ್ತು ಯಾವಾಗಲೂ ಇದೇ ರೀತಿ ಮಾಡಲಿದ್ದೇವೆ" ಎಂದಿದ್ದಾರೆ. ಬಳಿಕ ಯುಎಸ್ ಸಿಬ್ಬಂದಿಯ ಸುರಕ್ಷತೆಯ ಭರವಸೆ ನೀಡಿದ ಇರಾಕ್ ಸರ್ಕಾರದ ತ್ವರಿತ ಪ್ರತಿಕ್ರಿಯೆಗೆ ಧನ್ಯವಾದಗಳನ್ನು ತಿಳಿಸಿದರು. ನಂತರ ಹೊಸ ವರ್ಷದ ವಿಷಯ ಪ್ರಸ್ತಾಪಿಸಿದ್ದಾರೆ. "ಕಳೆದುಹೋದ ನಮ್ಮವರ ಜೀವಗಳಿಗೆ ಮತ್ತು ಹಾನಿಯಾಗಿರುವ ನಮ್ಮ ಆಸ್ತಿಪಾಸ್ತಿಗಳಿಗೆ ಸಂಪೂರ್ಣವಾಗಿ ಇರಾನ್ ಹೊಣೆಯಾಗಿದ್ದು ಇದಕ್ಕಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ! ಇದು ಎಚ್ಚರಿಕೆ ಅಲ್ಲ, ಬೆದರಿಕೆ. ಹೊಸ ವರ್ಷದ ಶುಭಾಶಯ!" ಎಂದು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ ಬಾಗ್ದಾದ್ನಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನಿನ ಕುಡ್ಸ್ ಫೋರ್ಸ್ ಕಮಾಂಡರ್ ಮೇಜರ್ ಜನರಲ್ ಖಾಸೆಮ್ ಸೊಲೈಮಾನಿ ಮತ್ತು ಇರಾಕಿ ಮಿಲಿಟಿಯಾ ನಾಯಕ ಅಬು ಮಹ್ದಿ ಅಲ್-ಮುಹಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಈಸ್ಪರ್, ಪೆಂಟಗಾನ್ "ನಿರ್ಣಾಯಕ ರಕ್ಷಣಾತ್ಮಕ ಕ್ರಮ" ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಟ್ರಂಪ್ ಆಡಳಿತವು ಪರಮಾಣು ಒಪ್ಪಂದದಿಂದ ಹಿಂದೆ ಸರಿದದ್ದು ಮತ್ತು ಇರಾನಿನ ಇಂಧನ ಉದ್ಯಮಗಳ ಜೊತೆ ನವೀಕರಣ ಮಾಡಿಕೊಳ್ಳದಂತೆ ನಿರ್ದೇಶಿಸಿದ್ದು ಯುಎಸ್-ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ. ಇತ್ತೀಚಿನ ವಾರಗಳಲ್ಲಿ ಯುಎಸ್ ನಿರ್ಬಂಧಗಳು ಮತ್ತು ದೇಶೀಯ ಆರ್ಥಿಕ ದುರುಪಯೋಗದ ಕಾರಣದಿಂದಾಗಿ ಸಾಮಾನ್ಯ ಇರಾನಿಯನ್ನರು ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಗಿದ್ದು ಈ ಬಗ್ಗೆ ಇರಾನ್ ನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುವಂತಾಗಿದೆ.
ಇಲ್ಲಿಯವರೆಗೆ ಎರಡೂ ದೇಶದವರು ನೇರವಾಗಿ ಮುಖಾಮುಖಿ ಆಗಿಲ್ಲ. ಆದರೆ ಈಗ ಬರುತ್ತಿರುವ ವರದಿಗಳು ಇರಾನ್, ತನಗೆ ಹತ್ತಿರವಿರುವ ಕೆಲ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರುತಿಸುತ್ತಿದ್ದು ಅಲ್ಲಿರುವ ಹೆಚ್ಚಿನ ಮೌಲ್ಯದ ಅಮೆರಿಕಾ ನೆಲೆಗಳ ಮೇಲೆ ದಾಳಿ ಮಾಡಲಿದೆ ಹಾಗೂ ಟೆಹ್ರಾನ್ ವಿಷಯವನ್ನು ಮನವರಿಕೆ ಮಾಡಿಕೊಡಲಿದೆ ಎಂಬುದಾಗಿ ಹೇಳುತ್ತಿವೆ.
ಪ್ರತಿಭಟನೆಗಳನ್ನು ಹಿಂಪಡೆದ ಬಳಿಕವೂ ಟ್ರಂಪ್, "ಇರಾನ್ ದೊಡ್ಡ ಬೆಲೆ ತೆರಲಿದೆ” ಎಂದು ಎಚ್ಚರಿಸಿರುವುದನ್ನು ಅಮೇರಿಕಾದಲ್ಲಿ ಈಗ ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ನೋಡಬಹುದು. ಕಳೆದ ತಿಂಗಳು ಯುಎಸ್ ಕಾಂಗ್ರೆಸ್ ಅಧ್ಯಕ್ಷ ಟ್ರಂಪ್ ವಿರುದ್ಧ ದೋಷಾರೋಪಣೆ ನಿಲುವಳಿಯನ್ನು ಅಂಗೀಕರಿಸಿತ್ತು. ಕ್ರಿಸ್‌ಮಸ್ ರಜೆ ಮುಗಿಯುತ್ತಿದ್ದಂತೆ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಈ ವಿಷಯವನ್ನು ಸೆನೆಟ್ ಗೆ ಹಸ್ತಾಂತರಿಸುವ ಮೊದಲು ತಮ್ಮ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಹಾಗಾಗಿ ಅಧ್ಯಕ್ಷ ಟ್ರಂಪ್‌ಗೆ ವಿಷಯಾಂತರ ಮಾಡಲು ಮುಂದಾಗಿದ್ದಾರೆ. ವಿಷಯಾಂತರಿಸಲು ದೂರದ ದೇಶಗಳಲ್ಲಿ 'ಉರಿಯುತ್ತಿರುವ' ಕ್ಷಣಗಳಿಗಿಂತ ಹೆಚ್ಚು ಸೂಕ್ತವಾದ ಸಂಗತಿ ಮತ್ತೇನಿದೆ? ಮೋನಿಕಾ ಲೆವಿನ್ಸ್ಕಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೋಷಾರೋಪಣೆ ಕೇಳಿಬಂದಾಗ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ವಿಷಯಾಂತರ ಮಾಡಲು ಅಫ್ಘಾನಿಸ್ತಾನದ ಅಲ್-ಖೈದಾ ಮೇಲೆ ದಾಳಿ ನಡೆಸಿದ್ದರು.
ಆದರೆ ಎರಡೂ ಕಡೆಯವರೂ ದಾಟಲು ಇಷ್ಟಪಡದ ಕೆಂಪು ಗೆರೆಗಳಿವೆ. ಚುನಾವಣಾ ವರ್ಷದಲ್ಲಿ ಯುಎಸ್ ಅಧ್ಯಕ್ಷರು 1980ರಲ್ಲಿ ಕಾರ್ಟರ್ ಪ್ರೆಸಿಡೆನ್ಸಿಯನ್ನು ಹಾಳುಮಾಡಿದ ಒತ್ತೆಯಾಳು ಪ್ರಕರಣ ಪುನರಾವರ್ತನೆ ಆಗುವುದನ್ನು ಬಯಸುವುದಿಲ್ಲ. 444 ದಿನಗಳ ನಡೆದ ಈ ಕಥೆಯು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ನಾಲ್ಕು ದಶಕಗಳ ಕಾಲ ದ್ವೇಷದ ಬೀಜಗಳನ್ನು ಬಿತ್ತಿತ್ತು. ಯುಎಸ್ ಅಧ್ಯಕ್ಷ ಟ್ರಂಪ್ ಅಥವಾ ಇರಾನಿನ ಸುಪ್ರೀಂ ನಾಯಕ ಅಲಿ ಖಮೇನಿ ಈ ಪ್ರಸಂಗದ ಮರುಕಳಿಸುವುದನ್ನು ಬಯಸುವುದಿಲ್ಲ.
ಭಾರತವು ಈ ಪ್ರದೇಶದಲ್ಲಿ ಇಂಧನ ಸುರಕ್ಷತೆ, ಅಪಾರ ವಲಸಿಗ ಜನಸಂಖ್ಯೆ ಹಾಗೂ ಹಣ ರವಾನೆಯಿಂದಾಗಿ ಹೆಚ್ಚಿನ ಪಾಲನ್ನು ಹೊಂದಿದೆ. ವಾಸ್ತವವಾಗಿ 2017-18 ರಿಂದ ಇರಾಕ್ ಸೌದಿ ಅರೇಬಿಯಾ ಸಾಮ್ರಾಜ್ಯವನ್ನು ಬದಲಿಸಿದೆ ಮತ್ತು ಭಾರತಕ್ಕೆ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ಈಗಾಗಲೇ ಯುಎಸ್-ನಿರ್ಬಂಧಗಳು ಇಂಡೋ-ಇರಾನಿನ ಇಂಧನ ವ್ಯಾಪಾರದ ಮೇಲೆ ದುಷ್ಪರಿಣಾಮವನ್ನು ಬೀರಿವೆ. ಆದ್ದರಿಂದ ಬಾಗ್ದಾದ್‌ನಲ್ಲಿ ಯುಎಸ್-ಇರಾನ್ ನಡುವೆ ಆಗುತ್ತಿರುವ ಬೆಳವಣಿಗೆಗಳು ಮುಂದೆ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಭಾರತದ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ನಿರ್ಣಾಯಕವಾದವಾಗಿವೆ.
ಸ್ಕ್ರಿಪ್ಟ್: ಪ್ರೊ. ಪಿ.ಆರ್. ಕುಮಾರಸ್ವಾಮಿ, ಪಶ್ಚಿಮ ಏಷ್ಯನ್ ಅಧ್ಯಯನ ಕೇಂದ್ರ, ಜೆಎನ್‌ಯು
Comments
Post a Comment