ಇಂಡಿಯಾ-ಪೋರ್ಚುಗಲ್ ಒಪ್ಪಂದಗಳಲ್ಲಿ ಹೊಸ ಅಧ್ಯಾಯ
ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೂಸಾ ಅವರಭಾರತದ ಭೇಟಿ ಯಶಸ್ವಿಯಾಗಿದೆ. ಈ ಪ್ರವಾಸದವಿಶೇಷತೆಯೆಂದರೆ ಭಾರತ ಮತ್ತು ಪೋರ್ಚಗೀಸ್ ದೇಶಗಳಿಗೆ ಪರಸ್ಪರ ಪ್ರಯೋಜನಕಾರಿಯಾಗುವ ಹಲವು ವಿಷಯಗಳ ಬಗ್ಗೆ ಚರ್ಚೆ ಆಗಿ ವಿಸ್ತಾರವಾದ ವ್ಯಾಪ್ತಿ ಹೊಂದಿರುವ 14 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಪೈಕಿ ಕಡಲ ಸಾರಿಗೆ ಮತ್ತುಬಂದರು ಅಭಿವೃದ್ಧಿ, ಸ್ಟಾರ್ಟ್ ಅಪ್‌ಗಳು, ಏರೋಸ್ಪೇಸ್,ರಾಜತಾಂತ್ರಿಕ ತರಬೇತಿ, ವೈಜ್ಞಾನಿಕ ಸಂಶೋಧನೆ ಮತ್ತುಸಾರ್ವಜನಿಕ-ನೀತಿ ಎಂಬವು ಮುಖ್ಯವಾದವು.
ಈ ಭೇಟಿ ಭಾರತ-ಪೋರ್ಚುಗಲ್ ಸಂಬಂಧಗಳ ಹೊಸ ಚೈತನ್ಯದಪ್ರತಿಬಿಂಬವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಈಸಂಬಂಧವನ್ನು ಸಂಪೂರ್ಣವಾಗಿ ಮರು ವ್ಯಾಖ್ಯಾನಿಸಲಾಗಿದೆಮತ್ತು ಪರಿವರ್ತಿಸಲಾಗಿದೆ. ಚರ್ಚೆಗೆ ಹೇಳುವುದಾದರೆ ಇದು ಭಾರತ ಮತ್ತು ಪೋರ್ಚುಗಲ್ ದೇಶಗಳು ತಮ್ಮ ದ್ವಿಪಕ್ಷೀಯಸಂಬಂಧಗಳ ಸಂಪೂರ್ಣ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಪರಸ್ಪರ ನಡೆಸುತ್ತಿರುವ ಕ್ಷಿಪ್ರ ರೂಪಾಂತರವಾಗಿದೆ.
ಈಗ ಜಾಗತಿಕ ಮತ್ತು ದ್ವಿಪಕ್ಷೀಯ ಸಮಸ್ಯೆಗಳು ಭಾರತದ ಮತ್ತುಪೋರ್ಚುಗಲ್ ಹಿತಾಸಕ್ತಿಗಳು ಒಂದಾಗುವಂತೆ ಮಾಡಿವೆ. ಜಗತ್ತು ಅನಿರೀಕ್ಷಿತ ಮತ್ತು ಬಾಷ್ಪಶೀಲ ದೋಷ-ರೇಖೆಗಳಿಂದಗುರುತಿಸಲ್ಪಟ್ಟಿದೆ. ಪೈಪೋಟಿಯನ್ನು ಬದಲಾಯಿಸುತ್ತಿರುವ ದೊಡ್ಡ ಶಕ್ತಿಗಳು, ಕುಂಠಿತಗೊಳ್ಳುತ್ತಿರುವ ಭೌಗೋಳಿಕ-ಆರ್ಥಿಕಮತ್ತು ಭೌಗೋಳಿಕ-ಕಾರ್ಯತಂತ್ರದ ಸ್ಪರ್ಧೆಯ ಒಳಹರಿವುಮತ್ತು ಆರ್ಥಿಕ ಬೆಳವಣಿಗೆ ಹಾಗೂ ಬೆಳೆಯುತ್ತಿರುವಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಭದ್ರತಾಬೆದರಿಕೆಗಳು ಜಾಗತಿಕ ಕಾರ್ಯತಂತ್ರದ ಚಿತ್ರಣವನ್ನುಹದಗೆಡಸಿವೆ. 21ನೇ ಶತಮಾನದ ಪ್ರಮುಖ ಸಂಗತಿಯಾಗಿರುವ ಜಾಗತೀಕರಣವು ಒಂದು ರೀತಿಯ ವಿರೋಧಿ ಅರ್ಥವನ್ನು ಪಡೆದುಕೊಂಡಿದೆ. ದೇಶಗಳನ್ನು ಒಳಮುಖವಾಗಿ ನೋಡುವಪ್ರವೃತ್ತಿ ಬೆಳೆಸಿಕೊಂಡಿರುವುದನ್ನು ರಾಷ್ಟ್ರೀಯತೆ ಎಂದು ಹೇಳಲಾಗುತ್ತಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯುಗ ಪ್ರವೇಶಿಸುವ ಪ್ರಸ್ತುತ ಸಂದರ್ಭದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನವನ್ನುದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಟ್ರಾನ್ಸ್-ಅಟ್ಲಾಂಟಿಕ್ಸಂಬಂಧದಲ್ಲಿ ಮೂಡಿರುವ ಬಿರುಕುಗಳು ಯುರೋಪ್ ಬಗೆಗಿನಅಮೆರಿಕಾ ಬದ್ಧತೆ ಬಗ್ಗೆ ಪ್ರಶ್ನೆಗಳು ಹುಟ್ಟಲು ಕಾರಣವಾಗಿವೆ. ಈಬೆಳವಣಿಗೆಗಳು ಹೊಸ ಪಾಲುದಾರಿಕೆ ಮತ್ತು ಜೋಡಣೆಗಳಿಗೆಆಸ್ಪದ ನೀಡಲಿವೆ.
ಸದ್ಯದ ಜಾಗತಿಕ ತಲ್ಲಣಗಳನ್ನು ನಿಭಾಯಿಸಲು ಜಾಗತಿಕವೇದಿಕೆಯಲ್ಲಿ ಭಾರತದ ಪ್ರಸ್ತುತವಾಗಿರುವುದು ಮತ್ತುಯುರೋಪಿಯನ್ ಯೂನಿಯನ್ ಮತ್ತು ನ್ಯಾಟೋನಲ್ಲಿಪೋರ್ಚುಗಲ್ ಸದಸ್ಯತ್ವ ಹೊಂದಿರುವುದು ಅನಿವಾರ್ಯವಾಗಿದೆ. ಕರೋನಾ ವೈರಸ್‌ನಂತಹ ಕಹಿ ಘಟನೆಗಳ ವಿಷಯದಲ್ಲಿ ಉದ್ಭವಿಸುವ ಸಹಜವಾದ ಆತಂಕಗಳನ್ನು ಪರಸ್ಪರ ಸಹಯೋಗದ ಮೂಲಕ ನಿಭಾಯಿಸಲು ತಾರ್ಕಿಕವಾಗಿ ಒಂದಾಗಬೇಕಾಗುತ್ತದೆ.
ಈ ಸನ್ನಿವೇಶದಲ್ಲಿ ಭಾರತ ಮತ್ತು ಪೋರ್ಚುಗಲ್ ಪರಸ್ಪರಪ್ರಮುಖ ಭದ್ರತಾ ಕಾಳಜಿಗಳ ಬಗ್ಗೆ ಅಪಾರವಾದ ಮೆಚ್ಚುಗೆಯನ್ನು ಹಂಚಿಕೊಂಡಿವೆ. 2005ರಲ್ಲಿ ಕುಖ್ಯಾತ ಭಯೋತ್ಪಾದಕ ಅಬು ಸಲೀಮ್ ನನ್ನು ಲಿಸ್ಬನ್ ನಿಂದ ಹಸ್ತಾಂತರಿಸಿದ್ದೂ ಅಲ್ಲದೆ ಪೋರ್ಚುಗೀಸ್ ಸಂಸತ್ತು 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ನಿಸ್ಸಂದಿಗ್ಧವಾಗಿಖಂಡಿಸಿತು. ಭಾರತವು ಎಲ್ಲಾ ಪ್ರಮುಖ ಬಹುಪಕ್ಷೀಯ ಸಂಸ್ಥೆಗಳಸದಸ್ಯತ್ವವನ್ನು ಪೋರ್ಚುಗಲ್ ಬೆಂಬಲಿಸಿದೆ ಹಾಗೂ ಚೊಚ್ಚಲ ಇಯು-ಭಾರತ ಶೃಂಗಸಭೆಯ ಪ್ರಮುಖ ರೂವಾರಿ ಇಯು ಜೊತೆಭಾರತ ದೃಢವಾದ ಒಪ್ಪಂದ ಮಾಡಿಕೊಳ್ಳಲು ಅಡಿಪಾಯಹಾಕಿದೆ. ಸದ್ಯ ಭದ್ರತೆಯ ಅವಿನಾಭಾವತೆಯನ್ನು ಭಾರತ ಮತ್ತುಪೋರ್ಚುಗಲ್ ಭೌಗೋಳಿಕವಾಗಿ ಹಿಂದೂ ಮಹಾಸಾಗರ ಮತ್ತುಅಟ್ಲಾಂಟಿಕ್ ಮಹಾಸಾಗರಕ್ಕೆ ಹೊಂದಿಕೊಂಡಿವೆ- ಇದು ವಾಸ್ಕೋಡಾ ಗಾಮಾ 500 ವರ್ಷಗಳ ಹಿಂದೆ ಬರಲು ಕಾರಣವಾಯಿತು-ಕಡಲ ಭದ್ರತಾ ಹಿತಾಸಕ್ತಿಗಳು ಬೆಳದದ್ದನ್ನೂ ಕಾಣಬಹುದು.
ಹಾಗೆಯೇ ಪೋರ್ಚುಗಲ್ ದೇಶ ಆವಿಷ್ಕರಿಸಿರುವ ಪರಿಸರವ್ಯವಸ್ಥೆ ಮತ್ತು ಜ್ಞಾನ ಆಧಾರಿತ ಆರ್ಥಿಕತೆಗಳು ಭಾರತದೊಂದಿಗೆ ಸಾಮ್ಯತೆ ಹೊಂದಿವೆ. ಲಿಸ್ಬನ್ ನಗರವು ಅಂತರ್ಜಾಲ, ಕೃತಕ ಬುದ್ದಿವಂತಿಕೆ, ಬ್ಲಾಕ್-ಚೈನ್ ಮತ್ತು ಇ-ಗವರ್ನೆನ್ಸ್ ವಿಷಯದಲ್ಲಿ ಅಪಾರವಾದ ಪ್ರಗತಿಯನ್ನು ಸಾಧಿಸಿದೆ. ಅಲ್ಲಿನ ಅತ್ಯಾಧುನಿಕತಂತ್ರಜ್ಞಾನದ ಏಕೀಕರಣದೊಂದಿಗೆ ತಂತ್ರಜ್ಞಾನ ಕಡಿಮೆ ಮಾಡಿಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಮೂಲಕ ಭಾರತದ ಆರ್ಥಿಕತೆಯನ್ನು ಆಧುನೀಕರಿಸುವ ಪ್ರಧಾನಿ ನರೇಂದ್ರಮೋದಿಯವರ ಅಭಿವೃದ್ಧಿ ಧ್ಯೇಯವಾಕ್ಯವನ್ನು ಬೆಸೆಯಬೇಕಾಗಿದೆ. ಹೀಗಾಗಿ ಪೋರ್ಚುಗೀಸ್ ಕಂಪನಿಗಳುಭಾರತದ ಪರಿವರ್ತಕ ಯೋಜನೆಗಳಾದ ಮೇಕ್ ಇನ್ ಇಂಡಿಯಾ,ಕ್ಲೀನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ಇಂಡಿಯಾದಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿವೆ. ಗಮನಾರ್ಹವಾದ ಸಂಗತಿ ಎಂದರೆ ಭಾರತವು ಪೋರ್ಚುಗೀಸ್ಕಂಪನಿಗಳಿಗೆ ಪ್ರಯೋಗ ಮಾಡಲು ಅವಕಾಶವನ್ನು ಕಲ್ಪಿಸುತ್ತಿದೆ. ಜೊತೆಗೆ ಭಾರತ ಮತ್ತು ಪೋರ್ಚುಗಲ್ ನಡುವೆ ನುರಿತಮಾನವಶಕ್ತಿಯ ವಿನಿಮಯದ ಬಗ್ಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಅಗತ್ಯತೆ ಎದ್ದು ಕಾಣುತ್ತಿದೆ. ಕಳೆದ ಎರಡುವರ್ಷಗಳಲ್ಲಿ ಭಾರತದಲ್ಲಿ ಪೋರ್ಚುಗೀಸ್ ಹೂಡಿಕೆಗಳುದ್ವಿಗುಣಗೊಂಡಿರುದು ಮತ್ತು ದ್ವಿಪಕ್ಷೀಯ ವ್ಯಾಪಾರವು 1ಬಿಲಿಯನ್ ಯುರೋಗಳನ್ನು ದಾಟಿರುವುದು ಈ ಸಕಾರಾತ್ಮಕಬೆಳವಣಿಗೆಯ ಪ್ರತಿಬಿಂಬವಾಗಿದೆ.
ಸದ್ಯದ ಪೋರ್ಚುಗಲ್‌ನ ವೆಚ್ಚ-ಸ್ಪರ್ಧಾತ್ಮಕ ಮತ್ತು ವ್ಯವಹಾರಸ್ನೇಹಿ ವಾತಾವರಣವು ಬ್ರಿಟನ್ ನಂತರದ ಬ್ರೆಕ್ಸಿಟ್ ಅನ್ನುಬದಲಿಸಲು ಪ್ರಮುಖ ಸ್ಪರ್ಧಿಯಾಗಿ ಮತ್ತು ಭಾರತೀಯಕಂಪನಿಗಳು ಯುರೋಪಿನ ಸಾಮಾನ್ಯ ಮಾರುಕಟ್ಟೆ ಪ್ರವೇಶ ಮಾಡಲು ಸಾಧ್ಯವಾಗುವಂತೆ ಕಂಡುಬರುತ್ತಿದೆ. ಕುತೂಹಲಕಾರಿ ಸಂಗತಿ ಎಂದರೆ ಲಿಸ್ಬನ್ ಸಾಂಪ್ರದಾಯಿಕ ನಾಯಕನಾಗಿರುವವಿಶ್ವದಾದ್ಯಂತ ಹರಡಿರುವ ‘ಲುಸೊಫೋನ್’ (ಪೋರ್ಚುಗೀಸ್ಮಾತನಾಡುವ) ದೇಶಗಳಲ್ಲಿ ಭಾರತೀಯ ಕಂಪನಿಗಳಿಗೆ ನೆಲೆಸ್ಥಾಪಿಸಲು ಪೋರ್ಚುಗಲ್ ಉತ್ತೇಜನ ನೀಡುತ್ತಿದೆ. ಈಲುಸೊಫೋನ್ ದೇಶಗಳಲ್ಲಿ ಜಂಟಿ ಇಂಡೋ-ಪೋರ್ಚುಗೀಸ್ಸಹಯೋಗದ ಸಾಮರ್ಥ್ಯವು ದೊಡ್ಡ ಪ್ರಮಾಣದಲ್ಲಿದೆ.
ಪೋರ್ಚಗೀಸ್ ಜನರಿಗೆ ಆರೋಗ್ಯ ಮತ್ತು ಆಧ್ಯಾತ್ಮಿಕತೆ ಬಗ್ಗೆ ಇರುವ ಆಕರ್ಷಣೆಗಳು, ಸಾಕರ್, ಪ್ರವಾಸೋದ್ಯಮ,ನವೀಕರಿಸಬಹುದಾದ ಇಂಧನ, ತ್ಯಾಜ್ಯ ನಿರ್ವಹಣೆ,ಸಮುದ್ರಶಾಸ್ತ್ರ, ರಕ್ಷಣಾ ಮತ್ತು ಕೃಷಿಯ ಹೊರತಾಗಿ ಯೋಗಮತ್ತು ಆಯುರ್ವೇದದ ವಿಷಯದಲ್ಲಿ ಆ ದೇಶದಲ್ಲಿ ಇರುವ ದ್ವಿಪಕ್ಷೀಯ ಸಹಕಾರದ ಹೊಸ ದೃಷ್ಟಿಕೋನಗಳು ಭಾರತೀಯರು ಅಲ್ಲಿಗೆ ದೊಡ್ಡ ಮಟ್ಟದಲ್ಲಿ ವಲಸೆ ಹೋಗಲು ಪೂರಕವಾಗಿವೆ.
ಆದ್ದರಿಂದ ಅಧ್ಯಕ್ಷ ಸೌಸಾ ಅವರ ಭೇಟಿ ಇಂಡೋ-ಪೋರ್ಚುಗೀಸ್ ದ್ವಿಪಕ್ಷೀಯ ಸಹಕಾರದ ಮೇಲ್ಮುಖ ಬೆಳವಣಿಗೆ ದೃಷ್ಟಿಯಿಂದ ಹೊಸ ಅಧ್ಯಾಯವಾಗಿದೆ.
ಸ್ಕ್ರಿಪ್ಟ್: ರಾಜೋರ್ಶಿ ರಾಯ್, ಸಂಶೋಧನಾ ವಿಶ್ಲೇಷಕ,ಐಡಿಎಸ್ಎ
Comments
Post a Comment