ತಾಲಿಬಾನ್ ನಿಂದ ಶಾಂತಿ ಪರೀಕ್ಷೆಯ ನಿರೀಕ್ಷೆಯಲ್ಲಿ ಯುಎಸ್

ಶಾಂತಿ ಒಪ್ಪಂದಕ್ಕೆ ತೆರೆ ಎಳೆಯುವ ಮುನ್ನ ಅಮೇರಿಕಾ ಮತ್ತು ತಾಲಿಬಾನ್ ತಾತ್ಕಾಲಿಕ ಕದನ ವಿರಾಮ ಘೋಷಿಸಲು ವಿಭಿನ್ನ ಸಮಯ ನಿಗದಿಪಡಿಸುವುದರೊಂದಿಗೆ ಅಫಘಾನ್ ಶಾಂತಿ ಪ್ರಕ್ರಿಯೆಯು ನಿರ್ಣಾಯಕ ಹಂತ ತಲುಪಿದಂತಾಗಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾಲಿಬಾನ್ ಜೊತೆ ಕದನ ವಿರಾಮದಂತಹ ಸೂಕ್ಷ್ಮ ವಿಷಯದ ಬಗ್ಗೆ ಮಾತನಾಡಲು ತಮ್ಮ ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್ಜಾದ್ ಅವರನ್ನು ನೇಮಿಸಿದಾಗಿನಿಂದ ಅನೇಕ ಏರಿಳಿತಗಳಾಗಿ ಈವರೆಗೆ ಇದ್ದ ವಿಶ್ವಾಸದ ಮಟ್ಟವೂ ಪರೀಕ್ಷೆಗೊಳಪಟ್ಟಿದೆ. ಈ ನಡುವೆ ಅಫ್ಘಾನಿಸ್ತಾನದ ನೆಲದಲ್ಲಿ ಎರಡೂ ದೇಶದದವರೂ ಯುದ್ಧದಲ್ಲಿ ಸಿಲುಕಿದ್ದಾರೆ.

ತಾಲೀಬಾನ್ ಏಳು ದಿನಗಳ ಕಾಲ ಕದನ ವಿರಾಮ ಕೇಳಿದರೆ ವಿರೋಧಾಭಾಸವೆಂಬಂತೆ ಯುಎಸ್ ಹತ್ತು ದಿನಗಳ ಅವಧಿ ಇರಬೇಕೆಂದು ಪಟ್ಟು ಹಿಡಿದಿದೆ. ಇಂಥ ಚೌಕಾಶಿ ವಿಧಾನವು ಕದನ ವಿರಾಮ ಘೋಷಿಸುವ ಕಠಿಣವಾದ ಪ್ರಕ್ರಿಯೆಯ ಭಾಗಗಳಲ್ಲಿ ಒಂದಾಗಿದೆ.

2019ರ ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷ ಟ್ರಂಪ್ ಅವರು ತಾಲಿಬಾನ್ ರಾಜಕೀಯ ನಿಯೋಗಕ್ಕೆ ಮತ್ತು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಅವರಿಗೆ ಅಮೇರಿಕಾದಲ್ಲಿ ಆತಿಥ್ಯ ವಹಿಸಲು ಒಪ್ಪಿಕೊಂಡಾಗ ಶಾಂತಿ ಮಾತುಕತೆಯು ನಾಟಕೀಯ ತಿರುವು ಪಡೆದುಕೊಂಡಿತು. ಆದಾಗ್ಯೂ ಶಾಂತಿ ಮಾತುಕತೆಯ ಸ್ಥಿತಿಯನ್ನು ಪರಿಗಣಿಸದೆ ಕಾಬೂಲ್ ಸಮೀಪದ ಮಿಲಿಟರಿ ನೆಲೆಯ ಮೇಲೆ ತಾಲಿಬಾನ್ ನಿಂದ ನಡೆದ ದಾಳಿ ವೈಫಲ್ಯವಾಗಿದೆ.

ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಚೀನಾ, ರಷ್ಯಾ, ಇರಾನ್ ಮತ್ತು ಸೌದಿ ಅರೇಬಿಯಾ ದೇಶಗಳು ಹಲವಾರು ತಿಂಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನ ನಡೆಸಿದವು. ಈಗ ಮತ್ತೊಮ್ಮೆ ನಿರ್ಣಾಯಕ ಹಂತ ತಲುಪಿದೆ. ಈ ಬಗ್ಗೆ ಸೆಪ್ಟೆಂಬರ್‌ನಲ್ಲಿ ಸಿದ್ಧಪಡಿಸಿರುವ ಕರಡು ಒಪ್ಪಂದದ ಬಗ್ಗೆ ಎರಡೂ ಕಡೆಯಿಂದ ಆಶ್ವಾಸನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅದೇ ಕರಡನ್ನು ಯಾವುದೇ ಬದಲಾವಣೆಗಳಿಲ್ಲದೆ ಮಂಡಿಸಲಾಗುತ್ತದೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ. ಈ ನಡುವೆ ಅಂತಿಮ ಮಾತುಕತೆ ನಡೆಯುವ ಮುನ್ನ ಪೂರಕ ವಾತಾವರಣ ನಿರ್ಮಿಸಬೇಕಾದ ಅವಶ್ಯಕತೆಯಿದೆ.

ಶಾಂತಿ ಒಪ್ಪಂದದ ಕುರಿತು ಮಾತುಕತೆಗೆ ಮುಂದಾದರೆ ಹೋರಾಟವನ್ನು ನಿಲ್ಲಿಸಲಿದೆ ಎಂಬ ಬಗ್ಗೆ ತಾಲೀಬಾನ್ ಪುರಾವೆಗಳನ್ನು ಪ್ರದರ್ಶಿಸಲಿ ಎಂದು ಅಮೇರಿಕಾ ನಿರೀಕ್ಷೆ ಮಾಡುತ್ತಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ. "ಒಪ್ಪಂದ ಮಾಡಿಕೊಳ್ಳುವ ಮೊದಲು ರಾಜಿಗೆ ಮುಂದಾಗಿದ್ದೆವು: ಪರಸ್ಪರ ಮಾತುಕತೆಗಾಗಿ ಸಿದ್ದಪಡಿಸಲಾಗಿದ್ದ ದಾಖಲೆ ಪತ್ರಗಳು ಹಾಗೇ ಉಳಿದಿವೆ, ತಾಲಿಬಾನ್ ಗೆ ಈ ಬಗೆಗಿನ ತನ್ನ ಇಚ್ಛಾಶಕ್ತಿ ಅಥವಾ ಸಾಮರ್ಥ್ಯವನ್ನು ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಮತ್ತು ಹಿಂಸಾಚಾರವನ್ನು ಕಡಿಮೆ ಮಾಡಿದ್ದೇವೆ ಎಂದು ಸಾಬೀತುಪಡಿಸುವುದಕ್ಕೂ ಸಾಧ್ಯವಾಗಲಿಲ್ಲ" ಎಂದು ಪೊಂಪಿಯೊ ಹೇಳಿದ್ದಾರೆ.

ಯುಎಸ್ ತೆಗೆದುಕೊಂಡಿರುವ ಈ ನಿಲುವು ಅಫಘಾನಿಸ್ತಾನದ ಅಧ್ಯಕ್ಷ ಘನಿ ಅವರೊಂದಿಗೆ ಸಂಕೀರ್ಣವಾದ ಮಾತುಕತೆಗಳನ್ನು ಪ್ರಾರಂಭಿಸಲು ಸಜ್ಜುಗೊಳಿಸುವ ರಾಜಕೀಯ ಬದ್ಧತೆಯನ್ನು ಸೂಚಿಸುತ್ತದೆ. ಅಲ್ಲದೆ ಇದು ದೇಶೀಯ ಶಾಂತಿ ಪ್ರಕ್ರಿಯೆಯ ನಿರ್ಮಾಣವನ್ನು ಖಚಿತಪಡಿಸುವ ದೃಷ್ಟಿಯಿಂದ ಅಗತ್ಯವಾಗಿದೆ. ಅಂತಿಮವಾಗಿ ದಶಕಗಳ ಅಫಘಾನ್ ಯುದ್ಧವನ್ನು ಕೊನೆಗೊಳಿಸಲಿದೆ.

ಈ ಒಪ್ಪಂದವು ಅಫ್ಘಾನಿಸ್ತಾನ ಮತ್ತು ದಕ್ಷಿಣ ಏಷ್ಯಾ ಪ್ರದೇಶದ ಮೇಲೆ ಬೀರುವ ದೀರ್ಘಕಾಲೀನ ಪ್ರಭಾವದಿಂದಾಗಿ ಶಾಂತಿಗೆ ಪ್ರದರ್ಶಿಸಬಹುದಾದ ಬದ್ಧತೆಯು ಅಮೇರಿಕಾದ ಬೇಡಿಕೆಯ ಭಾಗವಾಗಿದೆ. ಇನ್ನೂ ಕೆಲ ಭದ್ರತಾ ತಜ್ಞರು ತಾಲೀಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದ್ದಾರೆ; ಕತಾರ್‌ನ ದೋಹಾ ಮೂಲದ ಸಂಘಟನೆಯ ರಾಜಕೀಯ ಸಮಾಲೋಚನಾ ತಂಡದ ನಡುವೆ ಯುಎಸ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪ್ರಮುಖ ರಾಜಕೀಯ ನ್ಯಾಯಸಮ್ಮತೆ ಬಂದಂತಾಗಿದೆ.

ಇಲ್ಲಿಯವರೆಗೂ ಮಾತುಕತೆ ಬಗ್ಗೆ ಅಫ್ಘಾನಿಸ್ತಾನ ಸರ್ಕಾರ ಜಾಗರೂಕ ವಿಧಾನವನ್ನು ಕಾಯ್ದುಕೊಂಡಿದೆ. ಅಫಘಾನ್ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಅಮ್ರುಲ್ಲಾ ಸಲೇಹ್ ಅವರು ತಾಲಿಬಾನ್ ಬಗ್ಗೆ ಟೀಕಿಸುವುದರಲ್ಲಿ ನಿಸ್ಸಂದಿಗ್ಧರಾಗಿದ್ದಾರೆ ಮತ್ತು ಈ ಕ್ರಮವನ್ನು ಅವಲಂಬಿಸುವುದಿಲ್ಲ ಎಂದು ಪದೇ ಪದೇ ಹೇಳಿದ್ದಾರೆ. ಹಿಂಸಾತ್ಮಕ ರಾಜಕೀಯದ ಗುರಿಗಳನ್ನು ಸಾಧಿಸಲು ತಾಲಿಬಾನ್ ಮೊದಲು ನಿರರ್ಥಕತೆಯನ್ನು ಒಪ್ಪಿಕೊಳ್ಳಬೇಕು ಎಂದು ಸಲೇಹ್ ಹೇಳಿದ್ದಾರೆ. ಯುಎಸ್ ಮತ್ತು ತಾಲಿಬಾನ್ ನಡುವೆ ಈ ರೀತಿಯ ಒಪ್ಪಂದ ಮಾಡಿಕೊಳ್ಳಲು ಯಶಸ್ವಿಯಾಗಿದ್ದರೂ ಸಹ ಯುಎಸ್ ಚುನಾವಣೆಗೆ ಮುಂಚಿತವಾಗಿ ಅದು ಅಸಾಧ್ಯ ಎಂಬುದನ್ನು ಅಫಘಾನಿಸ್ತಾನದ ಪ್ರಮುಖ ಹೂಡಿಕೆದಾರರ ಇಂತಹ ಹೇಳಿಕೆಗಳು ಧ್ವನಿಸುತ್ತಿವೆ.

ತಮ್ಮ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆಯಿಂದ ಹೆಚ್ಚು-ಕಡಿಮೆ ಅಪಾಯದಿಂದ ಪಾರಾಗಿರುವ ಅಧ್ಯಕ್ಷ ಟ್ರಂಪ್ ಸದ್ಯ ಸುರಕ್ಷಿತ ಸ್ಥಾನದಲ್ಲಿದ್ದಾರೆ. ಅಲ್ಲದೆ ತಾಲಿಬಾನ್‌ನಿಂದ ಮತ್ತೊಮ್ಮೆ ದ್ರೋಹಕ್ಕೆ ಒಳಗಾಗುವ ಮೂಲಕ ಅವರ ದೇಶೀಯ ರೇಟಿಂಗ್‌ಗೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿಲ್ಲ. 2020ರ ಜನವರಿ 3ರಂದು ಇರಾನ್ ಜನರಲ್ ಸೊಲೈಮಾನಿ ಹತ್ಯೆಯಾದ ನಂತರ ಇರಾನ್ ಮತ್ತು ಯುಎಸ್ ನಡುವೆ ಹೊಸ ವರಸೆ ಶುರುವಾಗಿದ್ದು ಪೊಂಪಿಯೊ ಅವರು ತಾಲೀಬಾನ್ ನಿಂದ ನಿರೀಕ್ಷೆ ಮಾಡುತ್ತಿರುವ ಪುರಾವೆಗಳ ಪ್ರದರ್ಶನ ಕೂಡ ಸಾಧ್ಯವಿಲ್ಲ. ಈ ನಡುವೆ ದೀರ್ಘಕಾಲದ ಯುದ್ಧಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಆತ್ಮವಿಶ್ವಾಸವನ್ನು ಯು.ಎಸ್. ಅಧ್ಯಕ್ಷರು ಹೊಂದಿದ್ದಾರೆ.

ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ಯಾವುದೇ ಶಾಂತಿ ಪ್ರಕ್ರಿಯೆಯು ಅಫಘಾನ್ ನೇತೃತ್ವದಲ್ಲಿರಬೇಕು ಮತ್ತು ಅಫಘಾನ್ ಒಡೆತನದಲ್ಲಿರಬೇಕು ಎಂದು ಭಾರತವು ಸಮರ್ಥಿಸಿಕೊಂಡಿದೆ. ಭಾರತವು ಶಾಂತಿಯುತ ಮತ್ತು ಸುರಕ್ಷಿತ ಅಫ್ಘಾನಿಸ್ತಾನವನ್ನು ನೋಡಲು ಬಯಸುತ್ತದೆ. ಆದರೆ ನವದೆಹಲಿಯು ಭಯೋತ್ಪಾದಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸುವುದಿಲ್ಲ ಅಥವಾ ಅವಲಂಬಿಸುವುದಿಲ್ಲ ಎಂಬ ನಿಲುವಿಗೆ ಬದ್ದವಾಗಿದೆ.

ತಾಲಿಬಾನ್ ಮತ್ತು ಯುಎಸ್ ನಡುವಿನ ಒಪ್ಪಂದಗಳು ಯಾವ ರೀತಿಯಲ್ಲಿ ಮುಂದುವರಿಯುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.


ಸ್ಕ್ರಿಪ್ಟ್: ಕಲ್ಲೋಲ್ ಭಟ್ಟಾಚೆರ್ಜಿ, ವಿಶೇಷ ವರದಿಗಾರ, ದಿ ಹಿಂದು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ