ಮೊತ್ತೊಮ್ಮೆ ಪ್ರೇಕ್ಷಣೆಗಾಗಿ ಪಾಕಿಸ್ತಾನದ ಆಟ
2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನ ಮೂಲದ ಜಮಾಅತ್-ಉದ್-ದಾವಾ (JuD) ಮತ್ತು ಲಷ್ಕರ್-ಎ-ತಯ್ಯಾಬಾ (LET) ಭಯೋತ್ಪಾದಕ ಗುಂಪುಗಳ ಮುಖ್ಯಸ್ಥ ಹಫೀಜ್ ಸಯೀದ್ ಅನ್ನು ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 11 ವರ್ಷಗಳ ಅವಧಿಗೆ ಕಾರಾಗೃಹ ವಶಕ್ಕೆ ತೀರ್ಪು ನೀಡಿದೆ. ಎರಡು ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಆತನನ್ನು ಜೈಲಿಗೆ ಹಾಕಲಾಗಿದೆ. ಪಂಜಾಬ್ ಪ್ರಾಂತ್ಯದ ವಿವಿಧ ನಗರಗಳಲ್ಲಿ ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಸಯೀದ್ ಮತ್ತು ಆತನ ಸಹಚರರ ವಿರುದ್ಧ ಪಾಕಿಸ್ತಾನದ ಭಯೋತ್ಪಾದನಾ ಇಲಾಖೆ (CTD) 23 FIR ದಾಖಲಿಸಿತ್ತು.
"ಹಫೀಜ್ ಸಯೀದ್ ಮತ್ತು ಅವರ ಆಪ್ತ ಸಹಾಯಕ ಜಾಫರ್ ಇಕ್ಬಾಲ್ ಅವರಿಗೆ ಎರಡು ಭಯೋತ್ಪಾದನೆ ಹಣಕಾಸು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ" ಎಂದು ಪಾಕಿಸ್ತಾನ ಸರ್ಕಾರದ ಪ್ರಾಸಿಕ್ಯೂಟರ್ ಅಬ್ದುಲ್ ರವೂಫ್ ವಟ್ಟೊ ಹೇಳಿದ್ದಾರೆ. "ಎರಡೂ ಪ್ರಕರಣಗಳಲ್ಲಿ ಒಟ್ಟು ಶಿಕ್ಷೆ ಅವಧಿ 11 ವರ್ಷಗಳಾದರೂ, ಎರಡು ಶಿಕ್ಷೆಗಳು ಏಕಕಾಲದಲ್ಲಿ ನಡೆಯುವುದರಿಂದ, ಐದುವರೆ ವರ್ಷ ಸೆರೆಮನೆವಾಸ ಸಯೀದ್ ಅನುಭವಿಸಲಿದ್ದಾರೆ ಮತ್ತು ನಾವು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ" ಎಂದು ಸಯೀದ್ ಅವರ ವಕೀಲ ಇಮ್ರಾನ್ ಗಿಲ್ ಈ ಮಧ್ಯೆ ಹೇಳಿದ್ದಾರೆ.
"ಭಯೋತ್ಪಾದನೆ ಹಣಕಾಸು ಪ್ರಕರಣದಲ್ಲಿ UN ಗೊತ್ತುಪಡಿಸಿದ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ಭಯೋತ್ಪಾದಕ ಹಫೀಜ್ ಸಯೀದ್‌ಗೆ ಪಾಕಿಸ್ತಾನವು ಶಿಕ್ಷೆ ವಿಧಿಸುತ್ತಿರುವುದು, ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಕೊನೆಗೊಳಿಸುವುದು ಬಹುಕಾಲದಿಂದ ಬಾಕಿ ಉಳಿದಿರುವ ಅಂತಾ ರಾಷ್ಟ್ರೀಯ ಬಾಧ್ಯತೆಯ ಭಾಗವಾಗಿದೆ" ಎಂದು ಭಾರತ ಹೇಳಿದೆ.
"FATF ಸಮಗ್ರ ಸಭೆಯ ಮುನ್ನಾದಿನದಂದು ಈ ನಿರ್ಧಾರ ತೆಗೆದುಕೊಳ್ಳಲಾಗಿರುವುದರಿಂದ, ಈ ನಿರ್ಧಾರದ ಪರಿಣಾಮಕಾರಿತ್ವವನ್ನು ನೋಡಬೇಕಾಗಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯವು ಭಾವಿಸಿದೆ. ಪಾಕಿಸ್ತಾನವು ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಇತರ ಎಲ್ಲ ಭಯೋತ್ಪಾದಕ ಘಟಕಗಳು ಮತ್ತು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೇ ಹಾಗು ಮುಂಬೈ ಮತ್ತು ಪಠಾಣ್‌ಕೋಟ್ ಸೇರಿದಂತೆ ಗಡಿಯಾಚೆಗಿನ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳನ್ನು ತ್ವರಿತವಾಗಿ ನ್ಯಾಯಕಟ್ಟೆಗೆ ಕರೆತರುತ್ತದೆಯೇ ನೋಡಬೇಕಾಗಿದೆ.
ಸಯೀದ್‌ನನ್ನು ಬಂಧಿಸುವ ಈ ಕುರುಹು ಕ್ರಮವು ಭಯೋತ್ಪಾದಕ ಗುಂಪುಗಳನ್ನು ಕಾಯ್ದಿರಿಸಲು ಇಸ್ಲಾಮಾಬಾದ್ ಗಂಭೀರ ಪ್ರಯತ್ನಗಳನ್ನು ಮಾಡಿದೆ ಎಂಬ ಪಾಕಿಸ್ತಾನದ ವಾದವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ಯಾರಿಸ್ ಮೂಲದ ಜಾಗತಿಕ ಹಣಕಾಸು ಕಾವಲು ಸಮಿತಿ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FA TF) ನ ಮಹತ್ವದ ಸಭೆ ಮುಂದಿನ ವಾರ ನಡೆಯುತ್ತಿದೆ. ಭಯೋತ್ಪಾದಕ ಹಣಕಾಸು ನಿಗ್ರಹದ ವಿಫಲತೆಯ ಕಾರಣಕ್ಕೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ FATF ಸಭೆ ನಡೆಯಲಿದೆ.
ಪಾಕಿಸ್ತಾನ ಈಗಾಗಲೇ FATFನ ‘ಗ್ರೇ ಲಿಸ್ಟ್’ ನಲ್ಲಿದೆ. ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸುವ ಬಗ್ಗೆ ಬಲವಾದ ಕ್ರಮ ಕೈಗೊಳ್ಳಲು ಹೆಚ್ಚಿನ ಒತ್ತಡಕ್ಕೆ ಇಸ್ಲಾಮಾಬಾದ್ ಒಳಗಾಗಿದೆ. ‘ಕಪ್ಪುಪಟ್ಟಿ’ ಬಹಳ ಕಠಿಣ ಆರ್ಥಿಕ ಮತ್ತು ಬ್ಯಾಂಕಿಂಗ್ ನಿರ್ಬಂಧಗಳಿಗೆ ಕಾರಣವಾಗಿ, ಈಗಾಗಲೇ ದುರ್ಬಲಗೊಂಡ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಬಹುದು.
FATF ತನ್ನ ಮುಂದಿನ ಸಭೆಯಲ್ಲಿ, ಸಯೀದ್‌ನ ಶಿಕ್ಷೆಯನ್ನು ಪರಿಗಣಿಸಿ ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ತೆಗೆದು ಇತರ ದೇಶಗಳೊಂದಿಗೆ FATFನ ಶ್ವೇತ ಪಟ್ಟಿಯಲ್ಲಿ ಇರಿಸಲು ಇದು ಸಾಕಾಗಿದೆಯೇ ಎಂದು ಪರಿಗಣಿಸಬೇಕಾಗಿದೆ.
ವಿಶ್ಲೇಷಕರ ಪ್ರಕಾರ, ಚೀನಾ, ಮಲೇಷ್ಯಾ ಮತ್ತು ಟರ್ಕಿಯ ಬೆಂಬಲದಿಂದಾಗಿ ಪಾಕಿಸ್ತಾನವು ಕಪ್ಪು ಪಟ್ಟಿಗೆ ಸೇರ್ಪಡೆಯಾಗಿಲ್ಲ. ಬೂದು ಪಟ್ಟಿಯಿಂದ ಹೊರಬರಲು, ಇಸ್ಲಾಮಾಬಾದ್‌ಗೆ FATFನ 39 ದೇಶಗಳಲ್ಲಿ ಕನಿಷ್ಠ 12 ದೇಶಗಳ ಬೆಂಬಲ ಬೇಕು.
ಈ ತಿಂಗಳ ಕೊನೆಯಲ್ಲಿ ಅಧ್ಯಕ್ಷ ಟ್ರಂಪ್ ಅವರ ಭಾರತ ಭೇಟಿಯ ಘೋಷಣೆಗೆ ಸ್ವಲ್ಪ ಮುಂಚೆ ಸಯೀದ್ ಅವರ ಶಿಕ್ಷೆಯ ಸುದ್ಧಿ ಹೊರಬಿದ್ದಿದೆ. ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಪಾಕಿಸ್ತಾನದ ಪ್ರಯತ್ನಗಳನ್ನು ಅಮೆರಿಕ ಅಧ್ಯಕ್ಷರು ಬಹಳ ಟೀಕಿಸಿದ್ದಾರೆ. ಆದಾಗ್ಯೂ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆ ಒಪ್ಪಂದವನ್ನು ಹುಡುಕುತ್ತಿರುವ ಅಮೆರಿಕಕ್ಕೆ ಈ ನಿರ್ಣಾಯಕ ಹಂತದಲ್ಲಿ ಪಾಕಿಸ್ತಾನದ ಬೆಂಬಲ ಬೇಕಿದೆ. ತಾಲಿಬಾನ್ ಮತ್ತು ಪಾಕಿಸ್ತಾನದ ಸೇನೆಯು ಹಿತಕರ ಸಂಬಂಧವನ್ನು ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಬೀಜಿಂಗ್‌ನಲ್ಲಿ ನಡೆದ ಇತ್ತೀಚಿನ FATF ಸಭೆಯಲ್ಲಿ, ಭಯೋತ್ಪಾದನೆ ವಿರುದ್ಧ ಹೋರಾಡಲು ಕೈಗೊಂಡ ಕ್ರಮಗಳನ್ನು ಪಾಕಿಸ್ತಾನವು ಮುಂದಿಟ್ಟಿತ್ತು. ಈ ಕ್ರಮಕ್ಕೆ ಚೀನಾ, ಮಲೇಷ್ಯಾ ಮತ್ತು ಟರ್ಕಿಯ ಬೆಂಬಲ ದೊರಕಿತ್ತು. ವಾಷಿಂಗ್ಟನ್ ಕೂಡ ಪಾಕಿಸ್ತಾನದ ಪ್ರಗತಿ ವರದಿಯನ್ನು ಪ್ರಶ್ನಿಸಲಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಮತ್ತೊಂದು FATF ಸಭೆಯಲ್ಲಿ, ಪಾಕಿಸ್ತಾನವು ಕಾರ್ಯನಿರ್ವಹಿಸಬೇಕಾದ 27 ನಿಯತಾಂಕಗಳಲ್ಲಿ 22 ಅನುಸರಿಸಲು ವಿಫಲವಾಗಿದೆ. ಆ ಸಭೆಯಲ್ಲಿ ಇಸ್ಲಾಮಾಬಾದ್ ಅನ್ನು ಖಂಡಿಸಿ, ಭಯೋತ್ಪಾದಕ ಗುಂಪುಗಳಿಗೆ ಹಣದ ಹರಿವನ್ನು ತಡೆಯಲು ಪಾಕಿಸ್ತಾನ ವಿಫಲವಾದರೆ ಫೆಬ್ರವರಿಯಲ್ಲಿ ಅದನ್ನು ಕಪ್ಪುಪಟ್ಟಿಗೆ ಸೇರಿಸಬಹುದು ಎಂದು ಜಾಗತಿಕ ಭಯೋತ್ಪಾದನಾ ವಿರೋಧಿ ಹಣಕಾಸು ಸಂಸ್ಥೆ ಹೇಳಿದೆ.
ಪಾಕಿಸ್ತಾನವು ದೀರ್ಘಕಾಲದಿಂದ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಸತ್ಯವನ್ನು ಮರೆಮಾಚಿದೆ. FATFನ ‘ಬೂದು ಪಟ್ಟಿಯಲ್ಲಿ’ ಪಾಕಿಸ್ತಾನವು ಇದ್ದರೂ ಅದು ಭಯೋತ್ಪಾದಕ ಗುಂಪುಗಳಿಗೆ ತನ್ನ ಬೆಂಬಲವನ್ನು ಮುಂದುವರೆಸಿದೆ. ಕೇವಲ ಒಂದು ವರ್ಷದ ಹಿಂದೆ, ಭಾರತದ ಪಶ್ಚಿಮ ಗಡಿಯಿಂದ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರಿಂದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಲವತ್ತು ಭಾರತೀಯ ಸೈನಿಕರು ಹುತಾತ್ಮರಾದನ್ನು ಗಮನಿಸಬೇಕು. ಇದು ತೀವ್ರ ಉಲ್ಬಣಕ್ಕೆ ಕಾರಣವಾಗಿತ್ತು.
ಭಯೋತ್ಪಾದನೆಯನ್ನು ನೀತಿ ಸಾಧನವಾಗಿ ಬಳಸುವ ಇಸ್ಲಾಮಾಬಾದ್‌ನ ನೀತಿಯ ಬಗ್ಗೆ, ಜಾಗತಿಕ ಸಮುದಾಯವು ಸಕಾರಾತ್ಮಕ ಪಾತ್ರ ವಹಿಸುವ ಅಗತ್ಯವಿದೆ. ಆದ್ದರಿಂದ, ಮುಂಬರುವ FATF ಸಭೆಯಲ್ಲಿ US, UK, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಪಾತ್ರವು ನಿರ್ಣಾಯಕವಾಗಿರುತ್ತದೆ.
ಲೇಖನ: ಕೌಶಿಕ್ ರಾಯ್, ಸುದ್ದಿ ವಿಶ್ಲೇಷಕ, AIR,
Comments
Post a Comment