ಅಧ್ಯಕ್ಷ ಟ್ರಂಪ್‌ರವರ ಭಾರತದ ಭೇಟಿಯ ಮಹತ್ವ
ಎರಡನೆಯ ಮಹಾಯುದ್ಧದ ನಂತರ, ಯಾವುದೇ ದೇಶಕ್ಕೆ ಅಮೆರಿಕ ಅಧ್ಯಕ್ಷೀಯ ಭೇಟಿಯ ಮಹತ್ವವನ್ನು ಎಂದಿಗೂ ಉಪೇಕ್ಷೆ ಮಾಡಲಾಗುವುದಿಲ್ಲ. ಅಮೆರಿಕ ಜಾಗತಿಕ ಮಹಾಶಕ್ತಿಯಾಗಿರುವುದರಿಂದ ಮಾತ್ರವಲ್ಲ, ಸಂಪರ್ಕದ ಸಂಕೀರ್ಣ ಜಾಲದಲ್ಲಿ ವಿಶ್ವದ ರಾಜಕೀಯ ಆರ್ಥಿಕತೆಯು ಅಸ್ತಿತ್ವದಲ್ಲಿದ್ದು, ಅಲ್ಲಿ ಅಮೆರಿಕ ಪಾತ್ರವು ಮಹತ್ತಾಗಿದೆ.
ಅಮೆರಿಕ ಅಧ್ಯಕ್ಷೀಯ ಭೇಟಿಯ ಫಲಿತಾಂಶದ ಬಗ್ಗೆ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ಅಮೆರಿಕವನ್ನು ತೊಡಗಿಸಿಕೊಳ್ಳುವುದರ ಮಹತ್ವದ ಬಗ್ಗೆ ಯಾರೂ ಪ್ರಶ್ನಿಸಲಾಗುವುದಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಮುಂಬರುವ ಭೇಟಿ ಉಭಯ ದೇಶಗಳಿಗೆ ಮುಖ್ಯವಾಗಲು ಹಲವಾರು ನಿರ್ಣಾಯಕ ಕಾರಣಗಳಿವೆ.
ಜಾಗತಿಕ ಕಾರ್ಯತಂತ್ರದ ಸಮತೋಲನವು ಕ್ಷಿಪ್ರವಾಗಿ ಬದಲಾಗುತ್ತಿದ್ದು, ಅದು ಅಮೆರಿಕ ಪರವಾಗಿ ವಾಲುತ್ತಿದೆ. ‘ಕ್ಷೀಣಿಸುತ್ತಿರುವ ಅಮೆರಿಕ ಮತ್ತು ಏರುತ್ತಿರುವ ಚೀನಾ’ ಅಭಿಪ್ರಾಯ ಸ್ಥಗಿತಗೊಂಡಿದೆ. ಅವರ ಅಧ್ಯಕ್ಷತೆಯ ಸುತ್ತ ಹಲವಾರು ವಿವಾದಗಳ ಹೊರತಾಗಿಯೂ, ಅಧ್ಯಕ್ಷ ಟ್ರಂಪ್ ಅವರು ವಿಶ್ವದಲ್ಲಿ ಅಮೆರಿಕ ಸ್ಥಾನ ಮತ್ತು ಅಧಿಕಾರವನ್ನು ಪುನಃ ಪಡೆದುಕೊಳ್ಳಲು ಸಮರ್ಥರಾಗಿದ್ದು, ಅಮೆರಿಕದ ಜಾಗತಿಕ ಪ್ರಭಾವವನ್ನು ಪ್ರಶ್ನಿಸಲು ಚೀನಾಕ್ಕೆ ಸಾಧ್ಯವಾಗುತ್ತಿಲ್ಲ. ಅಮೆರಿಕದಂತಹ ಪ್ರಬಲ ರಾಜಕೀಯ ಅಸ್ತಿತ್ವದೊಂದಿಗೆ ಅಂತರರಾಷ್ಟ್ರೀಯ ಸಮುದಾಯದ ಯಾವುದೇ ಸದಸ್ಯ ರಾಷ್ಟ್ರ ತೊಡಗಿಸಿಕೊಳ್ಳುವುದು ಅವಶ್ಯಕ.
ಇತ್ತೀಚಿನ ವರ್ಷಗಳಲ್ಲಿ, ದಕ್ಷಿಣ ಚೀನಾ ಸಮುದ್ರ / ಪೂರ್ವ ಸಮುದ್ರದ ವ್ಯಾಪಕವಾದ ಜಲರಾಶಿಯ ಮೇಲೆ ಚೀನಾದ ಸಾರ್ವಭೌಮತ್ವವನ್ನು ವಿಸ್ತರಿಸುವಂತಹ, ದೂರದ ಸಾಗರ ನೀರಿನಲ್ಲಿ ನೌಕಾಪಡೆಯ ಪ್ರದರ್ಶನದಂತಹ ಅಥವಾ ’ಬೆಲ್ಟ್ ಮತ್ತು ರಸ್ತೆ’ ಉಪಕ್ರಮದ ಮೂಲಕ ಪರಭಕ್ಷಕ ಆರ್ಥಿಕ ಅಭ್ಯಾಸಗಳನ್ನು ಉತ್ತೇಜಿಸುವಂತಹ ಚೀನಾದ ಹೆಚ್ಚುತ್ತಿರುವ ಪ್ರತಿಪಾದನೆಯನ್ನು ಎದುರಿಸಲು ಟ್ರಂಪ್ ಆಡಳಿತ ಪರಿಣಾಮಕಾರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚೀನಾವನ್ನು ಶಾಂತಿಯುತ ಪಾಲುದಾರರನ್ನಾಗಿ ಮಾಡುವ ಮತ್ತು ಅದರ ಸೇನಾಶಕ್ತಿ ಪ್ರದರ್ಶನವನ್ನು ನಿರುತ್ಸಾಹಗೊಳಿಸುವ ಗುರಿ ಹೊಂದಿರುವ ದೇಶಗಳೊಂದಿಗೆ ಕೈಜೋಡಿಸುವುದು ಭಾರತದ ಹಿತಾಸಕ್ತಿಗೆ ಒಳಿತು.
ಅಲ್ಲದೆ, ಕಳೆದ ಕೆಲವು ದಶಕಗಳಲ್ಲಿ ಶ್ರಮದಾಯಕವಾಗಿ ನಿರ್ಮಿಸಲಾದ ಅಮರಿಕ-ಭಾರತ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನಿರಂತರ ಪೋಷಣೆ ಮತ್ತು ನವೀಕರಣದ ಅಗತ್ಯವಿದೆ. ಅಮೆರಿಕ ಅಧ್ಯಕ್ಷ ಮತ್ತು ಭಾರತದ ಪ್ರಧಾನ ಮಂತ್ರಿಗಳ ನಡುವಿನ ಶೃಂಗಸಭೆಯು ಕಾರ್ಯತಂತ್ರದ ಸಹಭಾಗಿತ್ವದ ಸ್ವಾಭಾವಿಕ ಸಂಬಂಧವಾಗಿದೆ. ಸಚಿವಾಲಯದ ಮಟ್ಟದಲ್ಲಿ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಗಳನ್ನು ಒಳಗೊಂಡ 2 + 2 ಸಂವಾದ ಕಾರ್ಯವಿಧಾನವು ಭಾರತ-ಅಮೆರಿಕಾ ಕಾರ್ಯತಂತ್ರದ ಸಂಬಂಧಗಳನ್ನು ಹೆಚ್ಚಿಸಲು ಉತ್ತಮ ಸೇರ್ಪಡೆಯಾಗಿದೆ. ಆದರೆ, ದೀರ್ಘ ಸದೃಢ ಸಂಬಂಧಕ್ಕೆ ಸರ್ಕಾರಗಳ ಉನ್ನತ ಮಟ್ಟದ ಗಮನ ಮತ್ತು ತೊಡಗಿಸುವಿಕೆಯ ಅಗತ್ಯವಿದೆ.
ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಸಂಬಂಧವು ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಉಭಯ ದೇಶಗಳ ವಾಣಿಜ್ಯ ಅಧಿಕಾರಿಗಳು ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮತ್ತು ಸಹಕಾರವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಬೇರೆ ಯಾವುದೇ ಅಮೆರಿಕ ಅಧ್ಯಕ್ಷರು ವ್ಯಾಪಾರ ಮತ್ತು ಹೂಡಿಕೆ ಸಮಸ್ಯೆ ಬಗ್ಗೆ ಅಧ್ಯಕ್ಷ ಟ್ರಂಪ್ ಅವರಂತೆ ಹೆಚ್ಚು ಗಮನ ನೀಡಿಲ್ಲ. ಉತ್ತಮ ಉದ್ಯಮ ಹಿನ್ನೆಲೆಯೊಂದಿಗೆ, ಅಧ್ಯಕ್ಷ ಟ್ರಂಪ್ ತಮ್ಮ ಪೂರ್ವವರ್ತಿಗಳ ಸಾಂಪ್ರದಾಯಿಕ ವಿದೇಶಿ ಆರ್ಥಿಕ ನೀತಿಗಳನ್ನು ಬದಲಾಯಿಸುವ ಮೂಲಕ ತಮ್ಮ ವಿದೇಶಿ ಆರ್ಥಿಕ ನೀತಿಯನ್ನು ಕೆಲವು ರೀತಿಯಲ್ಲಿ ರೂಪಿಸಲು ಬಯಸುತ್ತಾರೆ. ಪ್ರಪಂಚದ ಬದಲಾದ ರಾಜಕೀಯ ಆರ್ಥಿಕತೆಯ ಹಿನ್ನಲೆ ಯಲ್ಲಿ, ಭಾರತವು ಅಮೆರಿಕದೊಂದಿಗೆ ತನ್ನದೇ ಆದ ಸಮೀಕರಣಗಳನ್ನು ರೂಪಿಸಲು ಪ್ರಯತ್ನಿಸುತ್ತಿದೆ. ತಪ್ಪು ಗ್ರಹಿಕೆಯನ್ನು ತಪ್ಪಿಸಲು ಮತ್ತು ಭಿನ್ನಾಭಿಪ್ರಾಯಗಳಿಗೆ ಗೆಲುವು-ಗೆಲುವಿನ ಪರಿಹಾರವನ್ನು ಕಂಡುಹಿಡಿಯಲು ಶೃಂಗಸಭೆಯ ಮಟ್ಟದಲ್ಲಿ ತಿಳುವಳಿಕೆಯನ್ನು ಮೂಡಿಸುವುದು ಸದ್ಯದ ಬೇಡಿಕೆಯಾಗಿದೆ.
ದೇಶಗಳು ಪರಸ್ಪರ ನಿಯೋಜಿಸಿರುವ ಆಳ ಮತ್ತು ಪ್ರಾಮುಖ್ಯತೆಯನ್ನು ಶೃಂಗಸಭೆಯ ಮಟ್ಟದ ಸಭೆಗಳು ಪ್ರತಿಬಿಂಬಿಸುತ್ತವೆ. ಅಧ್ಯಕ್ಷ ಟ್ರಂಪ್ ಹೆಚ್ಚು ದ್ವಿಪಕ್ಷೀಯ ಭೇಟಿಗಳನ್ನು ಮಾಡಿಲ್ಲದಿರುವುದರಿಂದ, ಭಾರತಕ್ಕೆ ಬರಲು ಅವರು ಆಸಕ್ತಿ ತೋರಿಸಿದ್ದರೆ, ಭಾರತದೊಂದಿಗೆ ವಿಕಸಿಸುತ್ತಿರುವ ಅಮೆರಿಕದ ಸಂಬಂಧಕ್ಕೆ ಪ್ರಸ್ತುತ ಶ್ವೇತಭವನವು ನೀಡುತ್ತಿರುವ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ .
ವಾಷಿಂಗ್ಟನ್ ಡಿ.ಸಿ ಯಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಪ್ರಧಾನಿ ಮೋದಿಯವರ ಶೃಂಗಸಭೆ, ಶ್ರೀಮೋದಿಯವರ ವಿದೇಶಾಂಗ ನೀತಿಯ ಗಮನಾರ್ಹ ಅಂಶವಾಗಿದೆ. ಭಾರತೀಯ ಪ್ರಧಾನಿಯನ್ನು ಬೆಂಬಲಿಸುವ ಅಮೇರಿಕದ ಹೂಸ್ಟನ್ ಕ್ರೀಡಾಂಗಣದ “ಹೌಡಿ ಮೋದಿ” ಕಾರ್ಯಕ್ರಮವು, ತಮ್ಮ ದೇಶಕ್ಕೆ ಅಮೆರಿಕ ದೇಶದಲ್ಲಿ ನೆಲಸಿರುವ ಭಾರತೀಯ ಮಾನವ ಸಂಪನ್ಮೂಲದ ಕೊಡುಗೆಯ ಬಗ್ಗೆ ಅಧ್ಯಕ್ಷ ಟ್ರಂಪ್ ಮೇಲೆ ಪ್ರಭಾವನ್ನು ಬೀರಿದೆ. ಅಮೆರಿಕದ ಅಧ್ಯಕ್ಷರಿಗಾಗಿ ಗುಜರಾತ್‌ನ ಮೊಟೆರಾದಲ್ಲಿ ಪ್ರಧಾನಿ ಮೋದಿಯವರು ಯೋಜಿಸಿರುವ ಕ್ರೀಡಾಂಗಣ ಪ್ರದರ್ಶನವು ದ್ವಿಪಕ್ಷೀಯ ಆರ್ಥಿಕ ತೊಡಗಿಸುವಿಕೆಯಲ್ಲಿ, ಇತರ ವಿಷಯಗಳ ಜೊತೆಗೆ, ಭಾರತೀಯ ಜನಾಂಗದ ವಿಶೇಷತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
ರಾಷ್ಟ್ರಗಳ ನಡುವಿನ ಮೂಲಭೂತ ಸಂಬಂಧ ಎಷ್ಟೇ ಉತ್ತಮವಾಗಿದ್ದರೂ ಸಹ, ಅದು ಫಲಪ್ರದವಾಗಲೂ ಅಂತಹ ಸಂಬಂಧಗಳಿಗೆ ಉನ್ನತ ಮಟ್ಟದ ಗಮನವು ಅತಿಮುಖ್ಯ. ಆದ್ದರಿಂದ, ಅಧ್ಯಕ್ಷ ಟ್ರಂಪ್ ಅವರ ಮುಂಬರುವ ಭಾರತ ಭೇಟಿ ಹೆಚ್ಚು ಮಹತ್ವದ್ದಾಗಿದೆ.
ಲೇಖನ: ಪ್ರೊ. ಚಿಂತಮಣಿ ಮಹಾಪಾತ್ರ, ಮುಖ್ಯಾಧಿಕಾರಿ ಮತ್ತು ಸಮ ಕುಲಪತಿ, JNU

Comments
Post a Comment