ಗಲ್ಫ್ ಶಾಂತಿಗೆ ಕರೆ ನೀಡಿದ ಭಾರತ
ಕಳೆದ ಶುಕ್ರವಾರ ಅಮೆರಿಕವು ಇರಾನಿನ ಅಲ್-ಕುಡ್ಸ್ ಫೋರ್ಸ್ ಕಮಾಂಡರ್ ಮೇಜರ್ ಜನರಲ್ ಖಾಸೆಮ್ ಸೊಲೈಮಾನಿ ಅವರನ್ನು ಹತ್ಯೆ ಮಾಡಿದ ನಂತರ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬಳಿಕ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇರಾನಿ ಪ್ರತಿನಿಧಿ ಮೊಹಮ್ಮದ್ ಜಾವಿದ್ ಜರೀಫ್ ಅವರೊಂದಿಗೆ ಮಾತನಾಡಿ "ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಬಹಳ ಗಂಭೀರವಾದ ತಿರುವುಗಳನ್ನು ಪಡೆದುಕೊಳ್ಳುತ್ತಿವೆ" ಎಂದು ಎಚ್ಚರಿಸಿದರು. "ಉದ್ವಿಗ್ನತೆಯ ಮಟ್ಟ"ದ ಬಗ್ಗೆ ಗಂಭೀರವಾದ ಕಳವಳ ವ್ಯಕ್ತಪಡಿಸಿದ ಡಾ. ಜೈಶಂಕರ್, ಭಾರತವು ಎರಡೂ ದೇಶದೊಂದಿಗೆ ಸಂಪರ್ಕದಲ್ಲಿರಲು ಒಪ್ಪಿಕೊಂಡರು. 19ನೇ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲೆಂದು ಭಾರತೀಯ ವಿದೇಶಾಂಗ ಸಚಿವರು ಎರಡು ವಾರಗಳ ಹಿಂದೆ ಟೆಹ್ರಾನ್‌ನಲ್ಲಿದ್ದರು. ಹಾಗೂ ಅಲ್ಲಿನ ಅಧ್ಯಕ್ಷ ಹಸನ್ ರೂಹಾನಿ ಮತ್ತು ಜರೀಫ್ ಸೇರಿದಂತೆ ಇರಾನಿನ ಹಿರಿಯ ಅಧಿಕಾರಿಗಳನ್ನು ಭೇಟಿಯಾದರು. ಜನವರಿ 14 ರಂದು ಪ್ರಾರಂಭವಾಗಲಿರುವ ‘ರೈಸಿನಾ ಡೈಲಾಗ್’ನಲ್ಲಿ ಪಾಲ್ಗೊಳ್ಳಲು ಜರೀಫ್ ಅವರು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಇರಾಕ್, ಸಿರಿಯಾ, ಲೆಬನಾನ್ ಹಾಗೂ ಯೆಮೆನ್‌ನೊಂದಿಗೆ ಟೆಹ್ರಾನ್ ಒಪ್ಪಂದಗಳನ್ನು ನಿಭಾಯಿಸಿದ ಅಲ್ಲಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ಸೊಲೈಮಾನಿ ಹತ್ಯೆಯ ಬಳಿಕ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನಿನ ನಾಯಕರ ನಡುವಿನ ಮಾತಿನ ಯುದ್ಧ ನಡೆದ ಹಿನ್ನೆಲೆಯಲ್ಲಿ ಈ ದೂರವಾಣಿ ಕರೆ ಮಾಡಲಾಗಿತ್ತು. ವಾಸ್ತವವಾಗಿ ಇರಾನಿನ ಸುಪ್ರೀಂ ನಾಯಕ ಅಲಿ ಖಮೇನಿಯ ನಂತರ ಜನರಲ್ ಸೊಲೈಮಾನಿ ಅವರನ್ನು ಅತ್ಯಂತ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿತ್ತು.
ಇರಾನ್ ನಾಯಕರು "ಯುಎಸ್ ಗೆ ಕಠಿಣವಾದ ಪ್ರತೀಕಾರ ಕಾಯುತ್ತಿದೆ" ಎಂದು ಪ್ರತಿಜ್ಞೆ ಮಾಡಿದರು. ಇರಾನಿನ ಆಕ್ರೋಶಭರಿತ ಜನರ ಭಾವನೆಗಳನ್ನು ಪ್ರತಿನಿಧಿಸಿ ಮಾತನಾಡಿರುವ ಹಿರಿಯ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಒಬ್ಬರು "ಈ ಪ್ರದೇಶದಲ್ಲಿರುವ ಪ್ರಮುಖ ಅಮೇರಿಕನ್ ಗುರಿಗಳನ್ನು ಇರಾನ್ ಬಹಳ ಹಿಂದಿನಿಂದಲೂ ಗುರುತಿಸಿದೆ. ಇಲ್ಲಿ ಸುಮಾರು 35 ಯುಎಸ್ ಗುರಿಗಳು ಮತ್ತು ಟೆಲ್ ಅವೀವ್ ನಮ್ಮ ವ್ಯಾಪ್ತಿಯಲ್ಲಿವೆ" ಎಂದು ಹೇಳಿದ್ದಾರೆ.
ಟೆಹ್ರಾನ್ ಯಾವುದೇ ಅಮೇರಿಕನ್ ಗುರಿ ಅಥವಾ ಹಿತಾಸಕ್ತಿಗಳ ಮೇಲೆ ಆಕ್ರಮಣ ಮಾಡಿದರೆ, ಅಮೆರಿಕಾ ಗುರುತಿಸಿರುವ "ಇರಾನ್ ಮತ್ತು ಇರಾನಿನ ಸಂಸ್ಕೃತಿಯ ಬಹಳ ಉನ್ನತ ಮಟ್ಟದ ಹಾಗೂ ಮಹತ್ವದ 52 ತಾಣಗಳ (1979ರಲ್ಲಿ ಅಮೆರಿಕದ ರಾಜತಾಂತ್ರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಇರಾನಿ ವಿದ್ಯಾರ್ಥಿ ತಾಣಗಳು) ಮೇಲೆ "ವೇಗವಾಗಿ ಮತ್ತು ಪ್ರಬಲವಾಗಿ ದಾಳಿ ಮಾಡಿ" ಎಂದು ಅಧ್ಯಕ್ಷ ಟ್ರಂಪ್ ಕೆಂಡ ಕಾರಿದ್ದಾರೆ. ಅಲ್ಲದೆ ಇರಾನ್ ಮೇಲೆ ಹಿಂದೆಂದಿಗಿಂತಲೂ ಕಠಿಣವಾದ ದಾಳಿ ಮಾಡಿ ಎಂಬ ಸಂದೇಶ ರವಾನಿಸಿದ್ದಾರೆ. ಜಗತ್ತು ಹಲವು ಆಕ್ರಮಣಗಳನ್ನು ಹಾಗೂ ದಾಳಿಗಳನ್ನು ಕಂಡಿದೆ. ಆದರೂ ಎಲ್ಲಾ ಆಕ್ರಮಣಗಳನ್ನೂ ಧಕ್ಕಿಸಿಕೊಂಡು ಬದುಕುಳಿದಿದೆ ಎಂಬುದನ್ನು ಇರಾನಿಗೆ ಮನವರಿಕೆ ಮಾಡಿಕೊಡಬೇಕು. ಈ ವಿಷಯದಲ್ಲಿ ನಾವ ಹಿಂದೆ ಉಳಿಯಬಾರದು ಎಂದು ಹೇಳಿದ್ದಾರೆ.
ಟ್ರಂಪ್ ಆಡಳಿತಕ್ಕೆ ಸೊಲೈಮಾನಿ ಅಮೂಲ್ಯವಾದ ಬಲಿಯಾಗಿದ್ದು, 1989ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಇರಾನ್ ಸುಪ್ರೀಂ ಲೀಡರ್ ಎದುರಿಸುತ್ತಿರುವ ಅತ್ಯಂತ ಕಠಿಣ ಸವಾಲು ಕೂಡ ಸೊಲೈಮಾನಿ ಅವರ ಹತ್ಯೆಯಾಗಿದೆ. ಯುಎಸ್ ಅನ್ನು ಧಿಕ್ಕರಿಸಲು ಹಾಗೂ ಈ ಪ್ರದೇಶದಲ್ಲಿ ಅದರ ಪ್ರಾಕ್ಸಿಗಳಿಗೆ ಧೈರ್ಯ ತುಂಬಲು, ಎರಡಕ್ಕೂ ಈಗ ಟೆಹ್ರಾನ್ ಪ್ರತಿಕ್ರಿಯಿಸಬೇಕಾಗುತ್ತದೆ. ಮಂಗಳವಾರ ಟೆಹ್ರಾನ್‌ನಿಂದ ದಕ್ಷಿಣಕ್ಕೆ ಒಂದು ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಅವರ ಹುಟ್ಟೂರಾದ ಕೆರ್ಮನ್‌ನಲ್ಲಿ ಸೊಲೈಮಾನಿ ಅವರನ್ನು ಸಮಾಧಿ ಮಾಡಿದ ಬಳಿಕ ಇಂತಹ ಪ್ರತಿಕ್ರಿಯೆಗಳು ಹೆಚ್ಚಾಗಿ ಕೇಳಿಬರುತ್ತಿವೆ.
ಎಲ್ಲಾ ಅಂತರರಾಷ್ಟ್ರೀಯ ಸಮುದಾಯಗಳಂತೆ ಭಾರತವು ಪರಿಸ್ಥಿತಿಯನ್ನು ಗಮನಿಸುತ್ತಿದೆ. ಹಾಗೂ ಸೊಲೈಮಾನಿ ಹತ್ಯೆಯಾದ ಕೂಡಲೇ ಹೇಳಿಕೆ ಬಿಡುಗಡೆ ಮಾಡಿರುವ ನವದೆಹಲಿಯು ಪರ್ಷಿಯನ್ ಕೊಲ್ಲಿಯಲ್ಲಿ 'ಶಾಂತಿ, ಸ್ಥಿರತೆ ಮತ್ತು ಸುರಕ್ಷತೆಯ'ನ್ನು ಕಾಪಾಡಿಕೊಳ್ಳಬೇಕೆಂದು ಕರೆ ಕೊಟ್ಟಿದೆ. ಅಲ್ಲದೆ ಭಾರತೀಯ ವಿದೇಶಾಂಗ ಸಚಿವರು ಇರಾನ್ ಪ್ರತಿನಿಧಿ ಡಾ. ಜರೀಫ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಯುಎಇ ಮತ್ತು ಒಮಾನ್ ವಿದೇಶಾಂಗ ಸಚಿವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
ಇರಾನಿನ ಪ್ರತಿಕ್ರಿಯೆ ಎಲ್ಲಿ ಮತ್ತು ಏನು? ಎಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದು ಕಾರ್ಯತಂತ್ರದ ವಿಧಾನಗಳನ್ನು ಗೊಂದಲಗೊಳಿಸುತ್ತದೆ. ಈ ಪ್ರದೇಶದಲ್ಲಿನ ಅಥವಾ ಅಮೆರಿಕದ ಮುಖ್ಯಭೂಮಿಯಲ್ಲಿನ ಯುಎಸ್ ಹಿತಾಸಕ್ತಿಗಳ ಮೇಲೆ ನೇರ ದಾಳಿ ಮಾಡುವುದು ಇರಾನ್‌ಗೆ ದುಬಾರಿಯಾಗಲಿದೆ ಮತ್ತು ಅಮೆರಿಕವನ್ನು ದೊಡ್ಡ ಮಟ್ಟದಲ್ಲಿ ಪ್ರಚೋದಿಸಿದಂತಾಗುತ್ತದೆ. ಇದಲ್ಲದೆ ಇರಾನ್ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಮಿತ್ರ ರಾಷ್ಟ್ರಗಳಾಗಿರುವ ಇಸ್ರೇಲ್, ಇರಾಕ್ ಅಥವಾ ಸೌದಿ ಅರೇಬಿಯಾದ ಮೇಲೂ ಕೇಂದ್ರೀಕರಿಸಲಿದೆ.
ಈ ಎಲ್ಲ ದೇಶಗಳೊಂದಿಗೆ ಭಾರತ ನಿಕಟ ಸಂಬಂಧವನ್ನು ಹೊಂದಿದೆ. ಇರಾನಿನ ನಿಷ್ಕ್ರಿಯತೆಯನ್ನು ಅಥವಾ ಪ್ರತಿಕ್ರಿಯೆಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ಯಡವಟ್ಟಾದರೆ ಪರ್ಷಿಯನ್ ಕೊಲ್ಲಿ ಪ್ರದೇಶ ಹತ್ತಿ ಉರಿಯಲಿದ್ದು, ಇದು ಭಾರತಕ್ಕೂ ಮಹತ್ವದ ವಿಷಯವಾಗಲಿದೆ.
ನವದೆಹಲಿಯು ಇರಾನ್‌ನಲ್ಲಿ ಇಂಧನ ಸುರಕ್ಷತೆ, ಚಬಹಾರ್ ಬಂದರು ಮತ್ತು ಮಧ್ಯ ಏಷ್ಯಾ ಪ್ರಯಾಣದ ಮಾರ್ಗದಂತಹ ಪ್ರಮುಖ ಹಿತಾಸಕ್ತಿಗಳನ್ನು ಹೊಂದಿದೆ. ಇದೇ ಸಮಯದಲ್ಲಿ ಭಾರತವು ಇರಾನ್ ನಾಯಕತ್ವಕ್ಕೆ ಈ ನಿರ್ಣಾಯಕ ಘಟ್ಟದಲ್ಲಿ ಟೆಹ್ರಾನ್ ಒಬ್ಬಂಟಿಯಾಗಿಲ್ಲ, ನಡೆಯುತ್ತಿರುವ ಬೆಳವಣಿಗೆಗಳು ಭಾರತಕ್ಕೆ ಅರ್ಥವಾಗುತ್ತಿವೆ, ಭಾರತ ಎಲ್ಲದರ ಬಗ್ಗೆ ಗಮನ ಕೊಡುತ್ತಿದೆ ಎಂಬ ಸೂಕ್ಷ್ಮ ಸಂದೇಶವನ್ನು ಕಳಿಸುತ್ತಿದೆ. ಸೊಲೈಮಾನಿ ಹತ್ಯೆ ಮತ್ತು ಅದಕ್ಕಾಗಿ ತೆತ್ತಬೇಕಾದ ಬೆಲೆಯ ಬಗ್ಗೆ ಇರಾನ್ ಅನುಭವಿಸುತ್ತಿರುವ ಸಂದಿಗ್ಧತೆಯನ್ನು ಅರ್ಥಮಾಡಿಕೊಂಡಿರುವ ಭಾರತದಂತಹ ದೇಶಗಳು ಮೆಚ್ಚುಗೆ ಸೂಚಿಸುವುದರ ಜೊತೆಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಾಸ್ತವಿಕ ಮೌಲ್ಯಮಾಪನ ಮಾಡಲು ಒತ್ತಾಯಿಸಿವೆ. ಇರಾನ್‌ಗೆ ವ್ಯಕ್ತವಾಗುತ್ತಿರುವ ಅಂತರರಾಷ್ಟ್ರೀಯ ಬೆಂಬಲದ ಅಗಾಧತೆಯನ್ನು ನೋಡುತ್ತಿದ್ದರೆ ಭಾರತವು ಕೂಡ ಇರಾನ್ ಆದ್ಯತೆಗಳನ್ನು ಅಲ್ಲಗೆಳೆಯುವುದಿಲ್ಲ ಎನಿಸುತ್ತದೆ.
ಸ್ಕ್ರಿಪ್ಟ್: ಪ್ರೊ. ಪಿ.ಆರ್. ಕುಮಾರಸ್ವಾಮಿ, ಪಶ್ಚಿಮ ಏಷ್ಯನ್ ಅಧ್ಯಯನ ಕೇಂದ್ರ, ಜೆಎನ್‌ಯು

Comments
Post a Comment