ಮುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ 2020ರ ಮುಖ್ಯಾಂಶಗಳು

ಕಳೆದ ವಾರ ಜರ್ಮನಿಯ ಮ್ಯೂನಿಚ್‌ನಲ್ಲಿ 56ನೇ ಮ್ಯೂನಿಚ್ ಭದ್ರತಾ ಸಮ್ಮೇಳನ (ಎಂಎಸ್‌ಸಿ) ನಡೆಯಿತು. ಸಮ್ಮೇಳನದ ಗಮನ “ಪಶ್ಚಿಮರಹಿತ” ಎಂಬ ಪರಿಕಲ್ಪನೆಯ ಮೇಲೆ ಕೇಂದ್ರೀಕೃತವಾಗಿತ್ತು, ಇದು ಪಾಶ್ಚಿಮಾತ್ಯರ ಮೌಲ್ಯಗಳು ಹಾಗೂ ಕಾರ್ಯತಂತ್ರದ ದೃಷ್ಟಿಕೋನಗಳಲ್ಲಿರುವ ವ್ಯತ್ಯಾಸಗಳು ಹಾಗೂ ಅನಿಶ್ಚಿತತೆಯಿಂದ ಹೊರಹೊಮ್ಮಿದ್ದಾಗಿದೆ. ಸಮ್ಮೇಳನ ಉದ್ದೇಶಿಸಿ ಮಾತನಾಡಿದ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್, ವಾಷಿಂಗ್ಟನ್ ಮಿತ್ರರಾಷ್ಟ್ರಗಳಿಂದ ಮತ್ತು ಜಾಗತಿಕ ಕಳವಳಗಳಿಂದ ದೂರ ಉಳಿದಿದೆ ಎಂದು ಅಭಿಪ್ರಾಯಪಟ್ಟರು. ಯುರೋಪಿಯನ್ ಭಾವನೆಗಳಿಗೆ ಪೂರಕವಾಗಿ ಮಾತನಾಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಅಟ್ಲಾಂಟಿಕ್ ಸಾಗರ ಮೈತ್ರಿಕೂಟದಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಒತ್ತಿ ಹೇಳಿದರು. ಅವರ ಪ್ರಕಾರ ಪಶ್ಚಿಮ ಎಂದರೆ “ಗೆಲ್ಲುವುದು” ಮತ್ತು ಒಗ್ಗಟ್ಟಾಗಿ ಗೆಲ್ಲುವುದು. ನ್ಯಾಟೋ ಮೂಲಕ ಯುರೋಪಿನ ಗಡಿಗಳನ್ನು ರಕ್ಷಿಸುವಲ್ಲಿ ವಾಷಿಂಗ್ಟನ್ ಪ್ರಮುಖ ಪಾತ್ರ ವಹಿಸುತ್ತಿದೆ ಹಾಗೂ ಇಸ್ಲಾಮಿಕ್ ಸ್ಟೇಟ್ ಅನ್ನು ಸೋಲಿಸುವ ಬಹುರಾಷ್ಟ್ರೀಯ ಪ್ರಯತ್ನವನ್ನು ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು. ಅವರ ಅಭಿಪ್ರಾಯಗಳು ಜರ್ಮನಿಯ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೇನ್‌ಮೀಯರ್‌ ಅವರ "ಅಂತರರಾಷ್ಟ್ರೀಯ ಸಮುದಾಯದ ಕಲ್ಪನೆಯನ್ನು ಸಹ ಯುಎಸ್ ತಿರಸ್ಕರಿಸಿದೆ” ಹಾಗೂ “ನೆರೆಹೊರೆಯ ಮತ್ತು ಪಾಲುದಾರರ ವೆಚ್ಚದಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂಬ ಹೇಳಿಕೆಗೆ ನೀಡಿದ ಪ್ರತಿಕ್ರಿಯೆಯಾಗಿತ್ತು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕೂಡ ‘ಪಶ್ಚಿಮವನ್ನು ದುರ್ಬಲಗೊಳಿಸಲಾಗುತ್ತಿದೆ” ಎಂದು ಎಚ್ಚರಿಸಿದರು.

ನ್ಯಾಟೋವನ್ನು ಬೆಂಬಲಿಸುವ ಸಂದರ್ಭದಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರು ರಕ್ಷಣಾ ವಿಷಯಗಳಲ್ಲಿ ಯುಎಸ್ ನಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಮ್ಯಾಕ್ರನ್‌ ಅವರ ಹೊಸ ಮಿಲಿಟರಿ ಶಕ್ತಿಯನ್ನು ಒಳಗೊಂಡ ಯುರೋಪಿಯನ್ ಕಾರ್ಯತಂತ್ರದ ದೃಷ್ಟಿಕೋನವನ್ನು ಕಾನ್ಫರೆನ್ಸ್ ಅಧ್ಯಕ್ಷ ಇಚಿಂಗರ್ ಸ್ವಾಗತಿಸಿದರು. ಯುರೋಪಿಯನ್ ಒಕ್ಕೂಟವು ಉಕ್ರೇನ್‌ನಲ್ಲಿನ ಕ್ರಮಗಳಿಂದಾಗಿ ರಷ್ಯಾದ ಮೇಲೆ ನಿರ್ಬಂಧ ಹೇರಿದ್ದರೂ, ಫ್ರೆಂಚ್ ಅಧ್ಯಕ್ಷರು ರಷ್ಯಾದೊಂದಿಗೆ ಹೆಚ್ಚಿನ ಸಂವಾದ ಮತ್ತು ಪುನರ್ರಚನೆ ಆಗಬೇಕು ಎಂದು ಪ್ರತಿಪಾದಿಸಿದರು. ಮ್ಯೂನಿಚ್ ಸೆಕ್ಯುರಿಟಿ ಕಾನ್ಫರೆನ್ಸ್‌ ಸಂಘಟಕರು ಉಕ್ರೇನ್‌ನ್ನು 2020ರ ಅಪಾಯಕಾರಿ ಪ್ರದೇಶಗಳಲ್ಲಿ ಒಂದೆಂದು ಪಟ್ಟಿ ಮಾಡಿದ್ದಾರೆ. ಏಕೆಂದರೆ ಡಾನ್‌ಬಾಸ್‌ನಲ್ಲಿ ಯುದ್ಧ ಪುನರಾರಂಭಿಸುವ ಕಂಡುಬರುತ್ತಿದೆ.

ಜರ್ಮನಿಯ ರಕ್ಷಣಾ ಸಚಿವ ಅನೆಗ್ರೆಟ್ ಕ್ರಾಂಪ್-ಕರೆನ್ಬೌರ್ ಅವರು ಪಶ್ಚಿಮದ ಆದರ್ಶಗಳನ್ನು ಇಂದು ಪ್ರಶ್ನೆ ಮಾಡಲಾಗುತ್ತಿದೆ ಎಂದು ಹೇಳಿದರು. ಭದ್ರತೆಯನ್ನು ಹೆಚ್ಚಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಪ್ರಯತ್ನವಾಗಬೇಕು ಎಂದ ಅವರು, ಆಫ್ರಿಕಾದ ಸಾಹೇಲ್ ಪ್ರದೇಶವೂ ಸೇರಿದಂತೆ ತನ್ನ ಸಾಗರೋತ್ತರ ಕಾರ್ಯಾಚರಣೆಗಳಲ್ಲಿ ಜರ್ಮನಿ ಇನ್ನೂ ಹೆಚ್ಚು ಸಕ್ರಿಯರಾಗಬೇಕು ಎಂದು ಕರೆ ಕೊಟ್ಟರು.

ಚೀನಾದ ದೂರಸಂಪರ್ಕ ಸಂಸ್ಥೆ ಹುವಾವೇ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ ಯುಎಸ್ ಮತ್ತು ಯುರೋಪ್ ಸಮ್ಮೇಳನದುದ್ದಕ್ಕೂ ನಿರಂತರವಾಗಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದವು. ಯುಎಸ್ ಇದನ್ನು ಬೀಜಿಂಗ್‌ಗಾಗಿ ‘ಗೂಢಾಚಾರ’ ಎಂದು ಪರಿಗಣಿಸಿದೆ. ಪಾಶ್ಚಿಮಾತ್ಯ ಮೂಲಸೌಕರ್ಯಗಳತ್ತ ನುಸುಳಲು ಚೀನಾ ಮಾಡಿರುವ ‘ದುಷ್ಕೃತ್ಯ ತಂತ್ರ’ಕ್ಕೆ ಹುವಾವೇ ‘ಪೋಸ್ಟರ್ ಮಗು ’ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಉಲ್ಲೇಖಿಸಿದರು. ಅಲ್ಲದೆ 5ಜಿ ನೆಟ್‌ವರ್ಕ್‌ ನಿರ್ಮಾಣ ಕುರಿತಂತೆ ಹುವಾವೇಗೆ ಅನುಮತಿ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬ್ರಿಟನ್‌ಗೆ ಎಚ್ಚರಿಕೆ ನೀಡಿದರು. ಜರ್ಮನಿಯ ವಿದೇಶಾಂಗ ಸಚಿವ ಹೆಕೊ ಮಾಸ್, ಯುಎಸ್ ಮತ್ತು ಯುರೋಪ್ ನಡುವಿನ ಯಾವುದೇ ಸಂಘರ್ಷದ ಸಾಧ್ಯತೆಗಳಿಲ್ಲ ಎಂದು ಅಭಿಪ್ರಾಯಪಟ್ಟರು. ನ್ಯಾಟೋ ಸುಧಾರಣೆಗಳ ಅಗತ್ಯತೆ ಮತ್ತು ಯುರೋಪಿನ ಒಮ್ಮತದ ವಿಧಾನವನ್ನು ಅವರು ಉಲ್ಲೇಖ ಮಾಡಿದರು.

ಯುಎಸ್ ಮತ್ತು ಯುರೋಪ್ ನಡುವೆ ಮೂಡಿರುವ ಬಿರುಕಿನ ಬಗ್ಗೆ ಅವಲೋಕಿಸಿರುವ ಪಶ್ಚಿಮ ಚೀನಾವು ದಕ್ಷಿಣ ಚೀನಾ ಸಮುದ್ರದಲ್ಲಿ ತೆಗೆದುಕೊಂಡ ಕ್ರಮಗಳನ್ನು ಹಾಗೂ ಅದರ ‘ಮಿಲಿಟರೀಕರಣ’ವನ್ನು ಸರ್ವಾನುಮತದಿಂದ ನಿರ್ಣಯಿಸಿದೆ. ಚೀನಾ ಶಾಂತಿಯುತ ಅಭಿವೃದ್ಧಿಗೆ ನಿಂತಿದೆ ಹಾಗೂ ‘ಪಾಶ್ಚಿಮಾತ್ಯ ಮಾದರಿ’ ಅನುಕರಿಸುವುದಿಲ್ಲ ಎಂದು ಹೇಳುವ ಮೂಲಕ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ತಮ್ಮ ದೇಶದ ಕ್ರಮವನ್ನು ಸಮರ್ಥಿಸಿಕೊಂಡರು. ಜೊತೆಗೆ ಜಗತ್ತಿನಲ್ಲಿ ಶಾಂತಿ ಹಾಗೂ ಸ್ಥಿರತೆ ಕಾಪಾಡಲು ಸಹಕಾರ ನೀಡಿ ಎಂದು ಕರೆ ಕೊಟ್ಟರು.

ಸಮ್ಮೇಳನದಲ್ಲಿ ಭಾಗವಹಿಸಿದ್ದವರು ಏಕಾಏಕಿ ದಾಳಿ ಇಟ್ಟಿರುವ ವುಹಾನ್ ಕೊರೊನಾ ವೈರಸ್ ಅನ್ನು ನಿಭಾಯಿಸುವ ಬಗ್ಗೆ ಚರ್ಚೆ ನಡೆಸಿದರು. ಚೀನಾ ವಿದೇಶಾಂಗ ಇಲಾಖೆಯ ಉಪ ಮಂತ್ರಿ ಕಿನ್ ಗ್ಯಾಂಗ್ ತಮ್ಮ ಸರ್ಕಾರ ರೋಗವನ್ನು ನಿಭಾಯಿಸುತ್ತಿರುವ ಬಗ್ಗೆ ಸಮರ್ಥಿಸಿಕೊಂಡರು. ಅಲ್ಲದೆ ರೋಗ ಹರಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೇವಲ ಶೇಕಡ 1ರಷ್ಟು ಮಾತ್ರ ಚೀನಾ ಗಡಿಯ ಹೊರಹೋಗಿದೆ ಎಂದು ಹೇಳಿದರು.

ಯುಎಸ್ ಸೆನೆಟರ್ ಲಿಂಡ್ಸೆ ಗ್ರಹಾಂ ಮಾತನಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಮ್ಯೂನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ 2020 ನಡೆಯುತ್ತಿರುವ ಸಂದರ್ಭದಲ್ಲಿ ಭಾರತವು ಜಮ್ಮು ಕಾಶ್ಮೀರ ಸಮಸ್ಯೆಯನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಬಗೆಹರಿಸುವುದು ಉತ್ತಮ ಮಾರ್ಗ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಭಾರತೀಯ ಪ್ರಜಾಪ್ರಭುತ್ವವು "ಆ ಸಮಸ್ಯೆಯನ್ನು ತನ್ನದೇ ಆದ ರೀತಿಯಲ್ಲಿ ಬಗೆಹರಿಸಿಕೊಳ್ಳಲಿದೆ” ಎಂದು ಹೇಳಿದರು. ಮ್ಯೂನಿಚ್‌ನಲ್ಲಿ, ಡಾ. ಜೈಶಂಕರ್ ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರನ್ನು ಭೇಟಿಯಾದರು ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂಬರುವ ಭಾರತ ಭೇಟಿ ಬಗ್ಗೆ ಚರ್ಚಿಸಿದರು. ಅಲ್ಲದೆ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸುವುದರ ಜೊತೆಜೊತೆಗೆ ಸೌದಿ ಹಾಗೂ ಓಮಾನಿ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದರು.

ಎಂಎಸ್‌ಸಿ 2020 ಮಹತ್ವದ್ದಾಗಿತ್ತು, ಏಕೆಂದರೆ ಇದರಲ್ಲಿ ಪಾಶ್ಚಿಮಾತ್ಯ ಒಕ್ಕೂಟದ ಕಲ್ಪನೆ ಬಗ್ಗೆ ವಿಶ್ವ ನಾಯಕರು ಹೊಂದಿದ್ದ ಅಭಿಪ್ರಾಯಗಳು ವ್ಯಕ್ತವಾದವು. ಎಂಎಸ್‌ಸಿಯಂತಹ ವೇದಿಕೆಯಲ್ಲಿ ವಿವಿಧ ರೀತಿಯ ಅಭಿಪ್ರಾಯಗಳು ಮತ್ತು ಆತಂಕಗಳು ಮತ್ತು ವಿಷಯಗಳ ಕುರಿತು ಚರ್ಚೆ ನಡೆಸಲು ಸಾಧ್ಯವಾಯಿತು. ಇಷ್ಟರ ನಡುವೆಯೂ ಜಗತ್ತನ್ನು ಸುರಕ್ಷಿತ ಮತ್ತು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಅಂತಾರಾಷ್ಟ್ರೀಯ ಸಮುದಾಯವು ಸಾಮಾನ್ಯ ಭದ್ರತೆ ಮತ್ತು ರಕ್ಷಣಾ ಸಮಸ್ಯೆಗಳ ಬಗ್ಗೆ ಒಮ್ಮತದ ಅಭಿಪ್ರಾಯಗಳನ್ನು ಹೊಂದುವುದು ಹಾಗೂ ಜೊತೆಯಾಗಿ ನಿಭಾಯಿಸಲು ಯತ್ನಿಸುವುದು ಬಹಳ ಅಗತ್ಯ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ಸ್ಕ್ರಿಪ್ಟ್: ಡಾ. ಸಂಘಮಿತ್ರ ಶರ್ಮಾ, ಯೂರೋಪ್ ವ್ಯವಹಾರಗಳ ಕಾರ್ಯತಂತ್ರ ವಿಶ್ಲೇಷಕ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ