ಉಪ-ಪ್ರಾದೇಶಿಕ ಸಂಪರ್ಕ ಯೋಜನೆಯ ವರ್ಧನೆಗೆ BBIN
"ನೆರೆಹೊರೆ ಮೊದಲು " ನೀತಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA (ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್) ಸರ್ಕಾರದ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ. 2014ರಲ್ಲಿ ಪ್ರಧಾನ ಮಂತ್ರಿಗಳು ಅಧಿಕಾರ ವಹಿಸಿಕೊಂಡಾಗಿನಿಂದ, ಭಾರತದ ನೆರೆಯ ರಾಷ್ಟ್ರಗಳ ಮೇಲೆ - ವಿಶೇಷವಾಗಿ ಭಾರತದ ಅತೀ ಸಮೀಪದ ಪೂರ್ವ ನೆರೆಹೊರೆಯವರ ಮೇಲೆ ಅವರ ಗಮನ ಕೇಂದ್ರೀಕೃತವಾಗಿದೆ.
ಪ್ರಧಾನಿ ಮೋದಿಯವರ ನೆರೆಹೊರೆಯ ರಾಜತಾಂತ್ರಿಕತೆಯು ಕೇವಲ ನೆರೆಹೊರೆಯವರ ನಡುವಿನ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳುವುದೊಂದೇ ಅಲ್ಲ. ಉಪ-ಪ್ರಾದೇಶಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಕಠಿಣ ಮೂಲಸೌಕರ್ಯ (ರಸ್ತೆ, ರೈಲು, ವಾಯು) ಮತ್ತು ಮೃದುವಾದ (ಆರ್ಥಿಕ, ಜನರಿಂದ ಜನರಿಗೆ ಮತ್ತು ಡಿಜಿಟಲ್) ಸಂಪರ್ಕವನ್ನು ತರಲು ಇದು ಶ್ರಮಿಸುತ್ತದೆ. ಭಾರತ ಮತ್ತು ಅದರ ನೆರೆಹೊರೆಯವರ ನಡುವೆ ಅನೇಕ ಕಠಿಣ ಮತ್ತು ಮೃದುವಾದ ಸಂಪರ್ಕ ಯೋಜನೆಗಳು ಕಾರ್ಯಗತವಾಗುತ್ತಿವೆ.
BBIN (ಬಾಂಗ್ಲಾದೇಶ, ಭೂತಾನ್, ಭಾರತ ಮತ್ತು ನೇಪಾಳ) ಉಪ-ಪ್ರಾದೇಶಿಕ ಸಂಪರ್ಕ ಉಪಕ್ರಮವು ಅಂತಹ ಉದ್ದೇಶಗಳನ್ನು ಪೂರೈಸುವಲ್ಲಿ ಮಹತ್ವವನ್ನು ಹೊಂದಿದೆ. ಸಹಿ ಹಾಕಿದ ದೇಶಗಳಲ್ಲಿ ಪರಿಣಾಮಕಾರಿ ನಿಯಂತ್ರಕ ಕಾರ್ಯವಿಧಾನದ ಮೂಲಕ ಖಾಸಗಿ ಮತ್ತು ಸರಕು ಸಾಗಣೆ ವಾಹನಗಳಿಗೆ ತಡೆರಹಿತ ಸಂಪರ್ಕವನ್ನು ಖಚಿತಪಡಿಸುವುದು BBINನ ಉದ್ದೇಶಿತ ಗುರಿಯಾಗಿದೆ.
ಆ ನಿಟ್ಟಿನಲ್ಲಿ, ಬಾಂಗ್ಲಾದೇಶ, ಭಾರತ ಮತ್ತು ನೇಪಾಳದ ಅಧಿಕಾರಿಗಳ ನಡುವೆ ಇತ್ತೀಚೆಗೆ, ವಾಹನಗಳ ಗಡಿಯಾಚೆಗಿನ ಸಂಚಾರಕ್ಕೆ ಅನುಕೂಲವಾಗುವ, ಮೋಟಾರು ವಾಹನಗಳ ಒಪ್ಪಂದ(MVA)ವನ್ನು ಶೀಘ್ರವಾಗಿ ಮುಕ್ತಾಯಗೊಳಿಸಲು ಸಭೆ ನಡೆಸಲಾಯಿತು. ಭೂತಾನ್‌ನ ಪ್ರತಿನಿಧಿಗಳು ವೀಕ್ಷಕರ ಸಾಮರ್ಥ್ಯದಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ ದೇಶಗಳಲ್ಲಿ ಪ್ರಯಾಣಿಕ, ವೈಯಕ್ತಿಕ ಮತ್ತು ಸರಕು ವಾಹನ ಸಂಚಾರವನ್ನು ನಿಯಂತ್ರಿಸಲು MVAಗೆ ಅನುವು ಮಾಡಿಕೊಡುವ ಸರಕು ಮತ್ತು ಪ್ರಯಾಣಿಕರ ಪ್ರೋಟೋಕಾಲ್‌ಗಳ ಕುರಿತು ಚರ್ಚೆಗಳು ನಡೆದವು. ಜನವರಿ 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯ ನಂತರ ನಡೆದ ಮೊದಲ ಸಭೆ ಇದು ಎಂಬ ಹಿನ್ನಲೆಯಲ್ಲಿ ಈ ಸಭೆ ಮಹತ್ವವನ್ನು ಹೊಂದಿದೆ.
ಸಭೆಯಲ್ಲಿ ನಡೆದ ಚರ್ಚೆಗಳ ಆಧಾರದ ಮೇಲೆ ದೇಶೀಯ ಸಮಾಲೋಚನೆಗಳ ಫಲಿತಾಂಶವನ್ನು ಕುರಿತು ಭಾಗವಹಿಸುವ ದೇಶಗಳು ಮೇ 2020ರ ವೇಳೆಗೆ ಮರಳುವದೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಚರ್ಚೆಯ ಸಮಯದಲ್ಲಿ, ಭಾರತ, ಬಾಂಗ್ಲಾದೇಶ ಮತ್ತು ನೇಪಾಳ ಸಹಿ ಮಾಡಬೇಕಾದ ಕರಡು ಜ್ಞಾಪಕ ಪತ್ರ (MOU) ಕುರಿತು ಚರ್ಚಿಸಲಾಯಿತು. ಈ ಹಂತದಲ್ಲಿ, ಭೂತಾನ್ ದೇಶಕ್ಕೆ ಯಾವುದೇ ಬಾಧ್ಯತೆಯಿಲ್ಲದೆ, ಮೂರು ದೇಶಗಳಲ್ಲಿ BBIN MVA ನ್ನು ಸಕ್ರಿಯವಾಗಲು MOU ಅನುವುಮಾಡಿಕೊಡುತ್ತದೆ. ಜೂನ್ 2015ರಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಭೂತಾನ್ ಮೋಟಾರು ವಾಹನಗಳ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದಾಗ್ಯೂ, ಒಪ್ಪಂದಕ್ಕೆ ಭೂತಾನ್ ತನ್ನ ಸಂಸತ್ತಿನ ಮೇಲ್ಮನೆಯ ಅಂಗೀಕರ ಇನ್ನೂ ಪಡೆಯಬೇಕಿದೆ.
BBIN ಮೋಟಾರು ವಾಹನ ಒಪ್ಪಂದಕ್ಕೆ ಸಂಬಂಧಿಸಿದಂತೆ ಭೂತಾನ್‌ನಲ್ಲಿನ ನೀತಿ ನಿರೂಪಕರಲ್ಲಿ ಎದ್ದಿರುವ ಕಳವಳಗಳು ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಕಾಳಜಿಗಳಿಗೆ ಸಂಬಂಧಿಸಿದ್ದಾಗಿದೆ. ಸೂಕ್ಷ್ಮ ಪರಿಸರವನ್ನು ಹೊಂದಿರುವ ಸಣ್ಣ ಪರ್ವತ ದೇಶವಾಗಿರುವುದರಿಂದ, ಭೂತಾನ್‌ನ ಕಾಳಜಿಗಳು ಪ್ರಾಮಾಣಿಕವೇ ಸರಿ. ಎಲ್ಲಾ ಸದಸ್ಯ ರಾಷ್ಟ್ರಗಳು ಭೂತಾನ್‌ನ ಕಳವಳಗಳನ್ನು ಸೂಕ್ಷ್ಮವಾಗಿ ಗಮನಿಸಿ ಪರಿಹರಿಸಬೇಕು. ಭೂತಾನ್ ಅನ್ನು ಸೇರ್ಪಡೆಮಾಡಲು, ಭೂತಾನ್ ಪ್ರವೇಶಿಸಲು ಅನುಮತಿ ಪಡೆದ ವಾಹನಗಳ ಸಂಖ್ಯೆಯನ್ನು ಇತರ ದೇಶಗಳು ನಿಯಂತ್ರಿಸಬೇಕು. ಭೂತಾನ್‌ನ ಕಳವಳ ಭಾರತದ ಗಮನದಲ್ಲಿದ್ದು, ಹೆಚ್ಚಿನ ಸಾರಿಗೆ ಸಂಪರ್ಕವು ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರದ ರಕ್ಷಣೆಗೆ ಮಾರಕವಾಗಬಾರದು ಎಂಬ ನಂಬಿಕೆಯನ್ನು ಭಾರತ ಹಂಚಿಕೊಳ್ಳುತ್ತದೆ.
BBINನಲ್ಲಿ ಭಾಗವಹಿಸಿದ ನಾಲ್ಕು ದೇಶಗಳಲ್ಲಿ, ಭೂತಾನ್ ಮತ್ತು ನೇಪಾಳ, ಸಾಗರ ಸಂಪರ್ಕವಿಲ್ಲದ ಸೀಮಿತ ದೇಶೀಯ ಮತ್ತು ಗಡಿಯಾಚೆಗಿನ ಮೂಲಸೌಕರ್ಯ ಸಂಪರ್ಕವನ್ನು ಹೊಂದಿರುವ ಎರಡು ಪ್ರಮುಖ ದೇಶಗಳಾಗಿವೆ. ಭಾರತದ ಮೂಲಕ ನೇಪಾಳ ಮತ್ತು ಭೂತಾನ್ ಎರಡೂ ಸಮುದ್ರಕ್ಕೆ ಪ್ರವೇಶ ಪಡೆಯುತ್ತವೆ. BBIN ಕಾರ್ಯಗತಗೊಳಿಸಿದಾಗ, ಉಪ-ಪ್ರಾದೇಶಿಕ ಸಂಪರ್ಕ ಹೆಚ್ವುವುದರ ಜೊತೆಗೆ, ಜನರ ಪರಸ್ಪರ ಸುಗಮ ಸಂಪರ್ಕಕ್ಕೆ ಸಹಕಾರಿಯಾಗಿ, ಅಂತಿಮವಾಗಿ ಹೆಚ್ಚಿನ ಪ್ರವಾಸಿ ವಿನಿಮಯಕ್ಕೆ ಬೆಂಬಲ ನೀಡುತ್ತದೆ. ಹೆಚ್ಚಿನ ಸಾರಿಗೆ ಸಂಪರ್ಕಗಳು ತಮ್ಮ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಮತ್ತು ವ್ಯಾಪಾರ ಸರಕುಗಳು ವೇಗವಾಗಿ ಚಲಿಸಲು ಸಹ ಸಹಾಯ ಮಾಡುತ್ತದೆ. ವ್ಯಾಪಾರ ಸರಕುಗಳ, ವಿಶೇಷವಾಗಿ ಹಾಳಾಗಬಹುದಾದ ವಸ್ತುಗಳ, ಸಾಗಣೆಗೆ ವೆಚ್ಚವಾಗುವ ಸಮಯ, ಭಾರತ ಮತ್ತು ಅದರ ನೆರೆಹೊರೆಯವರ ನಡುವಿನ ವ್ಯಾಪಾರ ಸಂಬಂಧಗಳ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶವಾಗಿರುವುದರಿಂದ ಇದು ಮುಖ್ಯವಾಗಿದೆ. ಭಾರತದ ಈಶಾನ್ಯ ಮತ್ತು ಪೂರ್ವ ರಾಜ್ಯಗಳಿಗೆ ಸಹ ಇಂತಹ ವ್ಯವಸ್ಥೆಯಿಂದ ಪ್ರಯೋಜನವಾಗುತ್ತದೆ. ಭಾರತವು ಎಲ್ಲಾ ಮೂರು ದೇಶಗಳೊಂದಿಗೆ ದ್ವಿಪಕ್ಷೀಯ ಕಾರ್ಯವಿಧಾನಗಳನ್ನು ಹೊಂದಿದ್ದರೂ, ಬಹು-ದೇಶಗಳ ಗಡಿಯಾಚೆಗಿನ ವ್ಯವಸ್ಥೆಯು ತಡೆರಹಿತ ಗಡಿಯಾಚೆಗಿನ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನವನ್ನು ನೀಡುತ್ತದೆ.
ಮೋಟಾರು ವಾಹನ ಒಪ್ಪಂದವನ್ನು ಜಾರಿಗೆ ತರಲು ಭಾರತ, ನೇಪಾಳ ಮತ್ತು ಬಾಂಗ್ಲಾದೇಶಗಳು ತೆಗೆದುಕೊಂಡ ನಿರ್ಧಾರದಿಂದ, ಮೂರು ರಾಷ್ಟ್ರಗಳ ಸಂಪರ್ಕ ಯೋಜನೆ ವಾಸ್ತವವಾಗುವ ಸಮಯ ಸನ್ನಿತವಾಗಿದೆ. ಮೇಲ್ಮನೆಯ ಅಂಗೀಕಾರದೊಂದಿಗೆ ಭೂತಾನ್ ಕೂಡ ಶೀಘ್ರದಲ್ಲೇ ಬ್ಯಾಂಡ್‌ವ್ಯಾಗನ್‌ಗೆ ಸೇರಲಿದೆ ಎಂಬ ನಂಬಿಕೆಯಿದೆ.
ಲೇಖನ: ಡಾ. ರಾಹುಲ್ ಮಿಶ್ರಾ, ಕಾರ್ಯತಂತ್ರದ ವಿಶ್ಲೇಷಕ

Comments
Post a Comment