ಭಾರತವು FDI ನಲ್ಲಿ ಅಗ್ರ ಹತ್ತರಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ
ವಿದೇಶಿ ನೇರ ಹೂಡಿಕೆ (FDI) ಒಳಹರಿವು ವಿಷಯದಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಭಾರತವೂ ತನ್ನ ಸ್ಥಾನವನ್ನು ಕಾಪಾಡಿಕೊಂಡು, 2019ರಲ್ಲಿ 42 ಬಿಲಿಯನ್ ಡಾಲರ್‌ನಿಂದ 49 ಬಿಲಿಯನ್ ಡಾಲರ್‌ಗೆ ಅಂದರೆ ಶೇಕಡಾ 16 ರಷ್ಟು ಏರಿಕೆ ಕಂಡಿದೆ. UNCTAD (ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್)ನ "ಇನ್ವೆಸ್ಟ್ಮೆಂಟ್ ಟ್ರೆಂಡ್ ಮಾನಿಟರ್" ಎಂಬ ಇತ್ತೀಚಿನ ವರದಿಯಲ್ಲಿ ಇದನ್ನು ಹೇಳಲಾಗಿದೆ. 2019 ರಲ್ಲಿ ಜಾಗತಿಕ FDI ಸಮತಟ್ಟಾಗಿದ್ದು 1.41 ಟ್ರಿಲಿಯನ್‌ನಿಂದ ಶೇ. 1 ಕುಸಿತವಾಗಿ, 1.39 ಟ್ರಿಲಿಯನ್ ರಷ್ಟು ಆಗಿದೆ. ಈ ಹಿನ್ನೆಲೆಯಲ್ಲೂ ಭಾರತವು FDIನಲ್ಲಿ ಏರಿಕೆ ತೋರಿಸಿದೆ ಎಂದು ವರದಿ ತಿಳಿಸುತ್ತದೆ. US ಮತ್ತು ಚೀನಾ ಎರಡೂ ದೇಶಗಳೂ ಬಂಡವಾಳದ ಹರಿವಿನ ಶೂನ್ಯ-ಬೆಳವಣಿಗೆಯೊಂದಿಗೆ ಸಮತಟ್ಟಾದ FDIಯನ್ನು ಕಂಡಿರುವ ಸಮಯದಲ್ಲಿ, FDIನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ,
ದಕ್ಷಿಣ ಏಷ್ಯಾ ಪ್ರದೇಶದ 60 ಬಿಲಿಯನ್ FDI (ಶೇ. 10 ಹೆಚ್ಚಳ) ದಾಖಲೆಯಲ್ಲಿ, ಭಾರತದ ಪಾಲು ಶೇ. 80 ಕ್ಕಿಂತ ಅಧಿಕವಾಗಿದೆ. ಮಾಹಿತಿ ತಂತ್ರಜ್ಞಾನ ಸೇರಿದಂತೆ ಸೇವಾ ಕೈಗಾರಿಕೆಗಳಿಂದ ಅಗ್ರಪಾಲು ಸಂದಿದೆ. ನಮ್ಮ ನೆರೆಹೊರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ FDI, ಕ್ರಮವಾಗಿ ಶೇ. 6 ಮತ್ತು ಶೇ. 20ರಷ್ಟು ಕುಸಿದಿದ್ದು, 3.4 ಬಿಲಿಯನ್ ಡಾಲರ್ ಮತ್ತು 1.9 ಬಿಲಿಯನ್ ಡಾಲರ್‌ಗಳಷ್ಟಾಗಿದೆ.
ಜಗತ್ತಿನಾದ್ಯಂತದ ರಾಜಕೀಯ ವಿಪ್ಲವವೂ FDI ಹರಿವಿನ ಮೇಲೆ ಸ್ಪಷ್ಟ ಪರಿಣಾಮ ಬೀರಿದೆ. UK ಬ್ರೆಕ್ಸಿಟ್ ಕಾರಣದಿಂದ ಶೇ. 6ರಷ್ಟು ಮತ್ತು EU ಶೇ. 15ರಷ್ಟು (305 ಬಿಲಿಯನ್ ಡಾಲರ್) ಕುಸಿತವನ್ನು ಎದುರಿಸುತ್ತಿವೆ. ಖಾಸಗೀಕರಣ ಯೋಜನೆಯ ಪ್ರಾರಂಭದಲ್ಲಿ ಬ್ರೆಜಿಲ್ ಶೇ. 26ರಷ್ಟು ಗಳಿಸಿದೆ. ರಾಜಕೀಯ ಆರ್ಥಿಕತೆಯು FDI ಒಳಹರಿವಿನ ಮೇಲೆ ಮಹತ್ತರ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗೇ ರಾಜಕೀಯ ಘಟನೆಗಳು ವಿದೇಶಿ ಹೂಡಿಕೆಗೆ ಅಡ್ಡಿಯಾಗಬಹುದು.
FDI ಹೆಚ್ಚು ಸ್ಥಿರವಾಗಿರುವ ಕಾರಣ, ಬಂಡವಾಳದ ಹರಿವಿನ ಪರಿವರ್ತನೆಯು ಪೋರ್ಟ್ಫೋಲಿಯೋ ಹೂಡಿಕೆಯಿಂದ ವಿದೇಶಿ ನೇರ ಹೂಡಿಕೆಗೆ (FDI), ಉತ್ತಮವಾದುದು. ಪೋರ್ಟ್ಫೋಲಿಯೋ ಹೂಡಿಕೆಯು "hot money" ಹೊಂದಿದ್ದು, ಅದು ಅಸ್ಥಿರವಾಗಿದ್ದು ಬಡ್ಡಿದರಕ್ಕೆ ಸ್ಪಂದಿಸುತ್ತದೆ. ಸಾರ್ವಕಾಲಿಕ ಗರಿಷ್ಟ ವಿನಿಮಯ ಮೀಸಲು ವೇಳೆಯಲ್ಲಿ, ಭಾರತದ ‘ವಿದೇಶಿ ವಿನಿಮಯ ಮೀಸಲು’ ಜನವರಿ 4, 2019ರ ನಂತರ 65.1294 ಬಿಲಿಯನ್ ಡಾಲರ್ ಹೆಚ್ಚಳದೊಂದಿಗೆ ವರ್ಷವನ್ನು ಪ್ರಾರಂಭಿಸಿದೆ. ಇದು ಸರಿಸುಮಾರು ಆಸ್ಟ್ರೇಲಿಯಾದ, ಫಿನ್ಲೆಂಡ್, ಮತ್ತು ಐಸ್ಲ್ಯಾಂಡ್ ವಿದೇಶಿ ವಿನಿಮಯ ಮೀಸಲಿನ ಒಟ್ಟು ಮೊತ್ತಕ್ಕೆ ಸಮನಾಗಿದೆ. ವಿದೇಶಿ ವಿನಿಮಯವು 4 ಘಟಕಗಳನ್ನು ಒಳಗೊಂಡಿದೆ - FCAಗಳು (ವಿದೇಶಿ ಕರೆನ್ಸಿ ಸ್ವತ್ತುಗಳು), ಚಿನ್ನ, SDR(ವಿಶೇಷ Drawing ಹಕ್ಕುಗಳು), ಮತ್ತು RTP (IMFನಲ್ಲಿ ಮೀಸಲು ಸ್ಥಾನಗಳು). ಅಭಿವೃದ್ಧಿಶೀಲ ಆರ್ಥಿಕತೆಗಳಾದ ಚೀನಾ, ಸಿಂಗಾಪುರ್, ಬ್ರೆಜಿಲ್, ಹಾಂಗ್ ಕಾಂಗ್, ಚೀನಾ ಮತ್ತು ಭಾರತ, ಜಾಗತಿಕ FDI ಹರಿವಿನ ಅರ್ಧಕ್ಕಿಂತ ಹೆಚ್ಚಿನದನ್ನು ಮತ್ತು ಅತಿದೊಡ್ಡ ಪಾವತಿಗಳಲ್ಲಿ ಅರ್ಧದಷ್ಟು, ಅಂದಾಜು 695 ಬಿಲಿಯನ್ ಡಾಲರ್ಗಳು, ಹೀರಿಕೊಳ್ಳುತ್ತಿವೆ. ಶೇ. 1 ಕುಸಿತದೊಂದಿಗೆ 251 ಬಿಲಿಯನ್ ಡಾಲರ್ಸ್ ಪ್ರಮಾಣದಲ್ಲಿ US ತನ್ನ ಉನ್ನತ ಸ್ಥಾನವನ್ನು ಕಾಯ್ದುಕೊಂಡಿದೆ.
ಪ್ರಾದೇಶಿಕ ವ್ಯತ್ಯಾಸವನ್ನು ಗಮನಿಸಿದರೆ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಆರ್ಥಿಕತೆಗಳು ಕ್ರಮವಾಗಿ ಶೇ. 3 ಮತ್ತು ಶೇ. 16ರಷ್ಟು ಹೆಚ್ಚಳದೊಂದಿಗೆ ನಿವ್ವಳ ಲಾಭ ಗಳಿಸಿವೆ. ಉತ್ತರ ಅಮೆರಿಕವು FDIನಲ್ಲಿ ಶೂನ್ಯ ಬೆಳವಣಿಗೆಯೊಂದಿಗೆ ಸಮತಟ್ಟಾಗಿದೆ. ಒಟ್ಟಾರೆ ಮಟ್ಟದಲ್ಲಿ ಏಷ್ಯಾ ಮತ್ತು ಯುರೋಪ್ ಕ್ರಮವಾಗಿ ಶೇ. 6 ಮತ್ತು ಶೇ. 4 ರಷ್ಟು ಕುಸಿತ ಕಂಡು, ನಿವ್ವಳ ಕಳೆದುಕೊಂಡವರಾಗಿದ್ದಾರೆ. ಅಭಿವೃದ್ಧಿ ದೃಷ್ಟಿಕೋನವನ್ನು ಪರಿಗಣಿಸಿದರೆ, ಪರಿವರ್ತನಾ ಆರ್ಥಿಕತೆಗಳು ಪ್ರತಿಶತ 65ರಷ್ಟು ವೃದ್ಧಿ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಸ್ಥಿರತೆಯನ್ನು ಮತ್ತು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು ಪ್ರತಿಶತ 6ರಷ್ಟು ಕುಸಿತವನ್ನು ಕಂಡಿವೆ.
ಕ್ರಾಸ್ ಬಾರ್ಡರ್ M & S (ವಿಲೀನಗಳು ಮತ್ತು ಸ್ವಾಧೀನಗಳು) 2019ರಲ್ಲಿ ಪ್ರತಿಶತ 40ರಷ್ಟು (490 ಬಿಲಿಯನ್ ಡಾಲರ್ಸ್ ಮಟ್ಟಕ್ಕೆ) ಇಳಿದಿದ್ದು, ಇದು 2014ರ ನಂತರದ ಅತ್ಯಂತ ಕಡಿಮೆ ಮಟ್ಟದ್ದಾಗಿದೆಯೆಂದು UN ವರದಿಯು ಒತ್ತಿಹೇಳುತ್ತದೆ. ಕ್ರಾಸ್ ಬಾರ್ಡರ್ M & S ಮಾರಾಟದ ಕುಸಿತ ಶೇ. 56 ನಷ್ಟು (207 ಬಿಲಿಯನ್ ಡಾಲರ್ಸ್ ಮಟ್ಟಕ್ಕೆ) ಸೇವಾ ವಲಯದಲ್ಲಿ, ಶೇ.19 ನಷ್ಟು (249 ಬಿಲಿಯನ್ ಡಾಲರ್ಸ್) ಉತ್ಪಾದನಾವಲಯದಲ್ಲಿ ಮತ್ತು ಶೇ. 14ರಷ್ಟು (34 ಬಿಲಿಯನ್ ಡಾಲರ್ಸ್ ಮಟ್ಟಕ್ಕೆ) ಪ್ರಾಥಮಿಕ ವಲಯ ಕಂಡುಬಂದಿದೆ.
‘2020ರಲ್ಲಿ FDI ಹರಿವು ಇನ್ನೂ ಎತ್ತರಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ, ಏಕೆಂದರೆ ಪ್ರಸ್ತುತ ಮುನ್ನಂದಾಜುಗಳು ಜಾಗತಿಕ ಆರ್ಥಿಕತೆಯ ಸುಧಾರಣೆಯನ್ನು ತೋರಿಸುತ್ತದೆ’ ಎಂಬ UN ವರದಿಯು ಸಕಾರಾತ್ಮಕ ಅವಲೋಕನವನ್ನು ಒತ್ತಿಹೇಳುತ್ತದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಭಾರತದ ಆರ್ಥಿಕ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ, ಭಾರತದಲ್ಲಿ FDI ಕುರಿತು ಈ ಸಕಾರಾತ್ಮಕ ಸುದ್ದಿ ಬಂದಿದೆ. ಆರ್ಥಿಕ ಬೆಳವಣಿಗೆಯ ಮೇಲೆ FDIಯ ಉಲ್ಬಣವು ಪ್ರಾಯೋಗಿಕ ಪ್ರಶ್ನೆಯಾಗಿದೆ ಮತ್ತು ಅದರ ದೀರ್ಘಾವಧಿಯ ಪರಿಣಾಮವನ್ನು ವಿಶ್ಲೇಷಿಸಬೇಕಾಗಿದೆ. ಹಣಕಾಸು ಮತ್ತು ಆರ್ಥಿಕ ಕ್ಷೇತ್ರದಲ್ಲಿ ಭಾರತ ಸರ್ಕಾರವು ಪ್ರಸ್ತುತ ನಡೆಯುತ್ತಿರುವ ರಚನಾತ್ಮಕ ಸುಧಾರಣೆಗಳು ಆರ್ಥಿಕ ಬೆಳವಣಿಗೆ ಮತ್ತು ಸ್ಥೂಲ-ಆರ್ಥಿಕ ಸ್ಥಿರತೆಗೆ ನಿರ್ಣಾಯಕವಾಗಿದೆ.
ಲೇಖನ: ಡಾ. ಲೆಖಾ ಎಸ್ ಚಕ್ರವರ್ತಿ, ಪ್ರೊಫೆಸರ್
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ
Comments
Post a Comment