ವೈಜ್ಞಾನಿಕ ಕ್ರಮಗಳ ಮೂಲಕ ಗ್ರಾಮೀಣ ಅಭಿವೃದ್ಧಿಯತ್ತ ಚಿತ್ತ
ರೈತರು ಹಾಗೂ ಟೆಕ್-ಡೆವಲಪರ್‌ಗಳ ನಡುವಿನ ಅಂತರವನ್ನು ನಿವಾರಿಸಲು ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲಕ ಗ್ರಾಮೀಣಾಭಿವೃದ್ಧಿ ಮಾಡುವ ಅಗತ್ಯವಿದೆ; ಇದು ಕೃಷಿ ಸಮುದಾಯದ ಆದಾಯವನ್ನು ಹೆಚ್ಚಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಬಹಳ ಮುಖ್ಯವಾದ ಕ್ರಮವಾಗಿದೆ. ಬೆಳೆ ಉತ್ಪಾದಕತೆ, ಮಾರುಕಟ್ಟೆ ಪ್ರವೇಶ ಹಾಗೂ ಗ್ರಾಮೀಣ ಜೀವನೋಪಾಯದ ರೀತಿಗಳನ್ನು ವೈವಿಧ್ಯಗೊಳಿಸಲು ಅನೇಕ ಹೊಸ ಆವಿಷ್ಕಾರಗಳು ಈಗಾಗಲೇ ಸಹಾಯ ಮಾಡಿವೆ. ಆದರೆ ರೈತರು ಹಾಗೂ ನಾವೀನ್ಯಕಾರರ ನಡುವೆ ಈಗಿರುವ ಅಂತರವನ್ನು ಬಹುತೇಕ ಲಾಭದ ದೃಷ್ಟಿಯಿಂದ ನೋಡಲಾಗಿದೆ, ಆದರೆ ಅಂತರವನ್ನು ಕಡಿಮೆ ಮಾಡಬೇಕಾಗಿದೆ.
ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳಬೇಕು ಮತ್ತು ಬೆಳೆ ಉತ್ಪಾದಕತೆ ಹಾಗೂ ರೈತರ ಆದಾಯವನ್ನು ಸುಧಾರಿಸಬೇಕು ಎಂದು ವೈಜ್ಞಾನಿಕ ಸಮುದಾಯಕ್ಕೆ ಕರೆ ನೀಡಿದರು. ರಾಷ್ಟ್ರದ ಯೋಗಕ್ಷೇಮದಲ್ಲಿ ದೊಡ್ಡ ಮಟ್ಟದ ಪಾತ್ರ ವಹಿಸಿರುವ, ಭಾರತದಲ್ಲಿ ಆಹಾರ ಭದ್ರತೆ ನೀಡುತ್ತಿರುವ ನಿರ್ಣಾಯಕರಾದ ರೈತರು ತಮ್ಮ ಮನೆಯಲ್ಲಿ ಉತ್ಪಾದಿಸಿದ ಆಹಾರಗಳನ್ನು ಸಂರಕ್ಷಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಬೇಕಿದೆ ಎಂದು ಹೇಳಿದರು. ಕಡಿಮೆ ನೀರಿನಲ್ಲಿ ಪೋಷಕಾಂಶಗಳನ್ನು ಒಳಗೊಂಡ ಬೆಳೆಗಳನ್ನು ಬೆಳೆಯುವ ಮತ್ತು ಪರಿಣಾಮಕಾರಿಯಾದ ಹವಾಮಾನ-ಸ್ಥಿತಿಸ್ಥಾಪಕ ವಿಧಾನಗಳನ್ನು ವಿಜ್ಞಾನಿಗಳು ಅನ್ವೇಷಿಸಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆ ಇಂದಿನ ಪ್ರಮುಖವಾದ ಆತಂಕಕಾರಿ ಅಂಶಗಳಾಗಿವೆ. ಹವಾಮಾನ ಮಾದರಿಗಳು ಅನಿರೀಕ್ಷಿತ ರೀತಿಯಲ್ಲಿ ಪರಿಣಾಮ ಬೀರುತ್ತಿವೆ ಹಾಗೂ ಕೆಲವೊಮ್ಮೆ ಭಾರಿ ವಿನಾಶವನ್ನು ಉಂಟುಮಾಡುತ್ತಿವೆ. ಇದು ಆಹಾರ ಭದ್ರತೆಗೆ ಗಂಭೀರವಾದ ಅಪಾಯವನ್ನು ಉಂಟುಮಾಡುತ್ತದೆ. ಪ್ರಕೃತಿಯ ಕೋಪದಿಂದಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಗೆ ತಗ್ಗಿಸಬಹುದೆಂದು ವೆಂಕಯ್ಯನಾಯ್ಡು ವಿಜ್ಞಾನಿಗಳನ್ನು ಕೇಳಿದರು.
ಸಂಘಟಿತ ಪ್ರಯತ್ನಗಳಿಗೆ ಕರೆ ಕೊಟ್ಟ ಉಪಾಧ್ಯಕ್ಷರು, ಕೃಷಿ ಮೌಲ್ಯ ಸರಪಳಿಯಲ್ಲಿ ಗುಣಮಟ್ಟ ಹಾಗೂ ಪ್ರಮಾಣ ಎರಡನ್ನೂ ಹೆಚ್ಚಿಸುವಲ್ಲಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವಿದೆ ಎಂದು ಒತ್ತಿ ಹೇಳಿದರು. ಉತ್ಪಾದನಾಪೂರ್ವ ಹಂತದಲ್ಲಿ ಒಳಹರಿವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಉತ್ಪಾದನೆಯನ್ನು, ನಂತರ ಮಾರುಕಟ್ಟೆಯ ಆದಾಯವನ್ನು ರೈತರು ಸುಧಾರಣೆ ಮಾಡಿಕೊಳ್ಳಬೇಕು ಎಂದರು.
107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಂಗವಾಗಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೈತ-ಕೇಂದ್ರಿತವಾದ ರೈತರ ವಿಜ್ಞಾನ ಕಾಂಗ್ರೆಸ್ ಅನ್ನು ಆಯೋಜಿಸಲಾಗಿತ್ತು. ಇದು ರೈತ ಸಮುದಾಯಕ್ಕೆ ದೊಡ್ಡ ರೀತಿಯ ಪ್ರೋತ್ಸಾಹದಾಯಕವಾಗಿತ್ತು. ಇಂತಹ ವೇದಿಕೆಗಳು ರೈತರು ಮತ್ತು ವಿಜ್ಞಾನಿಗಳ ನಡುವೆ ಸಂವಹನ ನಡೆಸಿ ಮುಂದಿನ ಹಂತದಲ್ಲಿ ಹೊಸತನವನ್ನು ಕಂಡುಕೊಳ್ಳಬಹುದು ಜೊತೆಗೆ ಸಾಮಾನ್ಯ ಜನರಿಗೆ ಪ್ರಯೋಜನ ಆಗಬಹುದು ಎಂಬ ಕಾರಣದಿಂದಾಗಿ ಮುಖ್ಯವಾಗುತ್ತದೆ. ರೈತ ವಿಜ್ಞಾನ ಕಾಂಗ್ರೆಸ್‌ನಲ್ಲಿ ಭಾಗವಹಿಸಿ ತಮ್ಮ ಆವಿಷ್ಕಾರಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲು ದೇಶಾದ್ಯಂತ ಸುಮಾರು 120 ರೈತರನ್ನು ಆಹ್ವಾನಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಪದ್ಧತಿಗಳಿಗೆ ಸಹಾಯ ಮಾಡುವ ತಂತ್ರಜ್ಞಾನಗಳಲ್ಲಿ ಕ್ರಾಂತಿಯ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಭಾರತವನ್ನು ವೇಗವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯಲು “ಹೊಸತನ, ಪೇಟೆಂಟ್, ಉತ್ಪಾದನೆ ಮತ್ತು ಸಮೃದ್ಧಿ” ಅಗತ್ಯವಿದೆ ಎಂದು ವಿಜ್ಞಾನಿಗಳನ್ನು ಒತ್ತಾಯಿಸಿದರು. ಕಾಂಡವನ್ನು ಸುಡುವುದು ಹಾಗೂ ನೀರು, ರಸಗೊಬ್ಬರ ಮತ್ತು ಕೀಟನಾಶಕಗಳ ನ್ಯಾಯಯುತ ಬಳಕೆಯ ಮೂಲಕ ರೈತ-ಕೇಂದ್ರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕರೆ ನೀಡಿದರು.
ಅಗ್ಗದ ಮತ್ತು ಉತ್ತಮ ಆವಿಷ್ಕಾರಗಳಿಗೆ ಹಲವಾರು ಅವಕಾಶಗಳಿರುವ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಪ್ರಧಾನ ಮಂತ್ರಿ ಯುವ ವಿಜ್ಞಾನಿಗಳಿಗೆ ಕರೆ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಸರ್ಕಾರಿ ಕಾರ್ಯಕ್ರಮಗಳು ಅಗತ್ಯವಿರುವವರಿಗೆ ತಲುಪಿದೆ ಎಂದು ಅವರು ಹೇಳಿದರು. ಜಿಯೋ ಟ್ಯಾಗಿಂಗ್ ಮತ್ತು ಡಾಟಾ ಸೈನ್ಸ್ ತಂತ್ರಜ್ಞಾನದಿಂದಾಗಿ ಗ್ರಾಮೀಣ ಪ್ರದೇಶದ ಅನೇಕ ಯೋಜನೆಗಳು ಸಮಯೋಚಿತವಾಗಿ ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಆರ್ಥಿಕತೆಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. 2017-18ರ ಬೆಳೆ ವರ್ಷದಲ್ಲಿ ಆಹಾರ ಧಾನ್ಯ ಉತ್ಪಾದನೆಯು ದಾಖಲೆಯ 284.83 ದಶಲಕ್ಷ ಟನ್‌ಗಳಷ್ಟಿತ್ತು. 2018-19ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆ 285.2 ಮಿಲಿಯನ್ ಟನ್ ಗಳಷ್ಟಿತ್ತು. 2017ರ ಆರ್ಥಿಕ ವರ್ಷದ ಅವಧಿಯಲ್ಲಿ ಹಾಲು ಉತ್ಪಾದನೆಯನ್ನು 165.4 ಮಿಲಿಯನ್ ಟನ್ ಎಂದು ಅಂದಾಜು ಮಾಡಲಾಗಿದೆ. ಸೆಪ್ಟೆಂಬರ್ 2018ರ ಹೊತ್ತಿಗೆ ಭಾರತದಲ್ಲಿ ‘ಕರೀಫ್’ ಬೆಳೆಗಳೊಂದಿಗೆ ಬಿತ್ತಿದ ಒಟ್ಟು ವಿಸ್ತೀರ್ಣ 105.78 ಮಿಲಿಯನ್ ಹೆಕ್ಟೇರ್ ತಲುಪಿದೆ.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಹಣ್ಣು ಉತ್ಪಾದಕ ರಾಷ್ಟ್ರವಾಗಿದೆ. ತೋಟಗಾರಿಕೆ ಬೆಳೆಗಳ ಉತ್ಪಾದನೆಯನ್ನು ಅಂದಾಜಿನ ಪ್ರಕಾರ 2018-19ರಲ್ಲಿ ದಾಖಲೆಯ 314.7 ದಶಲಕ್ಷ ಟನ್ (ಎಂಟಿ) ಎಂದು ಅಂದಾಜಿಸಲಾಗಿದೆ.
ಭಾರತದಿಂದ ಒಟ್ಟು ಕೃಷಿ ರಫ್ತು ಶೇಕಡಾ 16.45ರಷ್ಟು ಏರಿಕೆಯಾಗಿದ್ದು, ಆರ್ಥಿಕ ವರ್ಷದಲ್ಲಿ 38.21 ಬಿಲಿಯನ್ ಯುಎಸ್ ಡಾಲರ್ ತಲುಪಿದೆ. 2019ರ ಆರ್ಥಿಕ ವರ್ಷದಲ್ಲಿ ಕೃಷಿ ರಫ್ತು 38.54 ಶತಕೋಟಿ ಯುಎಸ್ ಡಾಲರ್ ಆಗಿದೆ. ಭಾರತವು ಮಸಾಲೆ ಮತ್ತು ಮಸಾಲೆ ಉತ್ಪನ್ನಗಳ ಅತಿದೊಡ್ಡ ಉತ್ಪಾದಕ, ಗ್ರಾಹಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ.
ಭಾರತದಿಂದ ಮಸಾಲೆ ರಫ್ತು 2017-18ರಲ್ಲಿ 3.1 ಬಿಲಿಯನ್ ಯುಎಸ್ ಡಾಲರ್ ತಲುಪಿದೆ. 2017ರಲ್ಲಿ ಭಾರತದಿಂದ ಚಹಾ ರಫ್ತು 36 ವರ್ಷಗಳ ಗರಿಷ್ಠ 240.68 ಮಿಲಿಯನ್ ಕೆಜಿ ತಲುಪಿದ್ದರೆ, ಕಾಫಿ ರಫ್ತು 2017-18ರಲ್ಲಿ 395,000 ಟನ್ ದಾಖಲೆಯಾಗಿದೆ. ಭಾರತದಲ್ಲಿ ಆಹಾರ ಮತ್ತು ದಿನಸಿ ಚಿಲ್ಲರೆ ಮಾರುಕಟ್ಟೆ 2017ರಲ್ಲಿ 380 ಬಿಲಿಯನ್ ಯುಎಸ್ ಡಾಲರ್ ಆಗಿತ್ತು.
ಡಿಜಿಟಲೀಕರಣ, ಇ-ಕಾಮರ್ಸ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಗ್ರಾಮೀಣ ಜನರಿಗೆ ಗಮನಾರ್ಹವಾಗಿ ಸಹಾಯ ಮಾಡುತ್ತಿವೆ ಹಾಗೂ ಹಲವಾರು ಗ್ರಾಮೀಣ ಅಭಿವೃದ್ಧಿ ಉಪಕ್ರಮಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ. ವಿಶೇಷವಾಗಿ ವೆಚ್ಚ-ಪರಿಣಾಮಕಾರಿ ಕೃಷಿ ಮತ್ತು ಕೃಷಿ-ಗ್ರಾಹಕ ಪೂರೈಕೆಯ ಸರಪಳಿ ಜಾಲದ ಬಗ್ಗೆ ಹೇಳಿದ್ದಾರೆ.
ಸ್ಕ್ರಿಪ್ಟ್: ಬಿಮಾನ್ ಬಸು, ಹಿರಿಯ ವಿಜ್ಞಾನ ನಿರೂಪಕ

Comments
Post a Comment