ಭಾರತದ ಮೂಲಸೌಕರ್ಯಕ್ಕೆ ನೆರವು ನೀಡಲಿರುವ ಸಿಂಗಾಪುರ

ಸಿಂಗಾಪುರದ ಹಿರಿಯ ಮತ್ತು ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾದ ಥರ್ಮನ್ ಷಣ್ಮುಗರತ್ನಂ ಅವರು ಕಾರ್ಯನಿಮಿತ್ತ ನವದೆಹಲಿ ಮತ್ತು ಮುಂಬೈಗೆ ಭೇಟಿಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಿತರ ಮುಖಂಡರನ್ನು ಭೇಟಿಯಾದರು. ಅಲ್ಲದೆ ಸಿಂಗಾಪುರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿ ಅಧಿಕಾರಿಗಳೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಹಾಗೂ ಕೆಲ ಉದ್ಯಮಿಗಳನ್ನು ಭೇಟಿ ಮಾಡಿದರು.

ಷಣ್ಮುಗರತ್ನಂ ಅವರ ಭಾರತ ಭೇಟಿಯ ಮುಖ್ಯ ಉದ್ದೇಶ ವ್ಯಾಪಾರ ಹಾಗೂ ಹೂಡಿಕೆ ಸಂಬಂಧಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿತ್ತು. ಡಿಜಿಟಲ್ ಆರ್ಥಿಕತೆಯ ಸಹಯೋಗ, ಮೂಲಸೌಕರ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಭಾರತ-ಸಿಂಗಾಪುರ್ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ) ಮುಂತಾದ ವಿಷಯಗಳು ಭಾರತೀಯ ನೀತಿ ನಿರೂಪಕರೊಂದಿಗಿನ ಚರ್ಚೆಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿವೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ. ತಮ್ಮ ಭೇಟಿ ಸಂದರ್ಭದಲ್ಲಿ ಷಣ್ಮುಗರತ್ನಂ ಅವರು 2022ರಲ್ಲಿ ಭಾರತದಲ್ಲಿ ನಡೆಯುವ ಜಿ 20 ಪ್ರೆಸಿಡೆನ್ಸಿ ಶೃಂಗಸಭೆಗೆ ಸಿಂಗಾಪುರದ ಬೆಂಬಲ ಇರುವುದಾಗಿ ತಿಳಿಸಿದರು.

ಈಗಾಗಲೇ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಮೇಲ್ಮುಖವಾಗಿ ಚಲಿಸುತ್ತಿದೆ ಹಾಗೂ ಇದು 2019ರಲ್ಲಿ 26 ಶತಕೋಟಿ ಯುಎಸ್ ಡಾಕರ್ ನಷ್ಟಿದೆ. ದ್ವಿಪಕ್ಷೀಯ ವ್ಯಾಪಾರವನ್ನು ಇನ್ನೂ ಹೊಸ ಎತ್ತರಕ್ಕೆ ಕೊಂಡೊಯ್ಯುಲು ಭಾರತ ಮತ್ತು ಸಿಂಗಾಪುರ ನಿಶ್ಚಯಿಸಿವೆ. ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಮಾತುಕತೆಗಳಿಂದ ಹೊರಗುಳಿಯುವ ಭಾರತದ ಇತ್ತೀಚಿನ ನಿರ್ಧಾರದಿಂದ 2005ರಲ್ಲಿ ಸಿಂಗಾಪುರದ ಜೊತೆ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಹಿ ಹಾಕಿರುವ ಭಾರತವು ದ್ವಿಪಕ್ಷೀಯ ಸಿಇಸಿಎ ಒಪ್ಪಂದದಂತೆ ನಡೆದುಕೊಳ್ಳಲಿದೆ ಎಂಬುದು ವೇದ್ಯವಾಗುತ್ತದೆ. 2018ರಲ್ಲಿ‌ ಒಪ್ಪಂದದ ಎರಡನೇ ಪರಮಾರ್ಶೆಯನ್ನು ಕೂಡ ಮಾಡಲಾಗಿದೆ. ಸಿಂಗಾಪುರದಲ್ಲಿ ಭಾರತೀಯ ಐಟಿ ಮತ್ತು ಸೇವಾ ವಲಯದ ವೃತ್ತಿಪರರಿಗೆ ಹೆಚ್ಚಿನ ಮತ್ತು ಸುಗಮ ಪ್ರವೇಶ ನೀಡಿರುವುದು ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಭಾರತದ ದೀರ್ಘಾವಧಿಯ ಬೆಳವಣಿಗೆ ಹಾಗೂ ಭವಿಷ್ಯದ ಬಗ್ಗೆ ಸಿಂಗಾಪುರಕ್ಕೆ ಇರುವ ವಿಶ್ವಾಸವನ್ನು ವ್ಯಕ್ತಪಡಿಸಿದ ಷಣ್ಮುಗರತ್ನಂ, ಭಾರತದಲ್ಲಿ ಸಿಂಗಪುರದ ಬಂಡವಾಳ ಹೂಡಿಕೆ- ವಿಶೇಷವಾಗಿ ಟೆಕ್ನಾಲಜಿ ಪಾರ್ಕ್ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಬೆಳೆಯುತ್ತಿದೆ ಎಂದು ಹೇಳಿದರು. ಭಾರತೀಯ ಆರ್ಥಿಕತೆಯ ವಾರ್ಷಿಕ ಬೆಳವಣಿಗೆ ದರಗಳು ಕುಸಿತ ಕಾಣತ್ತಿರುವುದರ ನಡುವೆಯೂ ಸಿಂಗಪುರವು ಭಾರತದ ಅಭಿವೃದ್ಧಿ ಬಗ್ಗೆ ವಿಶೇಷವಾದ ನಂಬಿಕೆಯನ್ನು ಹೊಂದಿದೆ. ಸಿಂಗಾಪುರವು ಭಾರತದ ಅತಿದೊಡ್ಡ ವಿದೇಶಿ ಹೂಡಿಕೆದಾರ ಎಂಬುದು ಗಮನಿಸಬೇಕಾದ ಸಂಗತಿ.

ಷಣ್ಮುಗರತ್ನಂ ಅವರ ಭೇಟಿ ಸಂದರ್ಭದಲ್ಲಿ ಭಾರತವು ತನ್ನ ಮೂಲಸೌಕರ್ಯ ಗುರಿಗಳನ್ನು ಪೂರೈಸಿಕೊಳ್ಳಲು ಸಿಂಗಾಪುರದ ಬೆಂಬಲವನ್ನು ಕೋರಿತು. ಮೂಲಸೌಕರ್ಯ ಕ್ಷೇತ್ರದಲ್ಲಿ ಜಾರಿಗೆ ತರಲಾಗಿರುವ ಮಹತ್ವಾಕಾಂಕ್ಷೆಯ ‘ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್’ (ಎನ್‌ಐಪಿ) ಯೋಜನೆಗೆ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ102 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ದೇಶಾದ್ಯಂತ ಗುಣಮಟ್ಟದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಎನ್‌ಐಪಿ ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ. ಆದಾಗ್ಯೂ, ಅದಕ್ಕೆ ಬೃಹತ್ ಸಂಪನ್ಮೂಲ ಸಂಗ್ರಹಣೆಯ ಅಗತ್ಯವಿರುತ್ತದೆ; ಈ ಹಿನ್ನೆಲೆಯಲ್ಲಿ ನಂಬಿಕಸ್ಥ ಮಿತ್ರರಾಷ್ಟ್ರವಾದ ಸಿಂಗಾಪುರವನ್ನು ಆಹ್ವಾನಿಸಿದ ನಿರ್ಧಾರ ಮತ್ತು ಸಮಯ ಭಾರತದ ಯೋಜನೆಯನ್ನು ಸುಗಮಗೊಳಿಸಬಹುದು.

ಸಿಂಗಾಪುರದ “ನೆಟ್‌ವರ್ಕ್ಡ್ ಟ್ರೇಡ್ ಪ್ಲಾಟ್‌ಫಾರ್ಮ್ (ಎನ್‌ಟಿಪಿ) ಇನಿಶಿಯೇಟಿವ್” ನಲ್ಲಿ ಜಂಟಿಯಾಗಿ ಕೆಲಸ ಮಾಡಲು ಎರಡೂ ದೇಶದವರು ಒಪ್ಪಿಗೆ ಸೂಚಿಸಿದ್ದಾರೆ. ಸಿಂಗಾಪುರ್ ಕಸ್ಟಮ್ಸ್ ಮತ್ತು ಗೌ ಟೆಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ- ಎನ್‌ಟಿಪಿ ಉಪಕ್ರಮವನ್ನು ಡಿಜಿಟಲೀಕರಣ ಆಧಾರಿತ ಕ್ರಮ ಎಂದು ಶ್ಲಾಘಿಸಲಾಗಿದೆ - ವ್ಯಾಪಾರ ಮೌಲ್ಯ ಸರಪಳಿಯಲ್ಲಿ ಭಾಗವಹಿಸುವವರನ್ನು ಸಂಪರ್ಕಿಸಬಲ್ಲ ವ್ಯವಹಾರ ಮತ್ತು ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಗೆ ತಡೆಯಾಗಿದೆ- ಇದರಿಂದಾಗಿ ಹೆಚ್ಚಿನ ವೇಗಕ್ಕೆ ಮತ್ತು ತಡೆರಹಿತ ಪ್ರಕ್ರಿಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಡಿಜಿಟಲ್ ಇ-ಕಾಮರ್ಸ್ ಮತ್ತು ಡಿಜಿಟಲೀಕರಣದ ಕುರಿತು ಸಿಂಗಾಪುರದೊಂದಿಗೆ ಸಹಭಾಗಿತ್ವ ಮಾಡಿಕೊಂಡಿರುವುದರಿಂದ ಭಾರತಕ್ಕೆ ಕಾರ್ಮಿಕ ಪ್ರೇರಿತ ಆರ್ಥಿಕತೆಯಿಂದ ತಂತ್ರಜ್ಞಾನವನ್ನು ಅವಲಂಬಿಸಿರುವ ಆರ್ಥಿಕತೆಗೆ ಬದಲಾಗಲು ಹೆಚ್ಚಿನ‌ ಪ್ರಮಾಣದ ಅಗತ್ಯ ನೆರವು ಸಿಗಲಿದೆ.

ಸುರೇಶ್ ತೆಂಡೂಲ್ಕರ್ ಸ್ಮರಣಾರ್ಥ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಷಣ್ಮುಗರತ್ನಂ ಅವರು "ವಿಶಾಲ ಆಧಾರಿತ ಸಮೃದ್ಧಿ: ಮೂಲಭೂತ ಅಂಶಗಳನ್ನು ನಿಭಾಯಿಸುವುದು" ಎಂಬ ಶೀರ್ಷಿಕೆಯ ಉಪನ್ಯಾಸ ನೀಡಿದರು. ಆರ್ ಬಿಐ ಪ್ರಕಾರ ಷಣ್ಮುಗರತ್ನಂ ಅವರು ತಮ್ಮ ಉಪನ್ಯಾಸದಲ್ಲಿ “ಮಾನವ ಬಂಡವಾಳದ ಕ್ಷೇತ್ರಗಳಲ್ಲಿ ಮತ್ತು ಸ್ವಚ್ಛತೆ ವಿಷಯದಲ್ಲಿ ರಚನಾತ್ಮಕ ಸುಧಾರಣೆಗಳ ಅಗತ್ಯತೆ ಇದೆ ಹಾಗೂ ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಮಾನವ ಸಂಪನ್ಮೂಲ, ಶಿಕ್ಷಣ, ಆರೋಗ್ಯ, ರಕ್ಷಣೆ, ಕೌಶಲ್ಯಾಭಿವೃದ್ದಿ, ಮತ್ತು ಕಾರ್ಮಿಕ ಮಾರುಕಟ್ಟೆ ಕ್ಷೇತ್ರಗಳನ್ನು ಸುಧಾರಣೆ ಮಾಡಬೇಕಾಗಿದೆ. ಹೊಸ ನಗರಗಳು ಸಮಗ್ರ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ.‌ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಭಾರತವು ತನ್ನ ನಗರಗಳನ್ನು ಸ್ವಚವಾಗಿಡಲು ಮತ್ತು ಸ್ಮಾರ್ಟ್ ಸಿಟಿಗಳನ್ನಾಗಿ ಪರಿವರ್ತಿಸಲು ಸಿಂಗಾಪುರದಿಂದ ಸಾಕಷ್ಟು ಕಲಿಯಬಹುದು" ಎಂದು ಹೇಳಿದ್ದಾರೆ.

ಭಾರತದ ಪೂರ್ವ ದಿಕ್ಕಿಗಿರುವ ದೇಶಗಳ ಪೈಕಿ ಒಪ್ಪಂದಗಳ‌ ದೃಷ್ಟಿಯಲ್ಲಿ ಸಿಂಗಪುರ ಕೇಂದ್ರ ಸ್ಥಾನ ಎಂದು‌ ಹೇಳಲಾಗುತ್ತದೆ. 2019ರಲ್ಲಿ ಚೀನಾ ಮತ್ತು ಇಂಡೋನೇಷ್ಯಾ ನಂತರ ಅತಿಹೆಚ್ಚು ಅಂದರೆ ಸುಮಾರು 1.2 ಮಿಲಿಯನ್ ಭಾರತೀಯ ಪ್ರವಾಸಿಗರು ಸಿಂಗಪುರಕ್ಕೆ ಭೇಟಿ ನೀಡಿದ್ದಾರೆ. ಸಿಂಗಪುರ ಪ್ರವಾಸಿಗರ ಒಳಹರಿವಿನ ಸಂಖ್ಯೆಯಲ್ಲಿ ಭಾರತ ಮೂರನೇ ದೊಡ್ಡ ರಾಷ್ಟ್ರ. ಈಗ ಸಿಂಗಾಪುರದಿಂದ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಸುಧಾರಿಸಬೇಕಾದ ಅಗತ್ಯವಿದೆ.

ಸ್ಕ್ರಿಪ್ಟ್: ಡಾ. ರಾಹುಲ್ ಮಿಶ್ರಾ, ಆಗ್ನೇಯ ಮತ್ತು ಪೂರ್ವ ಏಷ್ಯಾ ವ್ಯವಹಾರಗಳ ಕಾರ್ಯತಂತ್ರದ ವಿಶ್ಲೇಷಕ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ