ಬ್ಲೂ ಡಾಟ್ ಉಪಕ್ರಮ - ಇಂಡೋ-ಪೆಸಿಫಿಕ್‌ಗೆ ಹೊಸ ಸಾಧ್ಯತೆಗಳಿಗೆ ಅವಕಾಶ
ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಅವರ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಚರ್ಚೆಗಳಲ್ಲಿ “ಬ್ಲೂ ಡಾಟ್” ನೆಟ್‌ವರ್ಕ್ ಪ್ರಮುಖವಾದ ವಿಷಯವಾಗಿತ್ತು.
ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಸಮಾಲೋಚನೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ “ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಸಾಲ ನೀಡುವವರು ಮತ್ತು ಸಾಲ ತೆಗೆದುಕೊಳ್ಳುವವರಿಗಾಗಿ ಸರ್ಕಾರೀ ಸಾಲ ಬೆಳೆಯುವುದನ್ನು ತಡೆಹಿಡಿಯಲು, ಜವಾಬ್ದಾರಿಯುತ, ಪಾರದರ್ಶಕ ಮತ್ತು ಸುಸ್ಥಿರ ಹಣಕಾಸು ಅಭ್ಯಾಸಗಳನ್ನು ಖಾತ್ರಿಪಡಿಸುವುದು ಮುಖ್ಯ ಎಂದು ಅಮೆರಿಕ ಮತ್ತು ಭಾರತ ಗುರುತಿಸಿವೆ. ಜಾಗತಿಕ ಮೂಲಸೌಕರ್ಯ ಅಭಿವೃದ್ಧಿಗೆ ಉನ್ನತ-ಗುಣಮಟ್ಟದ ವಿಶ್ವಾಸಾರ್ಹ ಮಾನದಂಡಗಳನ್ನು ಉತ್ತೇಜಿಸಲು, ಸರ್ಕಾರ, ಖಾಸಗಿ ವಲಯ ಮತ್ತು ನಾಗರಿಕ ಸಮಾಜವನ್ನು ಒಟ್ಟಿಗೆ ತರುವ ಬಹು-ಪಾಲುದಾರರ ಉಪಕ್ರಮವಾದ ಬ್ಲೂ ಡಾಟ್ ನೆಟ್‌ವರ್ಕ್ ಪರಿಕಲ್ಪನೆಯಲ್ಲಿ ಶ್ರೀಟ್ರಂಪ್ ಮತ್ತು ಭಾರತೀಯ ಪ್ರಧಾನಿ ಆಸಕ್ತಿ ವ್ಯಕ್ತಪಡಿಸಿದರು” ವ್ಯಕ್ತವಾಗಿದೆ. ಭಾರತವು ಬ್ಲೂ ಡಾಟ್ ನೆಟ್‌ವರ್ಕ್‌ಗೆ ಸೇರುವ ಸಾಧ್ಯತೆಯನ್ನೂ ಪರಿಗಣಿಸುತ್ತಿದೆ.
ಸ್ಪಷ್ಟವಾಗಿ ಹೇಳುವುದಾದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ, ವಿದೇಶಿ-ಅನುದಾನಿತ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ನಿಯಮಗಳು ಮತ್ತು ಗುಣಮಟ್ಟಗಳನ್ನು ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಬ್ಲೂ ಡಾಟ್ ನೆಟ್‌ವರ್ಕ್‌ನ ಉದ್ದೇಶವಾಗಿದೆ. ಗಮನಾರ್ಹವಾಗಿ, ಇಂಡೋ-ಪೆಸಿಫಿಕ್ನಲ್ಲಿ, ವಿಶೇಷವಾಗಿ ಏಷ್ಯಾದಲ್ಲಿ, ಸ್ವೀಕರಿಸುವ ದೇಶಗಳ ಮೇಲೆ ಭಾರಿ ಸಾಲಗಳಿಗೆ ಕಾರಣವಾಗಿರುವ ಮೂಲಸೌಕರ್ಯ ಹೂಡಿಕೆ ಪದ್ಧತಿಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಎರಡೂ ಕಳವಳ ವ್ಯಕ್ತಪಡಿಸಿವೆ. 2013ರಲ್ಲಿ ಒನ್ ಬೆಲ್ಟ್, ಒನ್ ರೋಡ್ (OBOR) ಉಪಕ್ರಮದಲ್ಲಿ ಪ್ರಾರಂಭಿಸಲಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI)ನ ಅಡಿಯಲ್ಲಿ ಚೀನಾದಿಂದ ಪಡೆದ ಸಾಲವನ್ನು ಮರುಪಾವತಿಸುವ ಬಗ್ಗೆ ಶ್ರೀಲಂಕಾ, ಮಾಲ್ಲ್ಡೀವ್ಸ್ ಮತ್ತು ಮಲೇಷ್ಯಾದಂತಹ ದೇಶಗಳು ಸವಾಲುಗಳನ್ನು ಎದುರಿಸುತ್ತಿವೆ.
2019ರ ನವೆಂಬರ್‌ನಲ್ಲಿ, ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕ ದೇಶಗಳು ಬ್ಯಾಂಕಾಕ್‌ನ ಇಂಡೋ-ಪೆಸಿಫಿಕ್ ಬಿಸಿನೆಸ್ ಫೋರಂನಲ್ಲಿ ಪ್ರಾರಂಭಿಸಿದ ಬ್ಲೂ ಡಾಟ್ ನೆಟ್‌ವರ್ಕ್, ಸಣ್ಣ ಮತ್ತು ಕಡಿಮೆ-ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಾಲ-ಬಲೆ, ಪಾರದರ್ಶಕತೆಯ ಕೊರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲಿನ ಹೂಡಿಕೆಗಳಲ್ಲಿನ ಸುಸ್ಥಿರತೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ಗುರಿಯನ್ನು ಹೊಂದಿದೆ. ಬ್ಲೂ ಡಾಟ್ ನೆಟ್‌ವರ್ಕ್‌ನ ಒಂದು ಪ್ರಮುಖ ಲಕ್ಷಣವೆಂದರೆ, ‘ಸಂಭಾವ್ಯ ಸ್ವೀಕರಿಸುವವರು’ ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು, ಸಾಲವನ್ನು ಒದಗಿಸುವ ಏಜೆನ್ಸಿಗಳನ್ನು ನಿಷ್ಪಕ್ಷಪಾತವಾಗಿ ಮತ್ತು ಸಾರ್ವಜನಿಕವಾಗಿ ಕೆಲವು ನಿಯತಾಂಕಗಳಲ್ಲಿ ಮಾಪನ ಮಾಡುವುದಾಗಿದೆ.
ಚೀನಾದ ಬೆಲ್ಟ್ ಮತ್ತು ರಸ್ತೆ ಉಪಕ್ರಮಕ್ಕೆ ಪ್ರತಿಯಾಗಿ ಜನಪ್ರಿಯವಾಗಿ ಕಂಡುಬರುವ ಅಮೆರಿಕ ಉಪಕ್ರಮಕ್ಕೆ AusAID (ಆಸ್ಟ್ರೇಲಿಯಾ), ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಮತ್ತು ಅಮೆರಿಕ ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮದಿಂದ ಧನಸಹಾಯ ನೀಡಲಾಗುವುದು. ಇಂಡೋ-ಪೆಸಿಫಿಕ್ನಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಖಾಸಗಿ ವಲಯವನ್ನು ಸಜ್ಜುಗೊಳಿಸುವ ಉದ್ದೇಶವನ್ನು ಈ ಉಪಕ್ರಮವು ಹೊಂದಿದ್ದು, ಬ್ಲೂ ಡಾಟ್ ನೆಟ್‌ವರ್ಕ್ ಉಪಕ್ರಮದಲ್ಲಿ ಇದು ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. 50 ಶತಕೋಟಿ ಅಮೇರಿಕಾ ಡಾಲರ್ಸ್ ಗೂ ಹೆಚ್ಚಿನ ಮೌಲ್ಯದ ಹಣವನ್ನು ನಿಗಮವು ಒಟ್ಟುಗೂಡಿಸಿದೆ ಎಂದು ವರದಿಯಾಗಿದೆ. ಇದಲ್ಲದೆ, ಇದು ಅಮೇರಿಕ ಕಾಂಗ್ರೆಸ್ಸಿನ ಬೆಂಬಲವನ್ನು ಸಹ ಪಡೆದುಕೊಂಡಿದೆ. ಮಾಪನ ವ್ಯವಸ್ಥೆಯು ಇಂಡೋ-ಪೆಸಿಫಿಕ್ ಪ್ರದೇಶದ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಮೇರಿಕದ ಖಾಸಗಿ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಅನುಕೂಲವಾಗಲಿದ್ದು, ಖಾಸಗಿ ಅಮೆರಿಕ ಹೂಡಿಕೆದಾರರಿಗೆ ಮತ್ತು ಅವರ ಸ್ವೀಕರ್ತ ದೇಶಗಳಿಗೆ ‘ಗೆಲುವು-ಗೆಲುವಿನ ಪರಿಸ್ಥಿತಿ’ ಇದರಿಂದಾಗಿ ಸೃಷ್ಟಿಯಾಗುತ್ತದೆ.
ಬ್ಲೂ ಡಾಟ್ ನೆಟ್‌ವರ್ಕ್ ಉಪಕ್ರಮವು ಇನ್ನೂ ಆರಂಭಿಕ ಹಂತದಲ್ಲಿದ್ದು, ಮುಂಬರುವ ತಿಂಗಳುಗಳಲ್ಲಿ ಅದು ಹೇಗೆ ರೂಪಗೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ. ಆ ಸಂದರ್ಭದಲ್ಲಿ ‘ಸುರಕ್ಷಿತ’ ಮೂಲಸೌಕರ್ಯ ಯೋಜನೆಯ ಸಮಗ್ರ ಮತ್ತು ಸಾರ್ವತ್ರಿಕವಾಗಿ ಒಪ್ಪುವಂತಹ ಸ್ಪಷ್ಟ ಅರ್ಥವಿವರಣೆ ಹೊರಡಿಸುವುದು ಒಂದು ಪ್ರಮುಖ ಸವಾಲಾಗಿದೆ. ಆದಾಗ್ಯೂ, ಸಂಭಾವ್ಯ ಯೋಜನೆಗಳ ಪಾರದರ್ಶಕತೆ ಮತ್ತು ಆರ್ಥಿಕ ಸುಸ್ಥಿರತೆಯ ಅವಳಿ ವಿಷಯಗಳ ಬಗ್ಗೆ ತೀಕ್ಷ್ಣವಾದ ಗಮನವನ್ನು ನೀಡುವುದರಿಂದ, ಸ್ವೀಕರಿಸುವ ದೇಶಗಳು ಮೂಲಸೌಕರ್ಯ ಅಭಿವೃದ್ಧಿಗೆ ವಿದೇಶಿ ಹೂಡಿಕೆಯನ್ನು ಆಹ್ವಾನಿಸುವಲ್ಲಿ ಸಂಭವನೀಯ ಅಪಾಯಗಳು ಮತ್ತು ಅವಕಾಶಗಳನ್ನು ಅರ್ಥಮಾಡಿಕೊಳ್ಳಲು ಮಾಪನ ವ್ಯವಸ್ಥೆಯು ಸಹಾಯ ಮಾಡುತ್ತದೆ ಎಂಬುದು ಸ್ಪಷ್ಟವಾಗಿದೆ.
ಸಾಮಾನ್ಯವಾಗಿ ಅಭಿವೃದ್ಧಿಶೀಲ ಜಗತ್ತು ಮತ್ತು ವಿಶೇಷವಾಗಿ ಏಷ್ಯಾವು ಬೃಹತ್ ಮೂಲಸೌಕರ್ಯ ಕೊರತೆಗಳನ್ನು ಎದುರಿಸುತ್ತಿದೆ. ಏಷ್ಯಾದ ದೇಶಗಳು ತಮ್ಮ ಮೂಲಸೌಕರ್ಯ ಸಂಪರ್ಕದ ಉದ್ದೇಶಗಳನ್ನು ಅರಿತುಕೊಳ್ಳಲು ಮತ್ತು ತಮ್ಮ ಜನಸಂಖ್ಯೆಯ ಅತ್ಯುತ್ತಮ ಅಭಿವೃದ್ಧಿಯನ್ನೂ ಖಚಿತಪಡಿಸಿಕೊಳ್ಳಲು, ಅಂತಹ ಕೊರತೆಯನ್ನು ತುಂಬಲು ವರ್ಷಕ್ಕೆ 1.7 ಟ್ರಿಲಿಯನ್ ಅಮೆರಿಕ ಡಾಲರ್ ನಷ್ಟು ಮೌಲ್ಯದ ಹೂಡಿಕೆಗಳು, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ ಪ್ರಕಾರ ಬೇಕಾಗುತ್ತವೆ.
ಬ್ಲೂ ಡಾಟ್ ನೆಟ್‌ವರ್ಕ್ ಭಾರತಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿದೆ. ತನ್ನದೇ ಆದ ದೇಶೀಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಹೂಡಿಕೆಯ ಮಾದರಿಯನ್ನು ಭಾರತವು ಪ್ರಯೋಗಿಸುತ್ತಿದೆ. ಈ ಸನ್ನಿವೇಶದಲ್ಲಿ, ಬ್ಲೂ ಡಾಟ್ ನೆಟ್‌ವರ್ಕ್ ಮೂಲಕ ಬೆಂಬಲಿತವಾದ ಖಾಸಗಿ ಮತ್ತು ರಾಜ್ಯ-ಹೂಡಿಕೆಯ ಜವಾಬ್ದಾರಿಯುತ ಮತ್ತು ಸಮತೋಲಿತ ಮಿಶ್ರಣವು, ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ಅಂತರವನ್ನು ನಿವಾರಿಸಲು ಅತ್ಯುತ್ತಮ ಅವಕಾಶವಾಗಿದೆ.
ಲೇಖನ: ಡಾ. ರಾಹುಲ್ ಮಿಶ್ರಾ, ಆಗ್ನೇಯ ಮತ್ತು ಪೂರ್ವ ಏಷ್ಯಾದ ಕಾರ್ಯತಂತ್ರದ ವಿಶ್ಲೇಷಕ

Comments
Post a Comment